ಮಕ್ಕಳ ಸಹಾಯವಾಣಿ ಜೊತೆ ಕೈ ಜೋಡಿಸಿದ ಶಿಕ್ಷಕವೃಂದ

ಬೀದರ,ಮಾ 14 :ನಗರದಚಿಕ್ಕಪೇಟ್‍ನಲ್ಲಿರುವ ಡಾನ್ ಬೋಸ್ಕೊ ಸಂಸ್ಥೆಯಿಂದ ಮಕ್ಕಳ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಅರಿವು ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಬುಧೇರಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಮುಖ್ಯಗುರು ಬಸಯ್ಯಾ ಸ್ವಾಮಿ ಆಗಮಿಸಿದರು
ಮಕ್ಕಳ ಸಹಾಯವಾಣಿ ಸದಸ್ಯ ಡ್ಯಾನಿಯಲ್ ಅವರು ಮಾತನಾಡಿ ಬಾಲ್ಯ ವಿವಾಹ ಪದ್ದತಿ ಸಮಾಜಕ್ಕೆ ಅಂಟಿದಕಳಂಕ. ಶಾರೀರಿಕವಾಗಿ ಬೇಳವಣಿಗೆ ಹೊಂದಿಲ್ಲದ ಹೆಣ್ಣು ಮಕ್ಕಳಿಗೆಬೇಗ ಮಕ್ಕಳು ಜನಿಸುವುದರಿಂದ ತಾಯಿ ಶಿಶುವಿನ ಮರಣಪ್ರಮಾಣ ಹೆಚ್ಚಾಗಿದೆ. ಹೆರಿಗೆ ನಂತರ ತಾಯಿಯ ಸಾವು ಹುಡುಗನಿಗೆಮತ್ತೆ ಮದುವೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಬಾಲ್ಯವಿವಾಹ ನಿಷೇಧ ಮತ್ತು ನಿಯಂತ್ರಣಕಾಯ್ದೆ 2006 ಕುರಿತು ಹೇಳುತ್ತಾ ಬಾಲ್ಯ ವಿವಾಹ ಮಾಡಿದವರಿಗೆ 1ಲಕ್ಷರೂಪಾಯಿ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ಹೆಣ್ಣು ಮಗುವಿಗೆ18 ವರ್ಷ ಗಂಡು ಮಗುವಿಗೆ 21 ವರ್ಷ ವಯಸ್ಸು ಮುಗಿದವರಿಗೆಮದುವೆ ಮಾಡಬಹುದು ಹಾಗೂ 1098 ಗೆ ಕರೆ ಮಾಡುವಪ್ರತಿಯೊಂದು ಮಗುವಿನ ಸುರಕ್ಷತೆ ಹಾಗೂ ಆರೈಕೆಗೆಸಂಬಂಧಿಸಿದಂತೆ ಸೇವೆಯನ್ನು ಒದಗಿಸುವುದು ಎಂದರು.ಮಕ್ಕಳ ಸಹಾಯಮಾಣಿ ಸದಸ್ಯ ಸಾಲೋಮನ ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರುಉಪಸ್ಥಿತರಿದ್ದರು.