ಮಕ್ಕಳ ಸಾಹಿತಿ, ಕವಿ ಜಂಬುನಾಥ ಕಂಚ್ಯಾಣಿ ಅವರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ

ವಿಜಯಪುರ:ಮಾ.29: ಜಿಲ್ಲಾ ಮಕ್ಕಳ ಸಾಹಿತ್ಯ ಪರಿಶತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಜಂಬುನಾಥ ಕಂಚ್ಯಾಣಿ ಅವರನ್ನು ಕರ್ನಾಟಕ ಸರಕಾರದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು 2019-20ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ಕಳೆದ 50 ವರ್ಷಗಳಿಂದ ಮಕ್ಕಳ ಸಾಹಿತಿಗಾಗಿ, ಸಾಹಿತ್ಯ ಸಂಘಟಿಕರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಕ್ಕಳ ಸಾಹಿತ್ಯದಲ್ಲಿ ಕತೆ, ಕವನ, ಕಾದಂಬರಿ, ನಾಟಕ,, ಚರಿತೆ ಹಾಗೂ ಶಿಶುಪ್ರಾಸ ಕುರಿತಾಗಿ 30 ಗ್ರಂಥಗಳನ್ನು ರಚಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀ ಹಾಲಪ್ಪ ಆಚಾರ್ಯರು ಮಕ್ಕಳ ಬಾಲ ಅಕಾಡೆಮಿಯ ಶ್ರೇಷ್ಠ ಪ್ರಶಸ್ತಿಯಾದ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಸಭಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ, ಶಂಕರ ಹಲಗತ್ತಿ, ಅಕಾಡೆಮಿ ಅಧ್ಯಕ್ಷರಾದ ನವೀನ ಸವನೂರ, ಯೋಜನಾಧಿಕಾರಿ ಶ್ರೀಮತಿ ಭಾರತಿ ಶೆಟ್ಟರ, ನಿಂಗಣ್ಣ ಕುಂಟಿ ಉಪಸ್ಥಿತರಿದ್ದರು.
ಪ್ರಶಸ್ತಿಗೆ ಭಾಜನರಾದ ಜಂಬುನಾಥ ಕಂಚ್ಯಾಣಿ ಅವರನ್ನು ವೀರಶೈವ ಮಹಾಸಭಾ, ಮಕ್ಕಳ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ರಕ್ಷಣಾ ವೇದಿಕೆಯ ಅಭಿಮಾನಿಗಳ ಬಳಗ, ಸಮಾನ ಮನಸ್ಕರ ವೇದಿಕೆ, ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಮ್ದ್ರದ ಬಳಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಸಂಗಮದ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.