ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.14: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಮತ್ತು ಸುಸ್ತಿರ ಅಭಿವೃದ್ದಿ ಕುರಿತು ತರಬೇತಿ ಕಾರ್ಯಗಾರ ಹಾಗೂ ಮಕ್ಕಳ ಹಕ್ಕುಗಳ ಪೊಸ್ಟರ್ ಗಳ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.
ತಾಲ್ಲೂಕಿನ ಕೆಂಚನಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಹಕ್ಕುಗಳ ಆಯೋಗದಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆ, ಮಕ್ಕಳ ಹಕ್ಕುಗಳ ಸುಸ್ತಿರ ಅಭಿವೃದ್ದಿ, ಗುರಿಗಳು ಹಾಗೂ ಮಕ್ಕಳ ಹಕ್ಕುಗಳ ಸಂಘಗಳ ಬಗ್ಗೆ ಸಮಾಲೋಚನೆ ಕಾರ್ಯಕ್ರಮವನ್ನು ನಡೆಸಿದರು.
ಈ ಕಾರ್ಯಕ್ರಮದಿಂದ ಶಿಕ್ಷಣದ ಸೌಲಭ್ಯ, ಮಕ್ಕಳ ಹಕ್ಕುಗಳ ಕ್ಲಬ್, ಆಟೋಟಗಳ ಚಟುವಟಿಕೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಬದುಕುವ ಹಕ್ಕು, ಅಭಿವೃದ್ದಿ ಹಕ್ಕು, ರಕ್ಷಣೆ ಹಕ್ಕು, ಭಾಗವಹಿಸುವ ಹಕ್ಕು ಇನ್ನಿತರ ಯಾವುದೇ ಮಕ್ಕಳ ಸಮಸ್ಯೆಗಳ ಹೋಗಲಾಡಿಸಲು ಹಾಗೂ ಸ್ಥಳೀಯ ಸರ್ಕಾರ, ಸಮುದಾಯ ಮತ್ತು ಸೇವಾ ಸೌಲಭ್ಯ ಒದಗಿಸುವ ಜವಾಬ್ದಾರಿಯನ್ನು ಗ್ರಾಮ ಮಟ್ಟದಲ್ಲಿ ಒದಗಿಸಬೇಕು ಆಗ ಶಿಕ್ಷಣದಲ್ಲಿ ಮಕ್ಕಳು ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ವೀಣಾ ತಿಳಿಸಿದರು.
ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಇಂದು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದ ದೃಷ್ಠಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲಕರು ಶ್ರಮವಾಹಿಸಬೇಕು ಎಂದು ಎಂ.ಟಿ ಶಾಂತ ಸಿ.ಅರ್.ಪಿ ತಿಳಿಸಿದರು.
ಕೆಂಚನಗುಡ್ಡ ಗ್ರಾಮ ಪಂಚಾಯಿತಿಯ ಪಿ.ಡಿ.ಒ ಅದೆಪ್ಪ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹನುಮಂತಪ್ಪ, ಮಲ್ಲಿಕಾರ್ಜುನ ಮಕ್ಕಳಾದ ಹುಸೇನ್ ಭಾಷ, ಯಶವಂತ, ಮಾರೆಮ್ಮ, ಸುಮಾ, ಖಾದರಬೀ ಇದ್ದರು.