ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಧರ್ಮಸ್ಥಳ ಸಂಸ್ಥೆ ಜ್ಞಾನತಾಣದ ಮೂಲಕ ಉತ್ತೇಜನ -ಶಾರದಾಬಾಯಿ

ಕೂಡ್ಲಿಗಿ.ನ.9:-ಆಧುನಿಕ ಯುಗದಲ್ಲಿ ಗ್ರಾಮೀಣ ಭಾಗದ ಬಡಮಕ್ಕಳು ಸಹ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಳ್ಳಲು ಲ್ಯಾಬ್ ಟ್ಯಾಬ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಡೀ ರಾಜ್ಯದಲ್ಲಿ ಜ್ಞಾನತಾಣ ಯೋಜನೆ ಮೂಲಕ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುತ್ತಿದ್ದು ಇದರ ಸದುಪಯೋಗ ಪಡೆದು ಮಕ್ಕಳು ಶೈಕ್ಷಣಿಕ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ನೂತನ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ ಲ್ಯಾಬ್ ಟ್ಯಾಬ್ ವಿತರಿಸಿ ಮಕ್ಕಳಿಗೆ ಕಿವಿಮಾತು ಹೇಳಿದರು.
ಅವರು ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಜ್ಞಾನತಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅತೀ ಹಿಂದುಳಿದ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಬಡಕುಟುಂಬಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರ್ ಶಿವರಾಜ್ ಮಾತನಾಡಿ ಸಬ್ಸಿಡಿ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜ್ಞಾನ ತಾಣ ಎಂಬ ಯೋಜನೆ ರೂಪಿಸಿ ಗ್ರಾಮೀಣ ಬಾಗದ ಬಡ ಮಕ್ಕಳು ಆಧುನಿಕ ಯುಗದಲ್ಲಿ ನಗರ ಪಟ್ಟಣದ ಮಕ್ಕಳಂತೆ ಶೈಕ್ಷಣಿಕವಾಗಿ ಮುಂದಾಗಲಿ ಎಂದು ಒಂದೊಳ್ಳೆ ಅಭಿಪ್ರಾಯದಿಂದ ಲ್ಯಾಪ್ ಟ್ಯಾಪ್ ಹಾಗೂ ಟ್ಯಾಬ್ ವಿತರಿಸುತ್ತಿದ್ದು ಶಿಕ್ಷಣಕ್ಕಾಗಿ, ಜ್ಞಾನಕ್ಕಾಗಿ ಬಳಸಿಕೊಂಡು ಉಪಯೋಗ ಪಡೆದುಕೊಳ್ಳುವಂತೆ ಮಕ್ಕಳಿಗೂ ಹಾಗೂ ಪಾಲಕ ಪೋಷಕರಿಗೂ ಅದರ ಸದ್ಭಳಕೆ ಕುರಿತು ತಿಳಿಸಿದರು.
ಕೂಡ್ಲಿಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದಂತೆ ಆಯಾ ಜಿಲ್ಲೆ ತಾಲೂಕಿನಲ್ಲಿ ಒಂದೇ ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸ್ಥಳೀಯ ಮುಖಂಡರಿಂದ ಜ್ಞಾನತಾಣ ಯೋಜನೆಯಿಂದ ರಾಜ್ಯದಲ್ಲಿ 20ಸಾವಿರ ಟ್ಯಾಬ್ ಹಾಗೂ ಹತ್ತು ಸಾವಿರ ಲ್ಯಾಪ್ ಟ್ಯಾಪ್ ವಿತರಣೆ ಮಾಡುತ್ತಿದ್ದು ಕೂಡ್ಲಿಗಿ ತಾಲೂಕಿನಲ್ಲಿ 150 ಬಡಮಕ್ಕಳನ್ನು ಗುರುತಿಸಿ ಲ್ಯಾಪ್ ಟ್ಯಾಪ್ ಹಾಗೂ ಟ್ಯಾಬ್ ವಿತರಿಸಲು ಮುಂದಾಗಿದೆ ಎಂದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪಕ ಸಮಿತಿಯ ಚಿದಾನಂದಸ್ವಾಮಿ ಹಾಗೂ ಇತರರು ಮಾತನಾಡಿದರು ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸಿದ್ದೇಶ, ಗುಂಡಣ್ಣ ಇತರರು ವೇದಿಕೆಯಲ್ಲಿದ್ದರು ಕೋವಿಡ್ ಪರಿಣಾಮ ನಾಲ್ಕೈದು ಗ್ರಾಮೀಣ ಬಡ ಮಕ್ಕಳಿಗೆ ಸಾಂಕೇತಿಕವಾಗಿ ಲ್ಯಾಪ್ ಟ್ಯಾಪ್ ಹಾಗೂ ಟ್ಯಾಬ್ ವಿತರಿಸಲಾಯಿತು. ಸಂಸ್ಥೆಯ ಕೃಷಿ ಮೇಲ್ವಿಚಾರಕ ರಮೇಶ ಪೂಜಾರ್ ನಿರೂಪಿಸಿದರು, ಸಹದೇವ ಸ್ವಾಗತಿಸಿದರೆ ಮಂಗಳ ವಂದನಾರ್ಪಣೆ ಸಲ್ಲಿಸಿದರು.