ಮಕ್ಕಳ ಹಕ್ಕುಗಳ ರಕ್ಷಣೆ? ತಾಯಂದಿರ ಜವಾಬ್ದಾರಿ’ ಕಾರ್ಯಾಗಾರ

ಮೈಸೂರು, ಡಿ.28: ಮೂಲಭೂತ ಸವಲತ್ತುಗಳ ಅವಶ್ಯಕತೆ ಇರುವ ಸಮುದಾಯಗಳಿಗಾಗಿ ಕೆಲಸ ಮಾಡುತ್ತಿರುವ ವಿ-ಕೇರ್ (ವಿಷನ್ ಫಾರ್ ಕಲ್ಚರ್ ಆಟ್ರ್ಸ್ ಅಂಡ್ ರಿಸರ್ಚ್ ಎನ್ಹಾನ್ಸ್ಮೆಂಟ್) ಸಂಸ್ಥೆಯು ಗುರುತಿಸಿರುವ ಅಗತ್ಯಗಳ ಪೂರೈಕೆಯ ಮೊದಲ ಹಂತವಾಗಿಮಕ್ಕಳ ಹಕ್ಕುಗಳರಕ್ಷಣೆ? ತಾಯಂದಿರ ಜವಾಬ್ದಾರಿಗಳು’ ಎಂಬ ಒಂದು ದಿನದ ಕಾರ್ಯಾಗಾರವನ್ನು ಹೂಟಗಳ್ಳಿಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜಿ.ಪಂ ಸದಸ್ಯೆ ಚಂದ್ರಿಕಾ ಸುರೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಿಳೆಯರ ಸಾಮಥ್ರ್ಯ ಅಗಾಧವಾದದ್ದು. ಈ ಸಾಮಥ್ರ್ಯವನ್ನು ಸಮಾಜಮುಖಿಯಾಗಿ ಬಳಸಿದರೆ ಅಭಿವೃದ್ಧಿ ಸುಗಮ. ಈ ನಿಟ್ಟಿನಲ್ಲಿ ವಿ-ಕೇರ್ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಶೋಭ ಗೌಡ ಮಾತನಾಡಿ ವಿ-ಕೇರ್ ಸಂಸ್ಥೆಯೊಡನೆ ತಮ್ಮ ಒಡನಾಟವನ್ನು ವಿವರಿಸಿದರಲ್ಲದೆ ಸಂಸ್ಥೆ ಸೂಕ್ಷ್ಮವಾಗಿ ಸಮಾಜದ ಅವಶ್ಯಕತೆಗಳನ್ನು ಗುರುತಿಸಿ ಬಹಳ ಶ್ರದ್ಧೆಯಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇತರೆ ಸಂಸ್ಥೆಗಳಿಗೂ ಈ ಮಾರ್ಗ ಮಾದರಿಯಾಗಬೇಕು ಎಂದರು. ಸಂಪನ್ಮೂಲವ್ಯಕ್ತಿ ಯಾಗಿ ಆಗಮಿಸಿದ್ದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಕ್ಕಳ ಹಕ್ಕುಗಳು ಮತ್ತು ಅವುಗಳ ಪ್ಚರಸ್ತುತತೆಯ ಕುರಿತು ತಿಳಿಸಿಕೊಟ್ಟರು.
ಆರ್ ಎಲ್ ಹೆಚ್ ಪಿ ಸಂಸ್ಥೆಯ ನಿರ್ದೇಶಕರಾದ ಸರಸ್ವತಿ ಮಾತನಾಡಿ ಸಾಮಾಜಿಕ ಆಯಾಮದಲ್ಲಿ ಮಹಿಳೆಯರ ಜವಾಬ್ದಾರಿಗಳನ್ನು ವ ವಿವರಿಸಿದರಲ್ಲದೆ ಕೆಲವು ಸತ್ಯ ಘಟನೆಗಳು ವಿವರಿಸಿದರು.
ವಿ-ಕೇರ್ ನ ಸಂಸ್ಥಾಪಕಾಧ್ಯಕ್ಷರಾದ ಡಾ.ಕುಮುದಿನಿ ಅಚ್ಚಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಯೋಜನಾ ನಿರ್ವಹಣಾಧಿಕಾರಿ ಲಿಜಿನಾ ನಿರೂಪಿಸಿದರು. 30ಮಂದಿ ತಾಯಂದಿರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.