ಚನ್ನಮ್ಮನ ಕಿತ್ತೂರ,ಜೂ26: ಸರಕಾರಿ ಸೇವೆಯಲ್ಲಿರುವವರು ನಿವೃತ್ತಿ ಹೊಂದಿದ ನಂತರ ನಮಗೇಕೆ ಇನ್ನೊಬ್ಬರ ಗೊಜು. ಎನ್ನುವವರೇ ಬಹಳ ಜನ ಇರುತ್ತಾರೆ. ಆದರೆ ಇಲ್ಲೊಬ್ಬರು ನಿವೃತ್ತಿ ಸೇನಾಧಿಕಾರಿಗಳಾದ ಪರವೇಜ್ ಹವಾಲ್ದಾರ ಇನ್ನೊಬ್ಬರಿಗೆ ಸಹಾಯವಾಗಲೆಂದು ಗ್ರಾಮೀಣ ಯುವಕ ಸೇನಾ ಕೇಂದ್ರ ಸ್ಥಾಪನೆ ಮಾಡಿ ಗ್ರಾಮೀಣ ಮಕ್ಕಳಿಗೆ ತರಬೇತಿ ನೀಡಿ ಅಂತವರ ಬಾಳು ಹಸನು ಮಾಡುವುದರಲ್ಲಿ ಮುಂದಾಗಿದ್ದಾರೆಂದು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಮಾಜಿ ಸಚಿವ ಹಾಲಿ ಶಾಸಕ ವಿನಯಕುಲಕರ್ಣಿ ಹೇಳಿದರು.
ತಾಲೂಕಿನ ತಿಗಡೊಳ್ಳಿ ರಸ್ತೆಗೆ ಹೊಂದಿಕೊಂಡಿರುವ ಗ್ರಾಮೀಣ ಯುವಕರ ಸೇನಾ ಕೇಂದ್ರದಲ್ಲಿ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ತರಬೇತಿ ನೀಡಿ ಇದುವರೆಗೂ 240ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸೇನೆಗೆ ಸೇರ್ಪಡೆ ಮಾಡಿದ್ದು ಎಲ್ಲರೂ ಮೆಚ್ಚತಕ್ಕದ್ದು. ಇಂದಿನ ಯುಗದಲ್ಲಿ ಯುವಕರ ಪಾತ್ರ ಹಿರಿದಾಗಿದ್ದು ಮನೆಯಲ್ಲಿ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ಉನ್ನತ್ತ ಹುದ್ದೆಗೇರಲು ಸಾಧ್ಯ ಎಂದರು.
ಪ.ಪಂ. ಸದಸ್ಯ ಅಶಪಾಕ ಹವಾಲ್ದಾರ, ಗುತ್ತಿಗೆದಾರ ಅಪ್ಪಾಶ ಹವಾಲ್ದಾರ, ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.
ಸ್ವಾಗತ, ನಿರೂಪಣೆ, ವಂದನಾರ್ಪಣೆ ನಿವೃತ್ತ ಸೇನಾಧಿಕಾರಿ ಪರವೇಜ್ ಹವಾಲ್ದಾರ ಮಾಡಿದರು.