ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ

ಶಿವಮೊಗ್ಗ,ಮೇ.೨೮-ಯಾವುದೇ ಅಧಿಕಾರಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂಬುದು ನಿಯಮ. ಆದರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಮಾತ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿ, ಮಗಳ ಹುಟ್ಟುಹಬ್ಬಕ್ಕೆ ಸಂತೋಷ ಕೂಟದಲ್ಲಿ ಭಾಗವಹಿಸುವಂತೆ ಸೂಚಿಸಿದ ಸುತ್ತೋಲೆ ಟೀಕೆಗೆ ಒಳಗಾಗಿ ಈಗ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವಂತ ಕುವೆಂಪು ವಿವಿಯ ಪ್ರೊ.ಬಿ.ಪಿ ವೀರಭದ್ರಪ್ಪ ಅವರ ಸುತ್ತೋಲೆಯೇ ಈಗ ವಿವಾದಕ್ಕೆ ಬಿಂದುವಾಗಿದೆ .ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ನನ್ನ ಮಗಳಾದಂತ ಕು.ಆಕಾಂಕ್ಷ.ಬಿ.ವಿ ಜನ್ಮದಿನದ ಪ್ರಯುಕ್ತ ದಿನಾಂಕ ೨೮-೦೫-೨೦೨೩ರ ಇಂದು ಮಧ್ಯಾಹ್ನ ೧೨.೩೦ಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕುಲಪತಿಗಳ ಗೃಹದಲ್ಲಿ ಸಂತೋಷಕೂಟವನ್ನು ಏರ್ಪಡಿಸಿದೆ ಎಂದಿದ್ದಾರೆ.
ಎಲ್ಲಾ ಬೋಧಕವರ್ಗ, ಬೋಧಕೇತರ ನೌಕರರು, ಅತಿಥಿ ಉಪನ್ಯಾಸಕರು, ವಿಶ್ವವಿದ್ಯಾನಿಲಯದ ಏಜೆನ್ಸಿ ನೌಕರರು ಈ ಸಂತೋಷದ ಕೂಟಕ್ಕೆ ಹಾಜರಾಗಬೇಕೆಂದು ಕೋರಲಾಗಿದೆ. ಅಲ್ಲದೆ ಇದನ್ನು ವೈಯುಕ್ತಿಕ ಆಹ್ವಾನವೆಂದು ಪರಿಗಣಿಸಿ ಎಲ್ಲರೂ ಈ ಆಚರಣೆಯಲ್ಲಿ ಭಾಗವಹಿಸುವಂತೆ ಕೋರುವುದಾಗಿ ತಿಳಿಸಿದ್ದಾರೆ.
ಕುವೆಂಪು ವಿವಿ ಕುಲಪತಿಗಳ ಈ ಸುತ್ತೋಲೆ ಪೋಟೋ ವೈರಲ್ ಆಗಿದೆ. ಈ ಸುತ್ತೋಲೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವಂತ ಹಲವರು, ಇದು ಅಧಿಕಾರಿಯ ದುರಂಹಕಾರ ನಡೆಯಾಗಿದೆಅಧಿಕಾರ ದುರುಪಯೋಗ ಪಡಿಸಿಕೊಂಡು ಕುವೆಂಪು ವಿವಿ ಕುಲಸಚಿವರು ಈ ಸುತ್ತೋಲೆ ಹೊರಡಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ