ಮಕ್ಕಳ ಸಮೀಕ್ಷಾ ಕಾರ್ಯ ಮುಂದೂಡಿಕೆ

ಕುಕನೂರು,ಜೂ.5- ಕೋವಿಡ್ -19ರ ಹಿನ್ನೆಲೆಯಲ್ಲಿ ಕರೋನಾ 3 ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಮಕ್ಕಳ ಸರ್ವೆ ಕಾರ್ಯ ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ವಹಿಸಿದ್ದ ಸಮೀಕ್ಷಾ ಕಾರ್ಯವನ್ನು ಜಿಲ್ಲಾಡಳಿತ ತಕ್ಷಣ ಮುಂದೂಡಿದೆ.
ಒಲ್ಲದ ಮನಸಿನಿಂದಲೇ ಕರ್ತವ್ಯ ನಿರ್ವಹಿಸುವ ಎದುರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯನ್ನು ಮಾತ್ರ ಸಮೀಕ್ಷಾ ಕಾರ್ಯಕೈಗೊಳ್ಳುವಂತೆ ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕುರಿತು ಶಿಕ್ಷಕರ ಸಂಘಟನೆಗಳೊಂದಿಗೆ ಸಭೆ ನಡೆಸಿ ಸಮೀಕ್ಷಾ ಕಾರ್ಯಕ್ಕೆ ಅಣಿಯಾಗುವಂತೆ ತಿಳಿಸಿದ್ದು, ಭಾರೀ ವಿರೋಧದ ನಡೆವೆಯೂ ಸರಕಾರ ಹಿಂದೆ ಸರಿದಿಲ್ಲ. ಇದುವರೆಗೆ ಶಿಕ್ಷಕರನ್ನು ಚುನಾವಣೆ ಕಾರ್ಯ ಮತ್ತು ಕೋವಿಡ್ 19 ವಿವಿಧ ಕಾರ್ಯಗಳಿಗೆ ಬಳಸಿದ ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 400ಕ್ಕೂ ಅಧಿಕ ಶಿಕ್ಷಕರು ಮೃತರಾಗಿರುವ ಹೃದಯ ವಿದ್ರಾವಕ ಘಟನೆಗಳು ನೆನೆದರೆ ಶಿಕ್ಷಕರು ಮತ್ತು ಅವರ ಕುಟುಂಬ ಪರಿವಾರ ಭಯಭೀತಿಯಿಂದ ಹೊರ ಬಂದಿಲ್ಲ. ಈ ನಡುವೆಯೇ ಮತ್ತೆ ಮನೆ ಮನೆ, ಗಲ್ಲಿ ಗಲ್ಲಿಗಳಿಗೆ ಮತ್ತು ಕೋವಿಡ್ ಸೋಂಕಿತರ ಮನೆಗಳಿಗೂ ತೆರಳಿ ಸಮೀಕ್ಷಾ ಕಾರ್ಯ ನಡೆಸುವುದು ಕಬ್ಬಿಣದ ಕಡಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಕಡೆಗೆ ಕರ್ತವ್ಯ ಮತ್ತೊಂದು ಕಡೆಗೆ ಆರೋಗ್ಯ ಮತ್ತು ಸಾವಿನ ಆತಂಕದ ನಡುವೆಯೇ ಕರ್ತವ್ಯಕ್ಕೆ ಇಳಿಯಬೇಕಾದ ಸನ್ನಿವೇಶ ಎದುರಾದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಶಿಕ್ಷಕ ಸಂಘಟನೆಗಳು ಮತ್ತು ಸರಕಾರಿ ನೌಕರರ ಸಂಘಟನೆಗಳ ಮನವಿ ಮೇರೆಗೆ ಸಮೀಕ್ಷಾ ಕಾರ್ಯವನ್ನು ಮುಂದೂಡಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕಂತೂ ಶಿಕ್ಷಕರು ನಿಟ್ಟಿಸಿರು ಬಿಡುತ್ತಿದ್ದಾರೆ.