ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು

ಹರಿಹರ.ನ.೧೪: ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಆರ್. ಹೇಳಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ನಗರದ ಗುರು ತಿಪ್ಪೇರುದ್ರಸ್ವಾಮಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಹಕ್ಕುಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಹ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಜೊತೆಗೆ ಹೆತ್ತವರಿಗೆ ಮತ್ತು ಪಾಠ ಕಲಿಸಿದ ಶಿಕ್ಷಕರಿಗೆ ವಿಶೇಷ ಗೌರವ ನೀಡಿ ನಿಮ್ಮ ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳಳ್ಳಬೇಕು ಎಂದರು. ಹೆಚ್ಚವರಿ ಸಿವಿಲ್ ನ್ಯಾಯಾಧೀಶರಾದ ಮಹದೇವ ಕಾನಟಿ ಮಾತನಾಡಿ, ಬಾಲಕಾರ್ಮಿಕ ಪದ್ದತಿ, ಬಾಲ್ಯ ವಿವಾಹ, ಭ್ರೂಣ ಪತ್ತೆ-ಹತ್ಯೆ, ಭಿಕ್ಷಾಟನೆ ನಿಷೇಧ ಕಾಯ್ದೆಗಳನ್ನು ಹಾಗೂ ಉಚಿತ-ಕಡ್ಡಾಯ ಶಿಕ್ಷಣ, ಬಾಲನ್ಯಾಯ ಕಾಯಿದೆ, ದತ್ತಕ ನಿರ್ವಹಣೆ ಕಾಯ್ದೆ ಮುಂತಾದ ಕಾಯಿದೆಗಳನ್ನು ಮಕ್ಕಳ ಹಿತಕ್ಕಾಗಿ ರೂಪಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳ ಮೇಲಾಗಬಹುದಾದ ದೈಹಿಕ ಶಿಕ್ಷೆ, ಮಾನಸಿಕ ಹಿಂಸೆಗಳನ್ನೂ ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು. ವಕೀಲರಾದ ಜಿ.ಹೆಚ್.ಭಾಗೀರಥಿ ಮಾತನಾಡಿ, ಭಾಗೀರಥಿ ಎಲ್ಲಾ ಮಕ್ಕಳಿಗೂ ಪೌಷ್ಠಿಕ ಆಹಾರ ಸೇವಿಸುವ, ಉತ್ತಮ ಪರಿಸರ-ಆರೋಗ್ಯ ಹೊಂದುವ, ಶಿಕ್ಷಣ, ಭದ್ರತೆ, ಆಟ, ಮನರಂಜನೆ ಪಡೆಯುವ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರö್ಯವಿದ್ದು, ಇವುಗಳನ್ನು ಯಾರೇ ಕಿತ್ತುಕೊಂಡರೂ ಅಪರಾಧವಾಗುತ್ತದೆ. ತಂದೆ-ತಾಯಿಗಳೂ ಸಹ ಮಕ್ಕಳನ್ನು ತಮ್ಮ ಖಾಸಗೀ ಆಸ್ತಿ ಎಂಬಂತೆ ಮನಬಂದಂತೆ ನಡೆಸಿಕೊಂಡರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.ವಕೀಲರಾದ ಲೋಹಿತಾ ವಿ. ಮಾತನಾಡಿ, ಮಕ್ಕಳು ಸಾಧ್ಯವಾದಷ್ಟು ಕಾನೂನು-ನಿಯಮಗಳನ್ನು ತಿಳಿದುಕೊಂಡು ಪಾಲಿಸಬೇಕು. ಮೂಢನಂಬಿಕೆ ಕೈಬಿಡುವಂತೆ ಪೋಷಕರ ಮನವೊಲಿಸುವುದರ ಮೂಲಕ ಮಾದರಿ ವಿದ್ಯಾರ್ಥಿಗಳಾಗಬೇಕೆಂದು ಕರೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ರುದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸಾಕಮ್ಮ, ಸಂಘದ ಕಾರ್ಯದರ್ಶಿ ಗಣೇಶ್.ಕೆ.ದುರ್ಗದ, ಎಪಿಪಿ ಪ್ರವೀಣ್ ಕುಮಾರ್, ವಕೀಲರಾದ ಚಂದ್ರಾಚಾರಿ, ಮುಖ್ಯಶಿಕ್ಷಕ ಬಿ.ಬಿ.ರೇವಣನಾಯ್ಕ, ಶಿಕ್ಷಕರಾದ ಎಂ.ನಾಗರಾಜ, ಗಿರಿಜ, ಕೆ.ಇ.ಹೊನಕೇರಪ್ಪ, ಎಂ.ಮAಜುನಾಥ, ಸಿ.ಮಂಜುನಾಥಪ್ಪ, ಆರ್.ಜಿ.ಮರುಘರಾಜೇಂದ್ರ, ಶಿಕ್ಷಣ ಸಂಯೋಜಕರಾದ ತೀರ್ಥಪ್ಪ, ಲಿಂಗರಾಜು, ಗಿರೀಶ್ ಇತರರಿದ್ದರು.