ಮಕ್ಕಳ ಹಕ್ಕು ಸಂಸತ: ವಿದ್ಯಾರ್ಥಿ ವೆಂಕಟೇಶ ಆಯ್ಕೆ

ವಾಡಿ:ನ.3: ಕಲಬುರಗಿ ಜಿಲ್ಲಾಡಳಿತ, ಮಾರ್ಗದರ್ಶಿ ಸಂಸ್ಥೆ, ಮಕ್ಕಳ ಸಹಾಯವಾಣಿ -1098 ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕಲಬುರಗಿಯ ಸೇಠ ಶಂಕರಲಾಲ ಲಾಹೋಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಸಂಸತ್-2022ನಲ್ಲಿ ವಿದ್ಯಾರ್ಥಿ ವೆಂಕಟೇಶ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಕಾರ್ಯಕ್ರಮದಲ್ಲಿ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿ ವೆಂಕಟೇಶ ತಂದೆ ಬಸವರಾಜ ಈ ಭಾಗದ ಮಕ್ಕಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರ ಮೂಲಕ ತನ್ನ ವಿಷಯವನ್ನು ಮಂಡಿಸಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಕ್ಕಳ ಹಕ್ಕುಗಳ ಕುರಿತು ಸಂವಾದ ಮಾಡಲಿದ್ದಾನೆ ಎಂದು ಶಿಕ್ಷಕ ಸಿದ್ಧಲಿಂಗ ತಿಳಿಸಿದರು. ವಿದ್ಯಾರ್ಥಿಯ ಈ ಸಾಧನೆಗೆ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಪೂಜ್ಯ ಸಿದ್ಧಲಿಂಗ ದೇವರು, ಉಪಾಧ್ಯಕ್ಷರಾದ ಚೆನ್ನಣ್ಣ ಬಾಳಿ, ಕಾರ್ಯದರ್ಶಿಗಳಾದ ಡಾ.ಗುಂಡಣ್ಣ ಬಾಳಿ, ಸದಸ್ಯರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಶಿವಲಿಂಗಪ್ಪ ವಾಡೇದ, ದುರ್ಗಯ್ಯ ಕಲಾಲ್,ಅಣ್ಣಾರಾವ ಬಾಳಿ, ಈಶ್ವರ ಬಾಳಿ, ಸಿದ್ದಲಿಂಗೇಶ ಜ್ಯೋತಿ, ಪ್ರಾಚಾರ್ಯರಾದ ಕೆ.ಐ.ಬಡಿಗೇರ, ವಿದ್ಯಾಧರ ಖಂಡಾಳ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹರ್ಷವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.