ಮಗುವಿನೊಂದಿಗೆ ಮಹಿಳೆ ಕಾಣೆ

ಹಗರಿಬೊಮ್ಮನಹಳ್ಳಿ;ಏ.08 ತಾಲೂಕಿನ ತಂಬ್ರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ನಂದಿಪುರ ಗ್ರಾಮದಿಂದ ತನ್ನ ಒಂದುವರೆ ವರ್ಷದ ಮಗುವಿನೊಂದಿಗೆ ಮಹಿಳೆ ಕಾಣೆಯಾಗಿರುವ ಘಟನೆ ನಡೆದಿದೆ.
ಶ್ರೀಮತಿ ಜ್ಯೋತಿ(25) ಗಂಡ ಅಕ್ಕಜ್ಜ ಸುಡುಗಾಡು ಸಿದ್ದರ ಜನಾಂಗ,ಬಟ್ಟೆ ಬಳೆ ವ್ಯಾಪಾರ,ವಾಸ ನಂದಿಪುರ ಗ್ರಾಮ, ಮನೆಯಿಂದ ಹೊರಡುವಾಗ ನೀಲಿ ಬಣ್ಣದ ನೈಟಿ ಧರಿಸಿದ್ದು ಕನ್ನಡ ಓದಲು ಬರೆಯಲು, ಹಾಗೂ ತೆಲುಗು ಮಾತನಾಡಲು ಬರುತ್ತಿದ್ದು ತಿಳಿ ಮೈಬಣ್ಣ, ಕೋಲು ಮುಖ,4*8 ಅಡಿ ಎತ್ತರ ಇದ್ದಾಳೆ. ಮಗು ಅನ್ನಪೂರ್ಣ 1 ವರ್ಷ 6ತಿಂಗಳು ಗೋದಿ ಮೈಬಣ್ಣ ದುಂಡು ಮುಖ,ಟೀಷರ್ಟಹಾಕಿದ್ದು 2 ಅಡಿ ಎತ್ತರ ಇದ್ದಾಳೆ. ಈ ಮೇಲ್ಕಂಡ ಚಹರೆ ಗುರುತಿನ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ತಂಬ್ರಹಳ್ಳಿ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 08397-249205 ಅಥವಾ 9480803066 ಮೊಬೈಲ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಂಬ್ರಹಳ್ಳಿ ಪಿಎಸ್‍ಐ ಮಾರುತಿ ತಿಳಿಸಿದ್ದಾರೆ.