ಮಕ್ಕಳ ಸ್ಕೇಟಿಂಗ್ ವೀಕ್ಷಿಸಿದ ಸಚಿವರು

??????

ಮುಂಡಗೋಡ,ಏ17: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ವಾಕರಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಮಕ್ಕಳು ಸ್ಕೇಟಿಂಗ್ ಅಭ್ಯಾಸವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರಿಗೆ ನೌಕರರ ಮುಷ್ಕರದಿಂದ ಕೆಲವು ದಿನಗಳಿಂದ ಪಟ್ಟಣದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದ ನಿಲ್ದಾಣದಲ್ಲಿ ಸ್ಕೇಟಿಂಗ್ ಅಭ್ಯಾಸಕ್ಕೆ ಸಾಕ್ಷಿಯಾಯಿತು. ಸಚಿವರು ಭೇಟಿಯ ವೇಳೆ ಸುಮಾರು 30ಕ್ಕೂ ಹೆಚ್ಚು ಮಕ್ಕಳು ವಿವಿಧ ಸ್ಟೈಲ್ ಗಳಲ್ಲಿ ಅಭ್ಯಾಸ ಮತ್ತು ಪ್ರದರ್ಶನ ನೀಡಿದರು.
ಮಕ್ಕಳಿಗೆ ಸ್ಕೇಟಿಂಗ್ ಅಭ್ಯಾಸ ಮಾಡಲು ಜಾಗದ ಸಮಸ್ಯೆ ಇದ್ದ ಬಗ್ಗೆ ಮಕ್ಕಳ ಪಾಲಕರು ಸಚಿವರ ಗಮನಕ್ಕೆ ತಂದರು. ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ಬೇರೆ ಏನಾದರು ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದರು.
ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರೂ ಸಹ, ಮಕ್ಕಳ ಸ್ಕೇಟಿಂಗ್ ಪ್ರದರ್ಶನ ಕಂಡು ಹರ್ಷ ವ್ಯಕ್ತಪಡಸಿದರು. ಕಳೆದ ಎರಡು ತಿಂಗಳಿಂದ ಪಟ್ಟಣದ ಟೌನ ಹಾಲ್ ನಲ್ಲಿ ಆರಂಭವಾಗಿರುವ ಸ್ಕೇಟಿಂಗ್ ತರಬೇತಿಯು ತಾಲೂಕಿನ ಮಕ್ಕಳನ್ನು ಆಕರ್ಷಿಸುತ್ತಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ, ಜಿಲ್ಲಾ ಪಂಚಾಯತ ಸದಸ್ಯರಾದ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ್, ನಾಗಭೂಷಣ ಹಾವಣಗಿ, ಉಮೇಶ ಬಿಜಾಪೂರ ಸಂಜು ಪಿಸೆ, ಸೇರಿದಂತೆ ಮುಂತಾದವರಿದ್ದರು.