ಮಕ್ಕಳ ಹಕ್ಕುರಕ್ಷಣೆ ಮಾಡುತ್ತಿರುವ ಪಾದಯಾತ್ರೆ ತಡೆಯುವ ಪ್ರಯತ್ನ; ಆರೋಪ

ದಾವಣಗೆರೆ.ಫೆ.೨೨: ಆರುಷಿ ಯೋಜನೆಯ ದಾಖಲೆಗಳನ್ನು ಪರಿಶೀಲಿಸಿ, ಸೂಕ್ತ ವರದಿಯನ್ನು ನೀಡುವಂತೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹೆಣ್ಣು ಭ್ರೂಣ  ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆಗಳ ರೂವಾರಿ ಸಿ.ಎಂ. ಜಕ್ಕಾಳಿ ಸುದ್ದಿಗೋಷ್ಠಿ ಮೂಲಕ ಮನವಿ ಮಾಡಿದರು.ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಮಾಡುತ್ತಿರುವ ಪಾದಾಯಾತ್ರೆಯ ಮನವಿಯನ್ನು ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾಗಿದೆ.  ವರದಿ ನೀಡುವಂತೆ ಮಹಿಳಾ ಇಲಾಖೆಗೆ ವರ್ಗಾಯಿಸಲಾಗಿದ್ದು, ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದರಿಂದ ಪಾದಯಾತ್ರೆಗೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.ಮಕ್ಕಳ ಹಕ್ಕು ರಕ್ಷಣೆಗೆಗಾಗಿ ಮಾಡುತ್ತಿರುವ ಪಾದಯಾತ್ರೆಯನ್ನು ಪರೋಕ್ಷವಾಗಿ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ವರದಿಯನ್ನು ನೀಡಲು ತಮಗೆ ಯಾವುದೇ ಮಾಹಿತಿ ಅಥವಾ ದಾಖಲೆಗಳು ಬೇಕಾದಲ್ಲಿ ಹೊನ್ನಾಳಿ ಕಛೇರಿಯಲ್ಲಿ ಸಭೆಯನ್ನು ಕರೆಯುವುದು. ಸೂಕ್ತ ದಾಖಲೆಗಳೊಂದಿಗೆ ತಮಗೆ ವಿವರಣೆಯನ್ನು ನೀಡಲಾಗುವುದು. ವರದಿ ನೀಡಲು ತಡವಾದಲ್ಲಿ ಆಗಸ್ಟ್ ಕೊನೆಯಲ್ಲಿ ಪಾದಯಾತ್ರೆ ಕೈಗೊಳ್ಳುವುದು ಶತಸಿದ್ಧ. ಮುಂದೆ ಏನೇ ಆದರೂ  ಉಪನಿರ್ದೇಶಕರೇ ಕಾರಣವಾಗಲಿದ್ದಾರೆ ಎಂದು ಜಕ್ಕಾಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಂಜಾನಾಯ್ಕ ಹನುಮಸಾಗರ, ಕಿರಣ್ ಹೊನ್ನಾಳಿ ಉಪಸ್ಥಿತರಿದ್ದರು.