ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಲೋಹಗಾಂವ ಅಂಗನವಾಡಿ ಕೇಂದ್ರ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.1: ಆಡುತ್ತ ಕಲಿ ನೋಡುತ್ತಾ ಕಲಿ ಎಂಬ ಶಿಕ್ಷಣ ಉಕ್ತಿಗೆ ಪೂರಕವಾಗಿ ಪೂರ್ವ ಪ್ರಾಥಮಿಕ ಹಂತದಲ್ಲಿ ಶೈಕ್ಷಣಿಕ ಭದ್ರ ಬುನಾದಿ ಒದಗಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಿಜಯಪುರ ನಗರದಿಂದ 15 ಕಿ.ಮೀ ದೂರದಲ್ಲಿರುವ ಲೋಹಗಾಂವ್ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರೈಸಲಾಗುತ್ತಿರುವ ಪೌಷ್ಠಿಕಾಂಶ ಆಹಾರ, ಅಂಗನವಾಡಿ ಸುತ್ತಮುತ್ತಲಿನ ಪರಿಸರ, ಮಕ್ಕಳಿಗೆ ಅನುಕೂಲಕರಣ ವಾತಾವರಣ ಸೇರಿದಂತೆ ಒಟ್ಟಾರೆ ಅಂಗನವಾಡಿ ಕೇಂದ್ರದ ನಿರ್ವಹಣೆಯನ್ನು ಗಮನಿಸಿದಾಗ ಲೋಹಗಾಂವ ಅಂಗನವಾಡಿ ಕೇಂದ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹೇಳಿ ಮಾಡಿಸಿದಂತಾಗಿದೆ ಈ ಕೇಂದ್ರ.
ಲೋಹಗಾಂವ್ ಗ್ರಾಮದ ಗ್ರಾಮ ಪಂಚಾಯತಿಯ ಕಟ್ಟದ ಹಿಂಭಾಗದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ 3 ರಿಂದ 6 ವರ್ಷದೊಳಗಿನ ವಯೋಮಾನದ ಮಕ್ಕಳು ದಾಖಲಾತಿ ಹೊಂದಿದ್ದಾರೆ. ಈ ಕೇಂದ್ರವು ಬೆಳಿಗ್ಗೆ 10 ಗಂಟೆಗೆ ಆರಂಭವಾಗಿ 10:30ಕ್ಕೆ ಅಲ್ಫೋಪಹಾರ, ಮಧ್ಯಾಹ್ನ 1:30ಕ್ಕೆ ಪೌಷ್ಟಿಕಾಂಶವುಳ್ಳ ಊಟ ಒದಗಿಸಲಾಗುತ್ತಿದೆ. ಮಧ್ಯಾಹ್ನದ ನಂತರÀ ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ ಆರೋಗ್ಯ ಕುರಿತಾಗಿ ಸೂಕ್ತ ಸಲಹೆ ಸೂಚನೆ ನೀಡಲಾಗುತ್ತದೆ. ಇಲ್ಲಿ ದಾಖಲಿರುವ ಮಕ್ಕಳ ಹೆಸರಿನಲ್ಲಿ ಬ್ಯಾಗ ಇರಿಸಿದ್ದು, ಪ್ರತಿವಾರ ಕ್ರಿಯಾತ್ಮಕ ಚಟುವಟಿಕೆ ಭಾಗವಾಗಿ ಪ್ರತಿ ಮಗು ಚಿತ್ರ ಬಿಡಿಸಿ ಆ ಬ್ಯಾಗಿನಲ್ಲಿಡಲಾಗುವುದು ತಿಂಗಳ ನಾಲ್ಕು ವಾರವೂ ಈ ಕಾರ್ಯ ನಡೆದು ತಿಂಗಳ ಕೊನೆಗೆ ಮಕ್ಕಳ ಪೋಷಕರ ಸಮ್ಮುಖದಲ್ಲಿ ಅತ್ಯುತ್ತಮ ನಾಲ್ಕು ಚಿತ್ರಗಳನ್ನು ಆಯ್ಕೆ ಮಾಡುವ ಮೂಲಕ ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆಗೆ ಇಂಬು ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ಆಸ್ಥೆ ವಹಿಸುವುದರಿಂದ ಈ ಕೇಂದ್ರಕ್ಕೆ ಸೇರುವ ಮಕ್ಕಳ ಸಂಖ್ಯೆಯು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಗ್ರಾಮ ಪಂಚಾಯತ್ ಮೂಲಕ ಪೀಠೋಪಕರಣಗಳನ್ನು ಒದಗಿಸಿದ್ದು, ಊರಿನ ಸಹಕಾರವೂ ಇದೆ. ಎಲ್ಲ ಮಕ್ಕಳಿಗೆ ಗುರುತಿನ ನೀಡಿರುವುದು ಇಲ್ಲಿ ವಿಶೇಷವಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಸುರೇಖಾ ತೇಲಿ ಅವರು ಮಾಹಿತಿ ಒದಗಿಸಿದರು.
ಬಾಲ ವಿಕಾಸ ಸಮಿತಿ: ಈ ಅಂಗನವಾಡಿ ಕೇಂದ್ರದ ಮೇಲ್ವಿಚಾರಣೆಗಾಗಿ ಈ ಕೇಂದ್ರದ ದೀರ್ಘಾವಧಿ ಮಗುವಿನ ಪೋಷಕರು ಇದರ ಅಧ್ಯಕ್ಷರಾಗಿರುತ್ತಾರೆ.ಗ್ರಾಮ ಪಂಚಾಯತಿ ಸದಸ್ಯರು,ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಶಾಲಾ ಶಿಕ್ಷಕರು ಸ್ತ್ರೀ ಶಕ್ತಿ ಸಂಘದ ಸದಸ್ಯರು, ಸ್ವಯಂ ಸೇವಾ ಸಂಘದ ಯುವಕರು ಸದಸ್ಯರಾಗಿರುತ್ತಾರೆ.
ಮಗುವಿನ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಅದನ್ನು ಪೋಷಿಸುವ ನಿಟ್ಟಿನಲ್ಲಿ ಈ ಕೇಂದ್ರ ವೈವಿಧ್ಯಮಯ ಕಲಿಕಾ ಚಟುವಟಿಕೆ ಅಳವಡಿಸಿಕೊಂಡಿದೆ. ಕಲಿಕೆಗೆ ಪೂರಕವಾಗಿ ಆಧುನಿಕ ಪೀಠೋಪಕರಣ ಹಾಗೂ ಪಾಠೋಪಕರಣಗಳನ್ನು ಒಳಗೊಂಡಿದೆ. ಇಲ್ಲಿ ಕಲಿಕೆಯುವಿಕೆ ಪ್ರಕ್ರಿಯ ಆಟ ಆಡುವುದರ ಮೂಲಕ ಪರಿಣಾಮಕಾರಿ ಕಲಿಕಗೆ ಒತ್ತು ನೀಡಲಾಗುತ್ತಿದ್ದು, ಬೌದ್ಧಿಕ ಹಾಗೂ ಮಾನಸಿಕ ವಿಕಸನಕ್ಕೆ ಆದ್ಯತೆಗಾಗಿ ಕಲಿಕಾ ಚಟುವಟಿಕೆ ರೂಪಿಸಲಾಗಿದೆ. ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಈ ಕೇಂದ್ರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಭಾಷಾ ಬೆಳವಣಿಗೆ, ಮಕ್ಕಳ ಪಾಠದ ಜೊತೆಗೆ ಆಟ ಸೇರಿದಂತೆ ಎಲ್ಲ ಕ್ರೀಯಾತ್ಮ ಚಟುವಟಿಕೆಗಳನ್ನು ಕೈಗೊಂಡು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ವಾತಾವರಣ ಈ ಕೇಂದ್ರದಲ್ಲಿ ಕಲ್ಪಿಸಲಾಗಿದ್ದು, ಲೋಹಗಾಂವ ಅಂನವಾಡಿ ಕೇಂದ್ರದ ಮಾದರಿ ನಿರ್ವಣೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಮಾಹಿತಿ ನೀಡಿದರು.