
ಶಿಕ್ಷಕಿ ಮಧುಮತಿ ಸಿಂಗ್ ಸ್ವಂತ ಖರ್ಚಿನಲ್ಲಿ ನಿರ್ಮಾಣ
ರಾಯಚೂರು,ಮಾ.೨೯- ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲುಕಿನ ಕಂದಕೂರು ಸರ್ಕಾರಿ ಪ್ರೌಡ ಶಾಲೆಯಲ್ಲಿ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯವನ್ನು ವಿಜ್ಞಾನ ಶಿಕ್ಷಕಿಯಾಗಿರುವ ಮಧುಮತಿ ಸಿಂಗ್ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದಾರೆ.
ಕಂದಕೂರ ಸರ್ಕಾರಿ ಶಾಲೆಯಲ್ಲಿ ಇದುವರಿಗೂ ಪ್ರಯೋಗಲಯ ಇರಲಿಲ್ಲ ಅದನ್ನರಿತ ಶಿಕ್ಷಕಿ ಕಳೆದ ೨-೩ ವರ್ಷದಿಂದ ತಿಂಗಳ ಸಂಬಳದಲ್ಲಿ ೫-೬ ಸಾವಿರ ಹಣ ಬದಿಗಿಟ್ಟು ಮಕ್ಕಳ ಶಿಕ್ಷಣಕ್ಕೆ ಉಪಯೋಗವಾಗುವ ಪ್ರಯೋಗಾಲಯವನ್ನು ಅವರು ನಿರ್ಮಾಣ ಮಾಡಿರುವುದು ಬೇರೆಯವರಿಗೆ ಮಾರ್ಗದರ್ಶನವಾಗಿದೆ.
ಪ್ರಯೋಗಾಲಯ ಇರಲಿಲ್ಲ ಹಾಗಾಗಿ ಪಾಠ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕಾಗಿ ವೈಯಕ್ತಿಕ ಆಸಕ್ತಿಯಿಂದ ಕಳೆದ ಮೂರು ವರ್ಷದಿಂದ ಪ್ರತಿ ತಿಂಗಳು ಸಂಬಳದಲ್ಲಿ ೧೦ ಣo ೧೫% ಪ್ರಯೋಗಾಲಯಕ್ಕೆ ಬಳಸುತ್ತಿದ್ದೆ. ಅಂದು ಕೊಂಡಂತೆ ಸುಸಜ್ಜಿತ ಪ್ರ ಯೋಗಾಲಯ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೆ ಸಹ ಉದ್ಯೋಗಿಗಳಾದ ವಿನೋದ್ ಕುಮಾರ್ ಗುಡಿ, ನಾಗಪ್ಪ, ಹಾಗೂ ಮುಖ್ಯ ಗುರುಗಳಾದ ಎಸ್.ಎಂ. ಭೂತಾಲ್ ಸಹಕರಿಸಿದ್ದಾರೆ ಹಾಗೂ ಮಕ್ಕಳ ಸಹಕಾರ ಕೂಡ ಇದೆ,ಶಾಲೆಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚಿನ ಸಸ್ಯಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದೇವೆ. ಮಕ್ಕಳ ಅಟಪಾಟಗಳ ಜತಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಶಾಲೆಯ ಮುಂಬಾಗದಲ್ಲಿ ಇರುವ ಗಿಡಗಳು ಕೈ ಬಿಸಿ ಕರಿಯುತ್ತವೆ. ಅದರ ಜೊತೆಗೆ ಶಾಲೆಯಲ್ಲಿ ಹಸಿರುಮನೆ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೊಂದಿರುವ ಎಲ್ಲ ರೀತಿಯ ಪಾಠ್ಯೆತರ ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ಮದುಮತಿ ಸಿಂಗ್ ತಿಳಿಸಿದರು.
ಮದುಮತಿ ಸಿಂಗ್ ಅವರ ಸೇವೆ ಅನನ್ಯ ಎಂದು ಗ್ರಾಮಸ್ಥರು ಕೋಂಡಾಡಿದರು ಯಾದಗಿರಿ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಇತ್ತೀಚೆಗೆ ವಿಜ್ಞಾನ ವಿಭಾಗದ ಪ್ರಯೋಗಾಲಯವನ್ನು ಅರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿಟ್ಟ ಶಿಕ್ಷಕಿ ಮದುಮತಿ ಸಿಂಗ್ ಅವರನ್ನ ಅಭಿನಂದಿಸಿದರು. ಯಾದಗಿರಿಯಿಂದ ಕಂದಕೂರುಗೆ ಪ್ರತಿನಿತ್ಯ ಸಂಚಾರ ಮಾಡಿ ಮಕ್ಕಳ ಮೇಲೆ ಅಪಾರವಾದ ಪ್ರೀತಿಯಿಂದ ಅಕ್ಕರೆ ಯಿಂದ ಮಕ್ಕಳ ಶಿಕ್ಷಣಗೆ ಒತ್ತು ನೀಡಿದರು.
ಮಕ್ಕಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೋಡುವುದು, ಓದುವುದು ಬಿಟ್ಟರೆ ವಿಜ್ಞಾನ ವಿಭಾಗದ ಪ್ರಯೋಗಾಲಯದಿಂದ ವಿದ್ಯಾರ್ಥಿಗಳು ನೇರವಾಗಿ ವಿಜ್ಞಾನ ಪ್ರಯೋಗಾಲಯದ ಮುಖಾಂತರ ಕಲಿಕೆಯ ಬಗ್ಗೆ ಹೆಚ್ಚು ಗಮನ ಹರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.