ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ

ಗಂಗಾವತಿ ಜ.8: ತಾಲೂಕಿನ ಸಾಣಾಪುರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಗ್ರಾ.ಪಂ. ವತಿಯಿಂದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ನಡೆಯಿತು.
8ನೇ ತರಗತಿ ವಿದ್ಯಾರ್ಥಿನಿ ರತ್ನ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಹನ್ಮಂತಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗುರುಲಿಂಗಮ್ಮ, ಆರೋಗ್ಯ ಇಲಾಖೆಯ ಹನುಮಂತಪ್ಪ, ಬಾಳಮ್ಮ, ಪೊಲೀಸ್ ಇಲಾಖೆಯ ಶಿವಕುಮಾರ್, ನಂದಿಹಳ್ಳಿ, ಸಾಣಾಪುರ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಶಿಕ್ಷಕ ಮೆಹಬೂಬ್ ನಿರೂಪಿಸಿದರು. ಶಿಕ್ಷಕ ಕೊಟ್ರೇಶ್ ವಂದಿಸಿದರು. ಕರಿಯಮ್ಮನಗಡ್ಡಿ ಶಾಲೆಯ ಶಿಕ್ಷಕ ಚನ್ನಕೇಶವ ನಾಯ್ಕ ಡಿ. ಸ್ವಾಗತಿಸಿದರು.