” ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಪೂರಕ ಚಟುವಟಿಕೆಗಳಿಗೆ ಆದ್ಯತೆ “

????????????????????????????????????


ಅಳ್ನಾವರ, ನ18: ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚದ ಎಲ್ಲ ರಂಗದಲ್ಲಿ ಮುನ್ನಡೆಯಲು ವಿದ್ಯಾರ್ಥಿಗಳನ್ನು ಸಜ್ಜು ಮಾಡಲಾಗುವದು. ವಿದ್ಯೆ ಜೊತೆಗೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವದು ಎಂದು ಅಳ್ನಾವರ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ವಿನಾಯಕ ಹಿರೇಮಠ ಹೇಳಿದರು.
ಇಲ್ಲಿನ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ ಎಂದರು.
ಮುಖ್ಯ ಶಿಕ್ಷಕಿ ಶೋಭಾ ನಾಯಕ್ ಮಾತನಾಡಿ, ಕಲಿಕೆ ಜೊತೆಗೆ ಮಕ್ಕಳಲ್ಲಿ ಆಳವಾಗಿ ಹುದುಗಿರುವ ಸೂಪ್ತ ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಲು ಆನೇಕ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಶ್ರಮಿಸಲಾಗುತ್ತಿದೆ ಎಂದರು.
ಮಕ್ಕಳಿಗಾಗಿ ರಂಗೋಲಿ, ವೇಷ ಭೂಷಣ, ಚಿತ್ರಕಲೆ ಬಿಡಿಸುವದು ಮುಂತಾದ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ವೀರ ಪುರುಷರ ವೇಷದಾರಿಗಳ ಗಮನ ಸೆಳೆದರು. ಸುಧಾ ಜೋಶಿ,ಸುಮಾ ವಿನಾಯಕ ಹಿರೇಮಠ, ನೂರಜಹಾನ್ ತಲ್ಲೂರ, ಸತೀಶ ವೀಣಾ, ಶಶಿಕಲಾ ಟೀಪರ್, ಮುಕುಂದ ಕುಲಕರ್ಣಿ, ರೇಷ್ಮಾ ಕಲ್ಲು ಇದ್ದರು.
1ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡ ವೇಷ ಭೂಷಣ ಸ್ಪರ್ಧಾ ವಿಜೇತರು: ಸಂಕಲ್ಪ ಉದೋಜಿ ( ಪ್ರಥಮ), ಅಭಿನೇತ್ರಾ ಶೆಟ್ಟಿ ( ದ್ವಿತೀಯ), ಅಥರ್ವ ಕಾಳೆ ( ತೃತೀಯ) .
ವಿಬಿನ್ನ ಸಂಸ್ಕ್ರತಿಯ ಉಡುಪು ಬಗ್ಗೆ 2 ನೇ ವರ್ಗದ ಮಕ್ಕಳಿಗಾಗಿ ಹಮ್ಮಿಕೊಂಡ ಸ್ಪರ್ಧಾ ವಿಜೇತರು: ಅಮೀನಾ ಮೊಕಾಸಿ (ಪ್ರಥಮ), ಸೃಷ್ಟಿ ಗೋಕಾಕಕರ ( ದ್ವಿತೀಯ), ಶಾಂಭವಿ ಬೊಂಗಾಳೆ ( ತೃತೀಯ).
3 ನೇ ವರ್ಗದ ಮಕ್ಕಳಿಗೆ ಹಮ್ಮಿಕೊಂಡ ಸ್ವತಂತ್ರ್ಯ ಯೋಧರ ವೇಷಧಾರಿ ಸ್ಪರ್ದಾ ವಿಜೇತರು : ಕೃತಿಕಾ ಕಡಕೋಳ ( ಪ್ರಥಮ), ಪ್ರತಿಕ್ಷಾ ಪೈ ( ದ್ವಿತೀಯ), ಅಮೃತಾ ಇಟಗೇಕರ ( ತೃತೀಯ).
ಕರೋನಾ ವೈರಸ್ ಬಗ್ಗೆ 4 ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡ ವೇಷ ಭೂಷಣ ಸ್ಪರ್ಧೆ : ಅಶುತೋಷ ದಡ್ಡಿ ( ಪ್ರಥಮ), ಸಾಹಿಲ್ ಅವರೊಳ್ಳಿ ( ದ್ವಿತೀಯ), ಉಮ್ಮೇಜಹಾನ ಗೋಕಕ ( ತೃತೀಯ).