ಮಗನನ್ನು ರಾಜಕೀಯಕ್ಕೆ ತರ್ತಾರ ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.21: ನಿನ್ನೆ ದಿನ ನಗರದಲ್ಲಿ ನಡೆದ ಬಿಜೆಪಿಯ  ಎಸ್ಟಿ ಸಮಾವೇಶದಲ್ಲಿ ಶ್ರೀರಾಮುಲು ಅವರು ತಮ್ಮ ಮಗ ಧನುಷ್ ನನ್ನು ಪಕ್ಷದ ಮುಖಂಡರಿಗೆ ಪರಿಚಯಿಸಿದ್ದು. ಹಿಂದೆ  ಕರೆದುಕೊಂಡು ಓಡಾಡಿದ್ದನ್ನು ಕಂಡರೆ.  ಆತನನ್ನು  ರಾಜಕೀಯಕ್ಕೆ ತರ್ತಾರ ಎಂಬ ಮಾತುಗಳು ಕೇಳಿ ಬರತೊಡಗಿವೆ.
ವೇದಿಕೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮಗನನ್ನು ಶ್ರೀರಾಮುಲು ಪರಿಚಯಿಸಿದರು. ಅಷ್ಟೇ ಅಲ್ಲದೆ ಸಮಾವೇಶಕ್ಕೆ ಬಂದ ಬಹುತೇಖ ಗಣ್ಯರಿಗೆ ಪರಿಚಯಿಸಿದರು‌.
ಕಳೆದ ನಗರ ಪಾಲಿಕೆ ಚುನಾವಣೆಯಲ್ಲಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ‌ಮಗ ಶ್ರವಣಕುಮಾರ ರೆಡ್ಡಿಯನ್ನು  ಕಣಕ್ಕಿಳಿಸಿ ರಾಜಕೀಯ ಪ್ರವೇಶ ಮಾಡಿಸಿದ್ದಾರೆ.
ಈಗ ಶ್ರೀರಾಮುಲು‌ ತಮ್ಮ ಪುತ್ರನನ್ನು ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಕಣಕ್ಕಿಳಿಸೋ ಪ್ಲಾನ್ ಮಾಡಿಕೊಂಡು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
 ಹೀಗಂದಿದ್ರು:
ಈ ಹಿಂದೆ ಸಚಿವ ಶ್ರೀರಾಮುಲು ಅವರು ನಿಮ್ಮ ಪತ್ನಿ ಅವರನ್ನು ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಸುತ್ತೀರ ಎಂದು ಕೇಳಿದಾಗ.   ನಮ್ಮ ಕುಟುಂಬದಲ್ಲಿ ನಾನೊಬ್ಬನೆ ರಾಜಕೀಯ ಮಾಡ್ತೇನೆ. ಪತ್ನಿ ಮಗ ಬರೋಲ್ಲ ಎಂದಿದ್ದರು. ಆದರೆ ಕಾಲಾಯ ತಸ್ಮೈ ನಮಃ