ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಚಿಗುರು ಪ್ರದರ್ಶನ

????????????????????????????????????

ಬಳ್ಳಾರಿ,ಡಿ.19: ನಗರದ ಮಿಲ್ಲರ್‍ಪೇಟೆಯ ಕಲ್ಯಾಣಸ್ವಾಮಿ ಮಠದಲ್ಲಿ ನಿನ್ನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಚಿಗುರು-2020 ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣ ಮಹಾಸ್ವಾಮಿಗಳು ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಎಂತಹ ಪ್ರತಿಭೆ ತೋರಿಸಿದರು ಸರ್ಕಾರದಿಂದ ಬರುವ ಗೌರವ ಬೆಲೆ ಕಟ್ಟಲಾಗದು. ಕಲೆಯ ಪ್ರತಿಭೆಯನ್ನು ತೋರಿಸುವ ಅವಕಾಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಪ್ರತಿಭೆಯನ್ನು ತೋರಬೇಕು ಎಂದರು. ಪತ್ರಕರ್ತ ಕೆ.ಎಂ.ಮಂಜುನಾಥ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ.ಕೆ ರಂಗಣ್ಣವರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ರಾಘವರ್ಷಿಣಿ ಅವರಿಂದ ಕರ್ನಾಟಕ ಸಂಗೀತ, ಜಾನ್ಹವಿ ಅವರಿಂದ ಭರತನಾಟ್ಯ, ಸಂಡೂರು ತಾಲೂಕಿನ ತೋರಣಗಲ್ಲು ಮೌನಿಕ ಅವರಿಂದ ಸುಗಮ ಸಂಗೀತ, ಬಳ್ಳಾರಿ ಅಜಯ್ ಅವರಿಂದ ಏಕ ಪಾತ್ರಾಭಿನಯ, ಷಣ್ಮುಗಂ ಅವರಿಂದ ಜಾನಪದ ಗೀತೆಗಳು, ಧಾರವಾಡ ಜಿಲ್ಲೆಯ ಹಳಿಯಾಳನ ಕೀರ್ತಿ ಕಲಾ ಲೋಕ ಅವರಿಂದ ಮೂಡಲಪಾಯ ಮತ್ತು ಬಳ್ಳಾರಿ ಹೆಚ್.ರಕ್ಷಿತ ಮತ್ತು ತಂಡದಿಂದ ಸಮೂಹ ನೃತ್ಯ ನಡೆದವು. ಕಲಾವಿದರಾದ ಮಂಜುನಾಥ್, ಸಿರಿಸಿಯ ಮೂಡಲಪಾಯ ಕಲಾವಿದರಾದ ಹೆಚ್.ಗಣೇಶ್, ಸೂರ್ಯಕಲಾ ಟ್ರಸ್ಟ್‍ನ ಅಧ್ಯಕ್ಷ ಅಭಿಷೇಕ್ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.