ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಂಜಿ,ಕಲೋತ್ಸವ ಪೂರಕವಾಗಿದೆ

ರಾಯಚೂರು.ಸೆ.೧೧- ಶಾಲಾ ಮಕ್ಕಳು ಕೇವಲ ಪಠ್ಯ ಚಟುವಟಿಕೆಗಳು ಹೊಂದಿಗೆ ತಮ್ಮ ವ್ಯಕ್ತಿತ್ವ ವಿಕಾಸನ ಆಗಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಅಂತರ್ಗತ ಪ್ರತಿಭೆಗಳನ್ನು ಸೃಜನಶೀಲತೆಯನ್ನು ಹೊರಹಾಕಲು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮಕ್ಕಳ ಭವಾದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಪೂರಕವಾಗಿದೆ ಎಂದು ಡಿಡಿಪಿಐ ವೃಷಭೇಂದ್ರಸ್ವಾಮಿ ರಾಯಚೂರು ನಗರದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಾನನ ಪ್ರಭು ಅವರು ಮಾತಾಡಿ ಪ್ರತಿಯೊಂದು ಮಗುವೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಈಗಿನಿಂದಲೇ ಸ್ಪರ್ಧಾ ಮನೋಭಾವನೆ ಬಳಸಿಕೊಂಡು ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಇಂತಹ ವೇದಿಕೆಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ರೈಚೂರ್ ದಕ್ಷಿಣ ವಲಯದ ಸಿಆರ್‌ಪಿಕೆ ರಾಮು ಗಾಣದಾಳ ಮಾತಾಡಿದರು. ಕಾರ್ಯಕ್ರಮದಲ್ಲಿ ಕಾಕತೀಯ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಗುರುಗಪಲ್ಲಿ ಪ್ರಸಾದ ಕಾರ್ಯದರ್ಶಿಗಳಾದ ವೈಟ್ಲಾ ಪ್ರಸಾದ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀನಿವಾಸ ಮರೆಡ್ಡಿ, ಶಿಕ್ಷಕರ ಸಂಘ ತಾಲ್ಲೂಕ ಅಧ್ಯಕ್ಷ ಮಲ್ಲೇಶ ನಾಯಕ್, ಜಿಲ್ಲಾ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ, ಶಿಕ್ಷಕರ ಸಂಘದ ನಿರ್ದೇಶಕರಾದ ಮಾರುತಿ, ಬಿ ಆರ್ ಪಿ ಗಳಾದ ಕೋದಂಡ ರೆಡ್ಡಿ, ಸೋಮಶೇಖರ್, ಹರೀಶ್ ಸಿಆರ್‌ಪಿ ಶಶಿಧರ್ ಕಟ್ಟೆಮನೆ ,ಮುಖ್ಯಗುರುಗಳಾದ ಧನಲಕ್ಷ್ಮಿ, ದೇವೇಂದ್ರಪ್ಪ, ಆಂಜನೇಯ, ವಿರುಪನಗೌಡ, ನರಸಿಂಹರಾಜು, ಮಧುಸೂದನ್ ರೆಡ್ಡಿ, ಅನುಸೂಯ, ನಲ್ಲಮ್ಮ, ಲಕ್ಷ್ಮೀದೇವಿ ಉಪಸ್ಥಿತರಿದ್ದರು. ನಿರೂಪಣೆಯನ್ನು ಯಶೋಧಾ ಶಿಕ್ಷಕಿಯವರು ನೆರವೇರಿಸಿದರು.