ಮಕ್ಕಳ ಸಾಗಾಣಿಕೆಯಿಂದ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು:ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ

ಕಲಬುರಗಿ:ಫೆ.23: ಮಕ್ಕಳ ಸಾಗಾಣಿಕೆಯಿಂದ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು ಪ್ರಕರಣಗಳು ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು ಮಕ್ಕಳ ಕಳ್ಳ ಸಾಗಾಣಿಕೆ ಅಪರಾಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶಿಗಳಾದ ಶ್ರೀನಿವಾಸ ನವಲೆ ಅವರು ಹೇಳಿದರು.

ಗುರುವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವiಕ್ಕಳ ರಕ್ಷಣಾ ಘಟಕ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ "ಮಕ್ಕಳ ಕಳ್ಳ ಸಾಗಾಣಿಕೆ ತಡೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ" ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅರಿವು ಹಾಗೂ ಜಾಗೃತಿ ತರಬೇತಿ ಕಾರ್ಯಾಗಾರದಲ್ಲಿ ಸಸಿಗೆ ನೀರೆರೆಯುವುದರ ಮೂಲಕ ಉದ್ಪಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ವಸತಿ ಶಾಲೆಗಳಲ್ಲಿರಬಹುದು ಬೇರೊಂದು ತಾಲೂಕುಗಳಲ್ಲಿ ಹೆಣ್ಣು ಮಕ್ಕಳು ಅನೇಕ ಅನೈತಿಕ ಚಟುವಟಿಕೆಗಳಿಂದ ಬಲಿಯಾಗುತ್ತಿದ್ದು, ತಾಯಿಂದಿರು ಆಗಿರುವುದನ್ನು ಕಂಡುಬಂದಿದ್ದು, ಅಧಿಕಾರಿಗಳು ಇಂತಹ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು ಶ್ರಮವಹಿಸಬೇಕೆಂದು ಹೇಳಿದರು. 
 ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯ ಮಕ್ಕಳ ಕಳ್ಳ ಸಾಗಾಣಿಕೆ ತಡೆ ತಂಡದ ಸದಸ್ಯರಾದ  ವಿಲೀಯಂ ಕ್ರಿಸ್ಟೋಫರ್ ಮಾನವ ಕಳ್ಳ ಸಾಗಾಣಿಕೆ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿ ಇದೆ ಹಾಗೂ ನ್ಯಾಷನಲ್ ಕ್ರೈಂ ಬಿರೋ ಪ್ರಕಾರ ಕರ್ನಾಟಕವು ಎರಡನೇ ಸ್ಥಾನದಲ್ಲಿ ಇದೆ. ಇದು ಒಂದು ಸಂWಟಿತ ಅಪರಾಧವಾಗಿದೆ. ಏಕೆಂದರೆ ಕಳ್ಳರು, ಮೋಸಗಾರರು ಕೊಲೆಗಾರರು ಇವರುಗಳು ಸೇರಿ ಮಾಡಿರುವ ಒಂದು ಸಂಘವಾಗಿದೆ ಎಂದು ಹೇಳಿದರು.
   ವಂದಿತಾ ಶರ್ಮಾ ಸಮಿತಿ ಯಲ್ಲಿ 1485 ಪ್ರಕರಣಗಳು ದಾಖಲೆ ಆಗಿಲ್ಲ ಎಂದು ತಿಳಿದು ಬಂದಿದೆ ಇದಕ್ಕೆ ಕಾರಣ ಸ್ಪಷ್ಟತೆ ಇಲ್ಲ ಮತ್ತು ಕಾರ್ಯ ವಿಧಾನ ಸರಿಯಾಗಿ ಇಲ್ಲದಿರುವುದು ಕಾನೂನಿನ ಕಾಯ್ದೆಗಳು ನಿಯಮಗಳು ಸಕ್ರೀಯವಾಗಿ ಜಾರಿಗೊಳಿಸಲ್ಲದಿರುವುದು ಹೀಗಾಗಿ ಕಾನೂನಿನ ಉಲ್ಲಂಘನೆ ಆಗ್ತಾ ಇದೆ ಎಂದು ತಿಳಿಸಿದರು.
   ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಜುಳಾ.ವಿ ಪಾಟೀಲ ನಿರೂಪಣೆ ಮಾಡಿದರು ಪೊಲೀಸ್ ಠಾಣೆಯ ಅಧಿಕಾರಿಗಳು ತಹಶೀಲ್ದಾರು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.