ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ದೈಹಿಕ ಶಿಕ್ಷಕರ ಕೊಡುಗೆ ಅಪಾರ : ಮೋಹನ್ ಜೀರಗ್ಯಾಳ

ಅಥಣಿ : ಡಿ.20: ಪ್ರತಿಯೊಂದು ಶಾಲೆಯು ಪರಿಸರ ಸ್ವಚ್ಚ, ಹಾಗೂ ಸುಂದರವಾಗಿರಲು ದೈಹಿಕ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಕಲಿಕೆಯನ್ನು ಮನರಂಜನಾತ್ಮಕವಾಗಿ ಮಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯಲ್ಲಿ ದೈಹಿಕ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಚಿಕ್ಕೋಡಿ ವಿಭಾಗದ ಡಯಟ್ ಪ್ರಾಚಾರ್ಯ ಮೋಹನ ಜಿರಗ್ಯಾಳ ಹೇಳಿದರು
ಅವರು ತಾಲೂಕಿನ ಸಪ್ತಸಾಗರ ಬನದಲ್ಲಿ ದರೂರ ವಲಯದ ದೈಹಿಕ ಶಿಕ್ಷಕರ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಅಚ್ಚುಮೆಚ್ಚಿನ ಶಿಕ್ಷಕ ಎಂದರೆ ಅದು ದೈಹಿಕ ಶಿಕ್ಷಕ, ಏಕೆಂದರೆ ಇವರು ಆಟದ ಮೂಲಕ ಅವರಲ್ಲಿ ಶಿಕ್ಷಣಕ್ಕೆ ಪೆÇ್ರೀತ್ಸಾಹವನ್ನು ಉಂಟು ಮಾಡುವ ಕಲೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಶಾಲಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿಲ್ಲ, ಇತರ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣಕ್ಕೆ ಅಂತರ ಕಾಪಾಡಿಕೊಳ್ಳುತ್ತಿರುವವುದು ಹಾಗೂ ದೈಹಿಕ ಶಿಕ್ಷಣಕ್ಕೆ ಸಮಯವನ್ನು ಹೊಂದಿಸದೇ ಇರುವುದು ದುರದೃಷ್ಠಕರ, ಈ ಎಲ್ಲ ಅಡಚಣೆಗಳ ಮಧ್ಯ ದೈಹಿಕ ಶಿಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವುದು ಮಾದರಿ ಕಾರ್ಯ ಎಂದರು.
ಅಥಣಿ ಕ್ಷೇತ್ರಶಿಕ್ಷಣಾಧಿಕಾರಿ ಎಮ್ ಬಿ ಮೊರಟಗಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಠ್ಯಪುಸ್ತಕದ ಅಭ್ಯಾಸದ ಜೊತೆಗೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಬಹಳಷ್ಟು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳುವುದರ ಜೊತೆಗೆ ಸ್ಪರ್ಧೆಯಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು ಎಂದರು.
ಕ್ಷೇತ್ರ ದೈಹಿಕ ಶಿಕ್ಷಣ ಅಧಿಕಾರಿ ಎಂ ಆರ್ ಹಲಸಂಗಿ ಮಾತನಾಡಿದರು. ಈ ವೇಳೆ ಶಿಕ್ಷಣ ಸಂಯೋಜಕ ಶ್ರೀಶೈಲ ಸನದಿ, ಜುನೇಧಿ ಪಟೆಲ್, ಜಿ ಎಮ್ ಅತ್ತಾರ, ಎಸ್ ಎಮ್ ಪಾಲಬಾಂವಿ, ಶಿವಾನಂದ ಅವರಾದಿ, ಪಾಂಡುರಂಗ ಮದಬಾಂವಿ, ಸಿ ಕೆ ಲಮಾಣಿ, ಸಿ ಜೆ ಗಸ್ತಿ,ವಾಯ್ ಎಸ್ ನಾಯಿಕ, ಚಿದಾನಂದ ಕಾಂಬಳೆ, ಎಸ್ ಬಿ ಕರೋಶಿ, ಶಾಂತಾರಾಮ ಜೋಗಳೆ, ಮದಗೌಡ ಪುಜಾರಿ, ಎಲ್ ಕೆ ತೋರನಗಟ್ಟಿ, ದಾವಲ ಮಕಾನದಾರ, ಉಮೇಶ ಮೇಲಿನಕೇರಿ, ಆರ್ ಎ ಪಾಟೀಲ, ರಾವಸಾಬ ಸಂಗಲಗಿ, ಕೆ ಪಿ ಖೋತ, ಬಿ ಎಸ್ ಕೋಳಿ, ಪಿ ಎನ್ ಆಲಗೂರ, ಬಿ ಎಲ್ ಸಸಾಲಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.