
ಅರಕೇರಾ,ಮಾ.೦೨- ಮಕ್ಕಳಿಗೆ ಶಿಕ್ಷಣದ ಹಕ್ಕುನೀಡಲಾಗಿದ್ದು, ೧೪ ವರ್ಷದೊಳಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವುದು ಸರಕಾರದ ಹೊಣೆ ಅಂತೆಯೆ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವದು ಪೋಷಕರ ಹೊಣೆಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕರವರು ಅಭಿಪ್ರಾಯಪಟ್ಟರು.
ಅವರು ಅರಕೇರಾ ಪಟ್ಟಣದಲ್ಲಿನ ಹಮ್ಮಿಕೊಂಡಿದ್ದ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ದೇವದುರ್ಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದೇವದುರ್ಗ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ದೇವದುರ್ಗ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಅರಕೇರಾ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಬಲವರ್ದನೆ ಹಾಗೂ ನಾಯಕತ್ವದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವಪಡೆದಿದೆ.
ಸಾಕ್ಷರತೆ ಪ್ರಮಾಣ ೧೦೦ಕ್ಕೆ ನೂರಷ್ಟು ಆಗಬೇಕು ಬಾಲ್ಯವಿವಾಹ ಮತ್ತು ಶಾಲೆ ಬಿಡಿಸಿ ಮಕ್ಕಳನ್ನು ಕೂಲಿಕೆಲಸಕ್ಕೆ ಕಳಿಸಬಾರದು ಇದು ಬಾಲಕಾರ್ಮಿಕ ವಿರೋದಿ ಕಾಯ್ದೆ ಅದುದ್ದರಿಂದ ಪ್ರತಿಯೊಬ್ಬರು ಮಕ್ಕಳ ಹಕ್ಕುಗಳ ರಕ್ಷಣೆಮಾಡುವದು ಮಕ್ಕಳ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರು ಕರ್ತವ್ಯ ಎಂದರು. ಪ್ರಾಸ್ತವಿಕವಾಗಿ ಸಿದ್ದಲಿಂಗಪ್ಪ ಕಾಕರಗಲ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ ಕುರಿಯಾಕೋಸ್‌ಡಾನ್ ಬೋಸ್ಕ್ ಸಮಾಜ ಸೇವಾ ಸಂಸ್ಥೆ ದೇವದುರ್ಗ ಇವರು ವಹಿಸಿದ್ದರು.
ಗ್ರಾಮಪಂಚಾಯತ ಅಭಿವೃದ್ದಿ ಅಧಿಕಾರಿ ಬೂದೇಪ್ಪಯಾದವ, ಎಸ್‌ಡಿಎಂಸಿ ಅಧ್ಯಕ್ಷರಾದ ಜಾವೀದ್ ಆರ್. ಚಿಂಚೋಳಿಕರ್ ಗ್ರಾಮ ಪಂಚಾಯತ ಸದಸ್ಯರುಗಳಾದ ವಿಶ್ವನಾಥ ಹೊಸಮನಿ,ವಿರೇಶಬೇರಿ ಸಿಆರ್‌ಪಿ ಬಸವರಾಜ ಅರಕೇರಾ ವಲಯ, ಇಸಿಒ ರಾಚನಗೌಡ ಮುಖ್ಯೋಪಾಧ್ಯಾಯರಾದ ದೇವಿಂದ್ರಕುಮಾರ.
ಸಂಪನ್ಮೂಲವ್ಯಕ್ತಿಗಳಾಗಿ ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕರಾದ ಸುದರ್ಶನಮತ್ತು ವಿದ್ಯಾರ್ಥಿಪ್ರತಿನಿದಿಗಳು ಉಪಸ್ಥಿತರಿದ್ದರು. ನಿರೂಪಣೆ ಭಗವಂತ್ರಾಯ ತೆಗ್ಗಿಹಾಳ. ಸ್ವಾಗತ ಮರಿಯಪ್ಪ ಕೊರಿಚಿಕ್ಕಹೊನ್ನಕುಣಿ ಪ್ರಾರ್ಥನೆ ಯಶೋದ ಕೊನೆಯಲ್ಲಿ ವಂದರ್ನಾಪಣೆಯನ್ನು ನಾಗರಾಜ ಮಾನಸಗಲ್ ನೆರವೇರಿಸಿದರು.