ಮಗನ ಪ್ರಾಣ ಉಳಿಸಿದ ಅಮ್ಮನ ಮೊಬೈಲ್ ಕರೆ

ಬೆಂಗಳೂರು,ಮಾ.೩-ಬೆಂಗಳೂರಿನ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಇಡೀ ಬೆಂಗಳೂರು ಜನತೆ ಬೆಚ್ಚಿ ಬಿದ್ದಿದ್ದಾರೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಈ ಸ್ಪೋಟಕ್ಕೆ ಬಲಿಯಾಗಬೇಕಿದ್ದ ಯುವಕನ ಜೀವವನ್ನು ಅಮ್ಮನ ಆ ಒಂದು ಮೊಬೈಲ್ ಕರೆ ೨೪ ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ನ ಪ್ರಾಣ ಉಳಿಸಿದ ಘಟನೆ ಜರುಗಿದೆ.
ಈ ಕುರಿತು ಬಿಹಾರದ ಪಾಟ್ನಾ ಮೂಲದ ಕುಮಾರ್ ಅಲಂಕೃತ್ ಕುಮಾರ್ ಎಂಬಾತ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.
ನಾನು ನಿನ್ನೆ ರಾಮೇಶ್ವರಂ ಕೆಫೆಗೆ ತಿಂಡಿ ತಿನ್ನಲು ಹೋಗಿದ್ದೆ. ನಾನು ದೋಸೆ ತೆಗೆದುಕೊಂಡು ನಾನು ನನ್ನ ನೆಚ್ಚಿನ ಸ್ಥಳದಲ್ಲೇ ತಿನ್ನಲು ಕುಳಿತೆ. ದೋಸೆ ತಿನ್ನುವಾಗ ಅಮ್ಮನ ಫೋನ್ ಬಂದಿದೆ . ಗದ್ದಲದ ನಡುವೆ ಕೆಫೆಯಲ್ಲಿ ಸರಿಯಾಗಿ ಮಾತು ಕೇಳದ ಕಾರಣ ಅಮ್ಮನ ಜೊತೆ ಮಾತನಾಡಲು ನಾನು ದೋಸೆ ತಿನ್ನುವುದನ್ನು ಬಿಟ್ಟು ಹೊರಗೆ ಬಂದೆ ಎಂದಿದ್ದಾರೆ.
ನಾನು ರಾಮೇಶ್ವರಂ ಕೆಫೆಯಿಂದ ೧೦ ಮೀಟರ್ ದೂರದಲ್ಲಿ ನಿಂತು ನನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ, ನಾನು ಈ ದೊಡ್ಡ ಶಬ್ದವನ್ನು ಕೇಳಿದೆ, ಅಲ್ಲಿ ದೊಡ್ಡ ಮಟ್ಟದ ಸ್ಫೋಟ ವಾಗಿತ್ತು. ಎಲ್ಲರೂ ಭಯಭೀತರಾಗಿ ಹೊರಗೆ ಓಡಿಹೋದರು. ಎಲ್ಲೆಂದರಲ್ಲಿ ಹೊಗೆ ಆವರಿಸಿತು ಮತ್ತು ಸ್ಥಳದಿಂದ ದುರ್ವಾಸನೆ ಬರಲಾರಂಭಿಸಿತು ಎಂದು ಘಟನೆಯನ್ನು ವಿವರಿಸಿದ್ದಾರೆ.
ಒಟ್ಟಿನಲ್ಲಿ ಅಮ್ಮನ ಫೋನ್ ಕರೆಯಿಂದಾಗಿ ನಾನು ಸ್ಫೋಟದಲ್ಲಿ ಬಜಾವ್ ಆದೆ ಎಂದು ಹೇಳಿಕೊಂಡಿದ್ದಾನೆ.