ಧಾರವಾಡ,ಏ.24: ಮಕ್ಕಳ ಸಾಹಿತ್ಯದ ಬೇರುಗಳು ನಮ್ಮಜನಪದ ಸಾಹಿತ್ಯದಲ್ಲಿ ವಿಫುಲವಾಗಿವೆ. ಆದರೆ ಆ ಸಾಹಿತ್ಯಕ್ಕೆ ಸ್ಪಷ್ಟರೂಪ ಬಂದದ್ದು ನವೋದಯದ ಸಂದರ್ಭದಲ್ಲಿಎಂದು ಹಿರಿಯ ಸಾಹಿತಿಡಾ.ರುದ್ರಣ್ಣಚಿಲುಮಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಕವಿ ಬಿ.ಕೆ. ಹೊಂಗಲ ದತ್ತಿ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ-2023' ಪ್ರದಾನ ಸಮಾರಂಭಹಾಗೂ
ಮಕ್ಕಳ ಸಾಹಿತ್ಯದಅಗತ್ಯತೆ’ ಉಪನ್ಯಾಸಕಾರ್ಯಕ್ರಮದಲ್ಲಿಅತಿಥಿಉಪನ್ಯಾಸಕರಾಗಿಅವರು ಮಾತನಾಡುತ್ತಿದ್ದರು.
ಮಕ್ಕಳಿಗಾಗಿ ರಚಿಸಿದ ಸಾಹಿತ್ಯವು ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲ ಕೆರಳಿಸಿ, ಭಾವನೆಗಳನ್ನು ಪ್ರಚೋದಿಸುವಂತಿರಬೇಕು.ಪಂಚತಂತ್ರದ ಕಥೆಗಳು, ಅಜ್ಜಿ ಹೇಳುವ ರಾಜರಾಣಿಯರ ಕಥೆಗಳು, ಒಗಟುಗಳು, ಆಟದ ಪದಗಳು, ಕಾಗೆ-ಗುಬ್ಬಕ್ಕನ ಕಥೆಗಳು ಮಕ್ಕಳನ್ನ ಮಂತ್ರಮುಗ್ಧರನ್ನಾಗಿಸುವವು.ಇವು ಕೇವಲ ಕಥೆಗಳಂತೆ ಕಂಡರೂ ಮಕ್ಕಳಲ್ಲಿ ನೈತಿಕತೆಆದರ್ಶ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವಂತವುಗಳಾಗಿವೆ.
ಜಾನಪದ ಪರಂಪರೆಯ ಗೋವಿನ ಹಾಡು'
ಬಣ್ಣದತಗಡಿನತುತ್ತೂರಿ’ ಅಜ್ಜನಕೋಲಿದು ನನ್ನಯಕುದುರೆ' ಹಾಗೂ
ಬಾರಲೆ ಹಕ್ಕಿ ಬಣ್ಣದ ಹಕ್ಕಿ’ಯಂತಹ ಮಕ್ಕಳ ಹಾಡುಗಳು ಮಕ್ಕಳು ಮಾತ್ರವಲ್ಲಎಲ್ಲಾ ವಯೋಮಾನದವರಿಗೂಆಕರ್ಷಣೀಯವಾಗಿವೆ. ಮುಪ್ಪಿನ ಷಡಕ್ಷರಿ, ಜೆ.ಪಿ. ರಾಜರತ್ನಂ, ಪಂಜೇ ಮಂಗೇಶರಾಯ, ಸಿದ್ಧಯ್ಯ ಪುರಾಣಿಕರು ನಿಜವಾಗಿಇಂತಹ ಹಾಡು ರಚಿಸಿ, ಮಕ್ಕಳ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಇತ್ತೀಚೆಗೆ ಶಂ.ಗು.ಬಿರಾದಾರ, ಎ.ಕೆ.ರಾಮೇಶ್ವರ, ಶರಣಪ್ಪಕಂಚ್ಯಾಣಿ ಹಾಗೂ ನಿಂಗಣ್ಣಕುಂಟಿಅವರು ಮಕ್ಕಳ ವಯೋಮಾನಕ್ಕೆತಕ್ಕಅತ್ಯುತ್ತಮ ಸಾಹಿತ್ಯ ರಚಿಸಿ ಜನಮನ್ನಣೆ ಪಡೆದಿದ್ದಾರೆ.ಆಧುನಿಕ ಶಿಕ್ಷಣದ ಜೊತೆಗೆ ಮಕ್ಕಳೂ ಸಹ ತಾವೇ ಸಾಹಿತ್ಯರಚಿಸುವಂತೆ ಶಿಕ್ಷಕರು, ಪಾಲಕರು ಶ್ರಮಿಸಬೇಕುಎಂದು ಹೇಳಿದರು.
2023 ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಪುರಸ್ಕರತರಾದ ಹಿರಿಯ ಸಾಹಿತಿಎ.ಕೆ.ರಾಮೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕ.ವಿ.ವ. ಸಂಘದಲ್ಲಿ ನೀಡುವ ಈ ಪ್ರಶಸ್ತಿಗೆ ಬೆಲೆ ಕಟ್ಟಲಾಗದು.ಇದು ನಾನು ಬಯಸದೇ ಬಂದ ಪ್ರಶಸ್ತಿ.ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ನಾನು ನಿಷ್ಠೆಯಿಂದ ಮಾಡಿದಕಾರ್ಯಕ್ಕೆ ಸಂದಗೌರವ. ಈ ಪ್ರಶಸ್ತಿಯನ್ನು ನಾನು ಪ್ರಾಂಜಲ್ ಮನಸ್ಸಿನಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿರಾಮಚಂದ್ರಧೋಂಗಡೆ ಪ್ರಶಸ್ತಿ ಪುರಸ್ಕøತರನ್ನುಕುರಿತು ಮಾತನಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಕವಿ ಬಿ.ಕೆ. ಹೊಂಗಲ್‍ದತ್ತಿಕುರಿತು ಮಾತನಾಡಿದರು. ಸೋಮನಾಥ ಹೊಂಗಲ್‍ಇದ್ದರು.
ಸಾನ್ನಿಧ್ಯ ವಹಿಸಿದ್ದ ಮನುಗುಂಡಿಯ ಪರಮಪೂಜ್ಯ ಬಸವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿದರು.ಗುರು ಹಿರೇಮಠ ವಂದಿಸಿದರು.ಶಿವಾನಂದ ಭಾವಿಕಟ್ಟಿ, ಮಹಾಂತೇಶ ನರೇಗಲ್, ರಾಮಚಂದ್ರಗೆದ್ದೆಣ್ಣವರ, ಎಂ.ಎಂ.ಚಿಕ್ಕಮಠ, ಸೀತಾ ಛಪ್ಪರ, ಚಿತ್ರಾ ನಾಯಕ, ಸುರೇಶಗುದಗನವರ ಮುಂತಾದವರಿದ್ದರು.