ಮಕ್ಕಳ ಸಹಾಯವಾಣಿ ಜಿಲ್ಲಾ ಕೇಂದ್ರದ ನೂತನ ಕಚೇರಿ ಉದ್ಘಾಟನೆ

ಕಲಬುರಗಿ,ಸೆ.2-ಕರ್ನಾಟಕ ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ “ಮಕ್ಕಳ ಸಹಾಯವಾಣಿ-1098/112” ಜಿಲ್ಲಾ ಕೇಂದ್ರ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನಡೆಯಿತು.
ಜಿಲ್ಲಾ ಕೇಂದ್ರ ಕಛೇರಿ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವಿನಕುಮಾರ ಯು ಅವರು, ರಿಬ್ಬನ್ ಕತ್ತರಿಸುವ ಮೂಲಕ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಕಾಂತ ಬಿರದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಕಲ್ಯಾಣಾಧಿಕಾರಿ ಶಿವಶರಣಪ್ಪ ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ. ಪಾಟೀಲ್ ವಹಿಸಿದ್ದರು.
ಜಿಲ್ಲಾ ಕೇಂದ್ರ ಕಚೇರಿಯ ಮಕ್ಕಳ ಸಹಾಯವಾಣಿ-1098/112 ಯೋಜನೆಗೆ ಆಯ್ಕೆಯಾದ ನೂತನ ಸಿಬ್ಬಂದಿಗಳನ್ನು ಉದ್ದೇಶಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನವಿನಕುಮಾರ ಯು ಅವರು ಮಾತನಾಡಿ, “ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಮುನ್ನ ನಾವುಗಳು ಮಕ್ಕಳನ್ನು ಜಾಗೃತರನ್ನಾಗಿ ಮಾಡಬೇಕು. ಮಕ್ಕಳು ದೆವರ ಸಮಾನ ಅವರಲ್ಲಿ ಯಾವುದೇ ರೀತಿಯಲ್ಲಿ ತಾರತಮ್ಯ, ಬೇದಭಾವ ತೋರಬಾರದು. ಮುಂದಿನ ದಿನಗಳಲ್ಲಿ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಶ್ರದ್ಧೆ, ನಂಬಿಕೆ, ವಿಶ್ವಾಸದಿಂದ ಕೆಲಸಮಾಡಬೇಕು” ಎಂದು ಶುಭಾ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ್ ಅವರು ಮಾತನಾಡಿ, “ಮಕ್ಕಳ ಸಹಾಯವಾಣಿ-1098 ಸಂಖ್ಯೆಯನ್ನು ಪೊಲೀಸ ಇಲಾಖೆಯ ತುರ್ತು ಸೇವೆ 112ಗೆ ವಿಲಿನಗೊಂಡಿರುವುದರಿಂದ ಸಂಕಷ್ಟಕ್ಕೆ ಸಿಲುಕುವ ಮಕ್ಕಳ ರಕ್ಷಣೆಗೆ ತುರ್ತಾಗಿ ಸ್ಪಂದಿಸುವ ಅಗತ್ಯವಿರುತ್ತದೆ ಹಾಗಾಗಿ ಪೊಲೀಸ ಇಲಾಖೆಯೊಂದಿಗೆ ಸಮನ್ವಯ ಮತ್ತು ಸಹಕಾರದಿಂದ ಮಕ್ಕಳ ರಕ್ಷಣೆ ಮಾಡಬೇಕಾಗಿರುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಪರಿವಿಕ್ಷಣಾಲಯದ ಅಧೀಕ್ಷಕ ವೆಂಕಟೇಶ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಕ ಅಧಿಕಾರಿ ಮಂಜುಳಾದೇವಿ ರೆಡ್ಡಿ, ಅಸಾಂಸ್ಥಿಕ ಅಧಿಕಾರಿ ಬಸವರಾಜ, ಕಾನೂನು ಪರಿವಿಕ್ಷಣಾಧಿಕಾರಿ ಭರತೇಶ ಶೀಲವಂತರ್ ಹಾಗೂ ಇತರ ರಕ್ಷಣಾ ಘಟಕದ ಸಿಬ್ಬಂದಿಗಳು ಮತ್ತು ಜಿಲ್ಲಾ ಕೇಂದ್ರದ ಮಕ್ಕಳ ಸಹಾಯವಾಣಿ ಕಾರ್ಯಕ್ರಮ ಸಂಯೋಜಕರಾದ ಬಸವರಾಜ ತೆಂಗಳಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಮಲ್ಲಯ್ಯ ಗುತ್ತೇದಾರ, ಸುಂದರ ಬಿ, ಅಶೋಕ ಶಂಕೆ, ಅನುಸುಯ್ಯ ಹುಲ್ಲೂರ್, ಮರಳಮ್ಮ, ದೇವಿಂದ್ರಪ್ಪ, ಸಂತೋಷ, ಶಿವಕುಮಾರ, ರವಿಂದ್ರ, ರಾಜೇಂದ್ರ, ಸಂಜುಕುಮಾರ, ಶೋಭಾ, ಸಂಗಪ್ಪ ಉಪಸ್ಥಿತರಿದ್ದರು.