ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ-ಮಂಜುನಾಥ್

ಚಿತ್ರದುರ್ಗ.ಮಾ.೩೦: ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಎ.ಆರ್.ಮಂಜುನಾಥ್ ಹೇಳಿದರು. ನಗರದ ಡಯಟ್‌ನಲ್ಲಿ  ಭಾರತೀಯ ಶಿಕ್ಷಣ ಮಂಡಲ್ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಸುಸ್ಥಿರ ಸಮಾಜವನ್ನು ರೂಪಿಸುವ ಆಶಯವನ್ನು ಒಳಗೊಂಡಿದೆ. ಎಂದರು. ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಮಾತನಾಡಿ, ಶಿಕ್ಷಣ ನೀತಿಯಲ್ಲಿ ಭಾಷೆ ಮತ್ತು ಗಣಿತದ ಮೂಲ ಪರಿಕಲ್ಪನೆಗಳನ್ನು ಬೆಳೆಸಲು ಹೆಚ್ಚು ಆದ್ಯತೆ ನೀಡಿದ್ದು ಈ ವರ್ಷ ಸಂಖ್ಯಾಶಾಸ್ತಿçÃಯ ವರ್ಷ ಎಂದು ಆಚರಣೆ ಮಾಡಲಾಗುತ್ತಿದೆ. ಮಗು ತಾನು ಕಲಿಯುವ ವಿಷಯವನ್ನು ಆಸಕ್ತಿಯಿಂದ ಕಲಿಯಲು ಆಟ,ವಸ್ತುಗಳ ಬಳಕೆ, ಕಥೆ, ಇತ್ಯಾದಿ ಚಟುವಟಿಕೆ ಮೂಲಕ ಕಲಿಸುವ ಪದ್ಧತಿಗೆ ಆದ್ಯತೆ ನೀಡಲಾಗಿದೆ. ಎಂದರು. ಸಹಾಯಕ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಅಳೆಯಲು ಅಂಕಗಳ ಆಧಾರದ ಮೌಲ್ಯಮಾಪನಕ್ಕಿಂತ ಜ್ಞಾನ ವಿಕಾಸ, ಕಲಿಕಾ ಆಸಕ್ತಿಗೆ ಒತ್ತು ನೀಡಲಾಗಿದೆ. ಮಗು ಪರೀಕ್ಷೆ ಎಂಬ ಭಯದ ಭಾವನೆ ಬೆಳೆಸಿಕೊಳ್ಳದೆ ಕಂಠಪಾಠ ಪದ್ಧತಿ ಮತ್ತು ಯಾಂತ್ರಿಕ ಕಲಿಕೆಯಿಂದ ಮುಕ್ತಗೊಳಿಸುವಲ್ಲಿ ಈ ನೀತಿ ಪೂರಕವಾಗಿದೆ. ವಿವಿಧ ಆಯಾಮಗಳಲ್ಲಿ ಬೌದ್ಧಿಕ ವಿಕಸನ, ವಿದ್ಯಾರ್ಥಿಯ ವರ್ತನೆ, ಮಾನಸಿಕ ಕ್ಷಮತೆ ಮೂಲಕ ಮಗುವಿನ ಶೈಕ್ಷಣಿಕ ಪ್ರಗತಿ ಮೌಲ್ಯಮಾಪನ ಮಾಡುವ ಆಶಯವನ್ನು ಹೊಂದಿದೆ ಎಂದರು. ಭಾರತೀಯ ಶಿಕ್ಷಣ ಮಂಡಲ್‌ನ ಸದಸ್ಯರಾದ ಬಿ.ಕೆ.ರಮ್ಯಾ ಶಿಕ್ಷಣ ನೀತಿ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಪಾತ್ರ ಕುರಿತು, ವಿಜಯಲಕ್ಷಿö್ಮ ತ್ರಿಭಾಷಾ ಸೂತ್ರ, ಶಿಕ್ಷಕರ ಆಯ್ಕೆ ಕುರಿತು ವಿಷಯ ಮಂಡನೆ ಮಾಡಿ ಶಿಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಿದರು. ನೋಡಲ್ ಅಧಿಕಾರಿ ಎಸ್.ಸಿ.ಪ್ರಸಾದ್, ಉಪನ್ಯಾಸಕ ಕೆ.ಜಿ.ಪ್ರಶಾಂತ್, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಭಾರತೀಯ ಶಿಕ್ಷಣ ಮಂಡಲ್ ಸದಸ್ಯ ಕಿರಣ್ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾರಾಣಿ ಮತ್ತು ಜಿಲ್ಲೆಯ 60 ಶಿಕ್ಷಕರು ಭಾಗವಹಿಸಿದ್ದರು. ಫೋಟೋ: ನಗರದ ಡಯಟ್‌ನಲ್ಲಿ ಸೋಮವಾರ ಭಾರತೀಯ ಶಿಕ್ಷಣ ಮಂಡಲ್ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಸಿ.ಟಿ.ಇ ಉಪನ್ಯಾಸಕ ಮಂಜುನಾಥ್ ಉದ್ಘಾಟಿಸಿದರು.