ಮಕ್ಕಳ ಸುರಕ್ಷತೆಗಾಗಿ ಕಾಲ್ನಡಿಗೆ ಜಾಥಾ

ಕಲಬುರಗಿ,ನ.14-ಚೈಲ್ಡ್ ಲೈನ್-1098 ಸೇವೆಯು 25 ವರ್ಷ ಪೂರೈಸಿ ರಜತ್ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರದವರೆಗೆ (ನ.14 ರಿಂದ 20) ಚೈಲ್ಡ್ ಲೈನ್ ಸೇ ದೋಸ್ತಿ (ಚೈಲ್ಡ್ ಲೈನ್ ಮಿತ್ರ) ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್ ಲೈನ್-1098 ಸಹಯೋಗದಲ್ಲಿ ನಗರದ ಜಗತ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಕಾಲ್ನಡಿಗೆ ಜಾಥಾಕೆ ಬಿ ವಿಭಾಗದ ಮಕ್ಕಳ ಕಲ್ಯಾಣ ಪೊಲೀಸ್ ಆಧಿಕಾರಿ ಎಂ.ಎನ್.ದೀಪನ್ ಚಾಲನೆ ನೀಡಿದರು.
ಡಿಸಿಪಿಓ ಶರಣಬಸಪ್ಪ ಬೆಳಗುಂಪಿ, ರಮೇಶ ಸುಂಬಡ, ಯಲ್ಲಾಲಿಂಗ ಕಾಳನೂರ, ಸಿಪಿಐ ದಿಲೀಪ ಸಾಗರ, ವಿಶ್ವನಾಥ ಸ್ವಾಮೀಜಿ, ಸಂತೋಷ ಕುಲಕರ್ಣಿ, ಭರತೇಶ ಶೀಲವಂತ, ಆನಂದರಾಜ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.