ಮಕ್ಕಳ ಹಕ್ಕುಗಳ ಕ್ಲಬ್ ರಚನೆ

ಯಾದಗಿರಿ;ಜ.13: ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರದ ಕ್ರಿಮ್ ಮೂರನೇ ಸಮಾಜಿಕ ಚಟುವಟಿಕೆಗಳ ವತಿಯಿಂದ ಶಹಾಪುರ ತಾಲೂಕಿನ ವನದುರ್ಗ ಸ.ಪ್ರೌ.ಶಾಲೆ ಯಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಕಾರ್ಯಕ್ರಮ ಜರುಗಿತು.

ಮಕ್ಕಳ ಹಕ್ಕುಗಳ ಒಡಂಬಡಿಕೆ ತಯಾರಿ ಹಾಗೂ ಮಕ್ಕಳಿಗೂ ಹಕ್ಕುಗಳ ಅಗತ್ಯವಿದೆ ಎಂಬ ವಿಚಾರದಲ್ಲಿ ವಿಶ್ವ ಸಮುದಾಯಲ್ಲಿ ಬೆಳೆದು ಬಂದ ಚಿಂತನಗಳು ಮತ್ತು ಪ್ರಯತ್ನಗಳ ಬಗ್ಗೆÀ ವಿವರವಾದ ಮಾಹಿತಿಯನ್ನು ಕ್ರಿಮ್ 3ನೇ ಸಮಾಜಿಕ ಚಟುವಟಿಕೆಗಳ ಕಾರ್ಯಕರ್ತ ಸದಾಶಿವ ಬಿ.ಕೆ ಮಾತನಾಡಿ ಮಕ್ಕಳಿಗೆ ಇರುವಂತಹ ಹಕ್ಕುಗಳ ಬಗ್ಗೆ ತಿಳಿಸಿದರು. ವಿಶ್ವ ಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆ 20/11/1989 ರಲ್ಲಿಜಾರಿಗೆ ಬಂದರೂ ನಮ್ಮ ಭಾರತ ದೇಶ 2 ವರ್ಷಗಳ ನಂತರ ಅಂದರೆ 11/12/1992 ರಲ್ಲಿ ಸಹಿ ಹಾಕಿತು. ಇದರಲ್ಲಿ ಈ ಒಡಂಬಡಿಕೆಯಲ್ಲಿ ಒಟ್ಟು 54 ಪರಿಚ್ಛೇದಗಳು ಇದ್ದು ಅವುಗಳನ್ನು 4ಗುಂಪು ಗಳನ್ನಾಗಿ ಮಾಡಲಾಗಿದೆ.

1) ಜೀವಿಸುವ ಹಕ್ಕುಗಳ ಗುಂಪು, 2) ರಕ್ಷಣೆ ಹೊಂದುವ ಹಕ್ಕುಗಳಗುಂಪು, 3) ವಿಕಾಸ ಮತ್ತು ಅಭಿವೃದ್ದಿ ಹೊಂದುª ಹಕ್ಕುಗಳÀ ಗುಂಪು, 4) ಭಾಗವಹಿಸುವ ಹಕ್ಕುಗಳ ಗುಂಪು. ಎಂದು ಹಿಗೆ ಮಕ್ಕಳ ಹಕ್ಕುಗಳನ್ನು ಮಕ್ಕಳಗೆ ಮನಮುಟ್ಟುವಂತೆ ವಿವರಿಸಿದರು. ಮತ್ತು ಮಕ್ಕಳ ರಕ್ಷಣೆಗಾಗಿ ಸರಕಾರದಲ್ಲಿ ಇರುವ ವಿವಿದ ವ್ಯವಸ್ಥೆಗಳ ¨ಗ್ಗೆ ಮತ್ತು ಮಕ್ಕಳ ಕಾನೂ£ಗಳ ಬಗ್ಗೆÀ ಮಾಹಿತಿ ನೀಡಿದರು.

ಮಕ್ಕಳ ಹಿತ ಕಾಯಲೆಂದೇ ಸರ್ಕಾರ 1) ಬಾಲ ನ್ಯಾಯ ಮಂಡಳಿ 2) ಮಕ್ಕಳ ಕಲ್ಯಾಣ ಸಮಿತಿ 3) ವಿಶೇಷ ಮಕ್ಕಳ ಪೋಲಿಸ್ ಘಟಕ 4) ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ 5) ಮಕ್ಕಳ ಸಹಾಯ ವಾಣಿ 1098 ಸ್ಥಾಪನೆ ಮಾಡಲಾಗಿದೆ. ಮತ್ತು ಇದರ ಜೋತೆಯಲ್ಲಿ ಮಾನವ ಹಕ್ಕುಗಳ ಮಾಹಿತಿ ನೀಡಿದರು.

ಹಿಗೆ ವಿವಿಧ ಇಲಾಖೆಗಳ ಬಗ್ಗೆ ಅವರು ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸ.ಪ್ರೌ. ಶಾಲೆ ವನದುರ್ಗ ಮು.ಗು. ಹಾಗು ಶಾಲೆಯ ಶಿಕ್ಷಕರು ಮತ್ತು ಶಾಲೆಯ 120 ಮಕ್ಕಳು ಭಾಗವಹಿಸಿದ್ದರು.