ಮಗಳು ಪತಿಯನ್ನು ಪ್ರಧಾನಿ ಮಾಡಿದ್ದಾಳೆ: ಸುಧಾಮೂರ್ತಿ

ಲಂಡನ್/ಬೆಂಗಳೂರು,ಏ.28- ತನ್ನ ಮಗಳು ಅಕ್ಷತಾ ಮೂರ್ತಿ ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ ಹಾಗು ಇನ್ಪೋಸಿಸ್ ಪ್ರತಿಷ್ಠಾನದ ಆದ್ಯಕೆ ಡಾ. ಸುಧಾಮೂರ್ತಿ ಹೇಳಿದ್ದಾರೆ.

ಸುಧಾ ಮೂರ್ತಿ ಅವರು ತಮ್ಮ ಮಗಳಿಂದಾಗಿ ರಿಷಿ ಸುನಕ್ ಇಂಗ್ಲೆಂಡ್‍ನ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ,ಇದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ.

ವೀಡಿಯೊದಲ್ಲಿ ಸುಧಾಮೂರ್ತಿ ಅವರು “ನಾನು ನನ್ನ ಪತಿಯನ್ನು ಉದ್ಯಮಿ ಮಾಡಿದ್ದೇನೆ, ನನ್ನ ಮಗಳು ತನ್ನ ಪತಿಯನ್ನು ಇಂಗ್ಲೆಂಡ್ ಪ್ರಧಾನಿಯನ್ನಾಗಿ ಮಾಡಿದ್ದಾಳೆ. ತಾಯಿಯಾಗಿ ಹೆಮ್ಮೆ ಇದೆ ಎಂದಿದ್ದಾರೆ

“ಹೆಂಡತಿಯ ಮಹಿಮೆಯೇ ಅಂತಹುದು. ಹೆಂಡತಿ ಗಂಡನನ್ನು ಹೇಗೆ ಬದಲಾಯಿಸುತ್ತಾಳೆ ನೋಡಿ. ಆದರೆ ನನ್ನ ಗಂಡನನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ನಾನು ನನ್ನ ಗಂಡನನ್ನು ಉದ್ಯಮಿ ಮಾಡಿದೆ, ನನ್ನ ಮಗಳು ಪತಿಯನ್ನು ಪ್ರಧಾನಿ ಮಾಡಿದ್ದಾಳೆ” ಹೇಳಿದ್ದಾರೆ.

ಪ್ರತಿ ಗುರುವಾರ ಉಪವಾಸ:

ತಮ್ಮ ಕುಟುಂಬ ಪ್ರತಿ ಗುರುವಾರ ಉಪವಾಸ ಮಾಡುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಿದೆ ಎಂದು ಅವರು ಹೇಳುತ್ತಾರೆ.

“ಹೌದು, ಗುರುವಾರ ಏನು ಶುರು ಮಾಡಬೇಕು, ಅವರು ಗುರುವಾರ ಇನ್ಫೋಸಿಸ್ ಪ್ರಾರಂಭಿಸಿದರು, ಅಷ್ಟೇ ಅಲ್ಲ, ನಮ್ಮ ಮಗಳನ್ನು ಮದುವೆಯಾದ ನಮ್ಮ ಅಳಿಯ ತಮ್ಮ ಪೂರ್ವಜರ ಕಾಲದಿಂದ 150 ವರ್ಷಗಳಿಂದ ಇಂಗ್ಲೆಂಡ್‍ನಲ್ಲಿದ್ದಾರೆ, ಆದರೆ ಅವರು ತುಂಬಾ ಧಾರ್ಮಿಕರು.ಮದುವೆಯಾದ ಮೇಲೆ ಗುರುವಾರ ಏನಾದ್ರೂ ಶುರು ಮಾಡ್ತೀರಾ ಎಂದು ಕೇಳಿದೆ.ನಾವು ರಾಘವೇಂದ್ರ ಸ್ವಾಮಿಗಳ ಬಳಿ ಹೋಗುತ್ತೇವೆ ಅಂದರು.

ಹೀಗಾಗಿ ಪ್ರತಿ ಗುರುವಾರ ಉಪವಾಸ ಮಾಡುತ್ತಾರೆ.ನಮ್ಮ ಅಳಿಯನ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರೆ ಆದರೆ ನಮ್ಮ ಅಳಿಯ ಗುರುವಾರ ಉಪವಾಸ ಮಾಡುತ್ತಾರೆ, ”ಎಂದು ಅವರು ಹೇಳಿದರು.

ರಿಷಿ ಸುನಕ್ 2009 ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು ಮತ್ತು ಕಳೆದ ವರ್ಷ ಇಂಗ್ಲೆಂಡ್‍ನ ಅತಿ ಕಿರಿಯ ಪ್ರಧಾನಿಯಾಗಿ ಆಯ್ಕೆಯಾಗಿದ್ಧಾರೆ.

ವಿಶ್ವದ ಅತ್ಯಂತ ಶ್ರೀಮಂತ ಶತಕೋಟ್ಯಾಧೀಶ್ವರ ಒಬ್ಬರ ಮಗಳು ಮತ್ತು ಸುಮಾರು 730 ದಶಲಕ್ಷ ಪೌಂಡ್ ವೈಯಕ್ತಿಕ ಸಂಪತ್ತನ್ನು ಹೊಂದಿರುವ ಅಕ್ಷತಾ ಮೂರ್ತಿ ಶಕ್ತಿಶಾಲಿ ಮಹಿಳೆ. ಆಕೆಯ ಪೆÇೀಷಕರು, ಭಾರತ ಮೂಲದವರು.ಮತ್ತು ಶತಕೋಟಿ ಮೌಲ್ಯದ ಟೆಕ್ ಕಂಪನಿ ಹೊಂದಿದ್ದಾರೆ,

ಅಕ್ಷತಾ ಮೂರ್ತಿಯವರ ತಂದೆ ನಾರಾಯಣ ಮೂರ್ತಿ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇನ್ಫೋಸಿಸ್ ಟೆಕ್ ಕಂಪನಿಯ ಸ್ಥಾಪಕರು. ರಿಷಿ ಸುನಕ್ ಅವರು 42 ನೇ ವಯಸ್ಸಿನಲ್ಲಿ ಆಧುನಿಕ ಇತಿಹಾಸದಲ್ಲಿ ಇಂಗ್ಲೆಂಡ್‍ನ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ ಮತ್ತು ಕೇವಲ ಏಳು ವರ್ಷಗಳಲ್ಲಿ ಪ್ರಧಾನಿಯಾದ ಸಂಸದ ಎನ್ನುವ ಹಿರಿಮೆ ಪಾತ್ರರಾಗಿದ್ದಾರೆ.