ಮಗನ ನೆನಪಲ್ಲಿ ಸಮಾಜಮುಖಿ ಕೆಲಸ

ಮಾಲೂರು, ಜ.೩: ಹುಂಗೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ ಅವರು ಅಪಘಾತದಲ್ಲಿ ಮಗನನ್ನು ಕಳೆದುಕೊಂಡರು ಸಹ ಪ್ರತಿವರ್ಷ ಮಗನ ಜ್ಞಾಪಕಾರ್ಥಕವಾಗಿ ಹಲವು ರೀತಿಯ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಲಿಂಗಾಪುರ ಗ್ರಾಮದ ಬಳಿ ವಿಕ್ರಂ ಅವರ ಸ್ಮರಣಾರ್ಥ ೭ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ವಿಕ್ರಂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಿಂಗಾಪುರ ಕೃಷ್ಣಪ್ಪ ಅವರು ಹಮ್ಮಿಕೊಂಡಿದ್ದ ವಿವಿಧ ರೀತಿಯ ಸೇವಾ ಕಾರ್ಯಕ್ರಮಗಳು ವಿತರಿಸಿ ಮಾತನಾಡಿ,ತಮ್ಮ ಮಗನ ರೀತಿ ಬೇರೆ ಯಾರೋಬ್ಬರೂ ಅಪಘಾತದಲ್ಲಿ ಜೀವ ಕಳೆದುಕೊಳ್ಳ ಬಾರದೆಂದು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ಗಳನ್ನು ವಿತರಿಸುತ್ತಾರೆ. ಪುತ್ರರನ್ನು ಕಳೆದುಕೊಂಡ ಇವರಿಗೆ ದೇವರು ದುಃಖವನ್ನು ಬರಿಸುವ ಶಕ್ತಿ ನೀಡಲಿ ಇದೇ ರೀತಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳು ಮುಂದುವರೆಯಲಿ ಎಂದರು.
ಕೋಲಾರ ಶಾಸಕ ಕೊತ್ತೂರು ಮಂಜು ಮಾತನಾಡಿ ಕಿಟ್ಟಿ ಅವರು ಅಪಘಾತದಲ್ಲಿ ತನ್ನ ಪುತ್ರರನ್ನು ಕಳೆದುಕೊಂಡರು ಸಹ ಸತತವಾಗಿ ೭ ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ಹಮ್ಮಿ ಕೊಳ್ಳುವ ಮೂಲಕ ತಮ್ಮ ಮಗನನ್ನು ಸ್ಮರಿಸುತ್ತಾರೆ. ಪ್ರತಿ ವರ್ಷ ನಿರಂತರವಾಗಿ ರಕ್ತದಾನ ಶಿಬಿರ ಅನ್ನದಾನ ಬಡ ವಿದ್ಯಾರ್ಥಿಗಳ ಲ್ಯಾಪ್ ಟಾಪ್, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್, ಕ್ಯಾಲೆಂಡರ್, ವಿತರಣೆ ಮಾಡುವುದರ ಮೂಲಕ ಜನರಲ್ಲಿ ತಮ್ಮ ಮಗನನ್ನು ಕಾಣುತ್ತಿದ್ದಾರೆ ಎಂದರು.ವಿಧಾನಪರಿಷತ್ ಸದಸ್ಯ ಎಂ.ಎಲ್.ಸಿ ಅನಿಲ್ ಕುಮಾರ್ ಮಾತನಾಡಿ ಲಿಂಗಾಪುರ ಕಿಟ್ಟಿಯವರು ತನ್ನ ಪುತ್ರನ ಮರಣದಂತೆ ಮತ್ತೊಬ್ಬರ ಜೀವಕ್ಕೆ ತೊಂದರೆ ಆಗಬಾರದೆಂದು ಭಾವಿಸಿ ಕಳೆದ ಏಳು ವರ್ಷಗಳಿಂದ ಜಾಗೃತಿ ಮೂಡಿಸಿ ಹಲವು ರೀತಿಯ ಸೌಲತ್ತುಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಂದರು ರಕ್ತದಾನ ಶಿಬಿರ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.
೬೦ ಅಂಗನವಾಡಿ ಕೇಂದ್ರಗಳಿಗೆ ಅಲ್ಮೇರಾ ವಿತರಣೆ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ರಕ್ತದಾನ ಮಾಡಿದವರಿಗೆ ಹೆಲ್ಮೆಟ್ ವಿತರಿಸಲಾಯಿತು.
ವಿಕ್ರಂ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ, ಬಗರ್ ಹುಕುಂ ಅಧ್ಯಕ್ಷ ಹನುಮಂತಪ್ಪ, ತಹಶೀಲ್ದಾರ್ ಕೆ ರಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೈರಾರೆಡ್ಡಿ, ಮುಖಂಡರಾದ ಸಂಪತ್, ನವೀನ್, ನಾಗರಾಜ್, ಚಾಂದ್, ತಿಮ್ಮೇಗೌಡ, ನಾಗರಾಜ್, ಅಬ್ಬಯ್ಯಪ್ಪ, ಹನುಮಂತರೆಡ್ಡಿ, ವಿಕ್ರಂ ಚಾರಿಟೇಬಲ್ ಟ್ರಸ್ಟ್ ನ. ಗೌರವ ಅಧ್ಯಕ್ಷ ಗೋವರ್ಧನ್ ರೆಡ್ಡಿ, ಉಪಾಧ್ಯಕ್ಷ ಓಬಳರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸುಧಾಕರ್, ನಿರ್ದೇಶಕರಾದ ಹುಂಗೇನಹಳ್ಳಿ ಸಂಪತ್ ಕುಮಾರ್ ಗೌಡ, ಲಕ್ಷ್ಮಣ್, ಚಂದ್ರಶೇಖರ್ ಯಾದವ್, ರವಿ ಅಂಬರೀಶ್ ಕುಮಾರ್, ಕೆ.ಎಸ್ ನಾರಾಯಣಸ್ವಾಮಿ, ಮುನಿರಾಜು, ಮಲ್ಲಿಕಾರ್ಜುನ, ಮಂಜುನಾಥ್, ಪವನ್, ಲಕ್ಕೂರು ಅಂಬರೀಶ್, ಇನ್ನಿತರರು ಹಾಜರಿದ್ದರು.