
ಸಂಜೆವಾಣಿ ವಾರ್ತೆ
ಹೊಸಪೇಟೆ ಆ, 8- ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಾಯಂದಿರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಮಗುವಿನ ಆರೋಗ್ಯ ರಕ್ಷಣೆಗಾಗಿ ಕಾಲಕಾಲಕ್ಕೆ ಮಕ್ಕಳಿಗೆ ಚಿಕಿತ್ಸೆಗೆ ಒಳಪಡಿಸುವುದು ಸೇರಿದಂತೆ ಸಲಿಕೆ ಹಾಕಿಸವುಕ ಕಾರ್ಯದೊಂದಿಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಸಲಹೆ ನೀಡಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಲಸಿಕೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಮಕ್ಕಳಿಗೆ ನೀಡುವ ಲಸಿಕೆ ಮತ್ತು ಚಿಕಿತ್ಸೆ ಕುರಿತು ಇಲಾಖೆಯಿಂದ ಪ್ರತ್ಯೇಕ ದಾಖಲೀಕರಣವಾಗಬೇಕು. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಲಸಿಕಾ ಅಭಿಯಾನ ಆರಂಭಗೊಂಡಿದೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯಅತಿಥಿ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಮಾತನಾಡಿ, ಮಕ್ಕಳಿಗೆ ಲಸಿಕಾಕರಣ ಆಗಿರುವ ಬಗ್ಗೆ ಆಯಾ ಸಂದರ್ಭದಲ್ಲಿ ತಾಯಿ ಕಾರ್ಡ್‍ನಲ್ಲಿ ನಮೋದಿಸಲಾಗುತ್ತದೆ. ಭಾರತ ಸರ್ಕಾರದಿಂದ ಅಭಾ ಕಾರ್ಡ್ ಜಾರಿಗೊಳಿಸಿದ್ದು, ದೇಶಾದ್ಯಂತ ನೋಂದಣಿ ಪ್ರಕ್ರಿಯೆ ನಡೆದಿದೆ. ರೋಗಿಯ ಚಿಕಿತ್ಸೆಗೆ ಸಂಪೂರ್ಣ ಇತಿಹಾಸ ಅದರಲ್ಲಿ ದಾಖಲಾಗಲಿದೆ. ದೇಶದ ಯಾವುದೇ ಮೂಲೆಯ ಆಸ್ಪತ್ರೆಗೆ ದಾಖಲಾದರೂ ರೋಗಿಯ ಸಂಪೂರ್ಣ ವಿವರಗಳು ಲಭ್ಯವಾಗಲಿದ್ದು, ತ್ವತಿರಿಗತಿಯಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.
ಇಲ್ಲಿನ ಎಂಸಿಎಚ್ ಆಸ್ಪತ್ರೆಯಲ್ಲಿ ನುರಿತ ವೈದ್ಯರು, ಸಕಲ ಸೌಲಭ್ಯವಿದ್ದರೂ, ಜನರು ಸರ್ಕಾರಿ ಆಸ್ಪತೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಿನ್ನೆಲಯೆಲ್ಲಿ ತಾಲೂಕಿನಲ್ಲಿರುವ ಗರ್ಭಿಣಿಯರ ಸಮೀಕ್ಷೆ ನಡೆಸುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಸುರಕ್ಷಿತ ಹೆರಿಗೆಯ ಭರವಸೆ ಮೂಡಿಸಿ ಆಸ್ಪತ್ರೆಗೆ ಕರೆತರುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಡಿಎಚ್‍ಒ ಡಾ.ಸಲೀಂ ಮಾತನಾಡಿ, 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಮಾಸಿಕ 300 ಹೆರಿಗೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ 600 ಹೆರಿಗೆಯಾಗುವ ಸಾಧ್ಯತೆಗಳಿವೆ. ಅದಕ್ಕನುಗುಣವಾಗಿ ವಿವಿಧ ವೈದ್ಯಕೀಯ ಸೌಲಭ್ಯಗಳು ವೃದ್ಧಿಯಾಗಬೇಕು ಸೆಕ್ಯೂರಿಟಿ ಗಾರ್ಡ್‍ಗಳನ್ನು ಸಹ ನೀಡಬೇಕಿದೆ ಎಂದರು.
ವಿವಿಧ ಶಾಲೆಗಳ ಮುಖ್ಯಗುರುಗಳಾದ ರೆಜಿನಾ, ಕರಿಯಪ್ಪಸ್ವಾಮಿ, ರೇಖಾ, ಸವಿತಾ, ಶೀಲಾ, ಪುಷ್ಪಾ, ಶಿವಪ್ರಕಾಶ, ಮಂಜುನಾಥ, ರಾಮಚಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ನಗರಸಭೆ ಅಧ್ಯಕ್ಷೆ ಎ.ಲತಾ, ಡಿಡಿಪಿಐ ಯುವರಾಜ್ ನಾಯಕ್, ಪತ್ತಿಕೊಂಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪಿ.ಎಂ.ಶ್ರೀಪಾದ್, ಬಿಸಿಯೂಟ ವಿಭಾಗದ ಎ.ಎನ್.ಸುಧಾಕರ, ತಾಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ತಿಮ್ಮಪ್ಪ, ಶಿಕ್ಷಣ ಅಧಿಕಾರಿ ಭಜಂತ್ರಿ, ಶಿವಕುಮಾರ್, ಅನುದಾನಿತ ಶಾಲೆಗಳ ಶಿಕ್ಷಕರ ಸಂಘದ ಯಮನೂರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
One attachment • Scanned by Gmail