ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಸಹ ನಿಗಾ ವಹಿಸಿ: ಆರ್.ಎಂ.ಸ್ವಾಮಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 08- ಪೆÇೀಷಕರು ನಿಮ್ಮ ಮಕ್ಕಳ ವ್ಯಾಸಂಗದ ಬಗ್ಗೆ ಹೆಚ್ಚು ಗಮನ ಹರಿಸಿ. ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಲೇಜಿಗೆ ಆಗಾಗ ಭೇಟಿ ನೀಡಿ ಉಪನ್ಯಾಸಕರ ಜೊತೆ ಚರ್ಚಿಸಿ ಎಂದು ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ. ಸ್ವಾಮಿ ಹೇಳಿದರು.
ನಗರದ ಜೆಎಸ್‍ಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಸಮಿತಿ ಆಯೋಜಿಸಿದ್ದ ಶಿಕ್ಷಕರು ಮತ್ತು ಪೆÇೀಷಕರ ಸಭೆಯನ್ನುz್ದÉೀಶಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಉಪನ್ಯಾಸಕರು ಮಾಡುವ ಪಾಠ ಪ್ರವಚನದ ಜೊತೆಗೆ, ನಿಮ್ಮ ಮಕ್ಕಳು ಮನೆಯಲ್ಲಿ ನಿಯಮಿತವಾಗಿ ವ್ಯಾಸಂಗ ಮಾಡುವ ಬಗ್ಗೆ ಪೆÇೀಷಕರು ಗಮನ ಹರಿಸಬೇಕು. ನೀವು ಮೊಬೈಲ್, ಟಿವಿಯನ್ನು ಬಂದ್ ಮಾಡಿ, ನಿಮ್ಮ ಮಕ್ಕಳೊಡನೆ ಕುಳಿತು ಅವರನ್ನು ಓದಿಸಿ. ಅವರ ಪಾಠದ ಬಗ್ಗೆ ಚರ್ಚಿಸಿ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ. ನೀವು ನಿಮ್ಮ ಮಕ್ಕಳ ಮೇಲೆ ವಹಿಸುವ ಕಾಳಜಿಗಿಂತ ಹೆಚ್ಚು ಕಾಳಜಿಯನ್ನು ಜೆಎಸ್‍ಎಸ್ ಸಂಸ್ಥೆ ವಹಿಸುತ್ತದೆ. ಇಲ್ಲಿ ನುರಿತ ಪ್ರಾಧ್ಯಾಪಕರಿದ್ದಾರೆ. ಉನ್ನತ ಮಟ್ಟದ ಮೂಲಸೌಕರ್ಯಗಳಿವೆ. ಜಿಲ್ಲೆಯಲ್ಲೇ ಉನ್ನತ ಕಾಲೇಜು ಎಂಬ ಹೆಸರನ್ನು ನಮ್ಮ ಕಾಲೇಜು ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಕೆ.ಪಿ. ಮಹದೇವಪ್ಪ ಮಾತನಾಡಿ, ನ್ಯಾಕ್ ಸಮಿತಿಯಿಂದ ಎ ಗ್ರೇಡ್ ಪಡೆದಿರುವ ಜಿಲ್ಲೆಯ ಏಕೈಕ ಕಾಲೇಜು ಚಾ.ನಗರ ಜೆಎಸ್‍ಎಸ್ ಮಹಿಳಾ ಕಾಲೇಜಾಗಿದೆ. ಕಾಲೇಜಿನ ಮೂಲ ಸೌಕರ್ಯ, ಅಧ್ಯಾಪನ ಉನ್ನತವಾಗಿದ್ದು, ಮುಂದಿನ ನ್ಯಾಕ್ ಪರಿಶೀಲನೆಯಲ್ಲಿ ಎ ಪ್ಲಸ್ ಗ್ರೇಡ್ ಪಡೆಯುವ ಗುರಿ ಹೊಂದಲಾಗಿದೆ. ನನ್ನ 30 ವರ್ಷಗಳ ಸೇವೆಯಲ್ಲಿ ಇಂಥ ಸೌಹಾರ್ದಯುತ ವಾತಾವರಣ, ವಿನಯ ವಿಧೇಯತೆಯ ವಿದ್ಯಾರ್ಥಿನಿಯರನ್ನು ಬೇರೆಲ್ಲೂ ನೋಡಿಲ್ಲ ಎಂದರು.
ಮೊಬೈಲ್ ಫೆÇೀನ್ ಉಪಕಾರಿಯೂ ಹೌದು, ಅಪಾಯಕಾರಿಯೂ ಹೌದು. ಸ್ಪರ್ಧಾತ್ಮಕ ಸಮಾಜದಲ್ಲಿ ಇಂದು ಪೆÇೀಷಕರು ಮೊಬೈಲ್ ಫೆÇೀನ್ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಜ್ಞಾನ ನೀಡಬಹುದು. ಪ್ರತಿದಿನ ಮಕ್ಕಳಿಗೆ 2 ಗಂಟೆ ಸಮಯ ಓದುವ ವಾತಾವರಣವನ್ನು ಪೆÇೀಷಕರು ಕಲ್ಪಿಸಿಕೊಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಿ. ಸಿದ್ದರಾಜು ಮಾತನಾಡಿ, ಪೆÇೀಷಕರು ನಿಮ್ಮ ಮಕ್ಕಳ ಮೊಬೈಲ್ ಫೆÇೀನ್ ಬಳಕೆಯ ಬಗ್ಗೆ ಎಚ್ಚರವಹಿಸಿ, ಅವರ ಮೊಬೈಲ್ ಫೆÇೀನ್ ತುಂಬಾ ಖಾಸಗಿಯಾಗಿರದಂತೆ ನೋಡಿಕೊಳ್ಳಿ. ಸಾಮಾಜಿಕ ಜಾಲತಾಣಗಳ ಬಳಕೆ ಮಿತವಾಗಿರಲಿ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿ. ಅವರ ಜೊತೆ ಹೆಚ್ಚು ಸಮಯ ಕಳೆಯಿರಿ ಎಂದು ಕಿವಿಮಾತು ಹೇಳಿದರು.
ಗಣಿತ ವಿಭಾಗದ ಮುಖ್ಯಸ್ಥೆ ಅರುಣಾಶ್ರೀ, ಕನ್ನಡ ಉಪನ್ಯಾಸಕಿ ಜಮುನಾ, ರೂಪಶ್ರೀ ಮಾತನಾಡಿದರು. ಪೆÇೀಷಕರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನಸ್ವಾಮಿ, ಭೂಗೋಳಶಾಸ್ತ್ರ ಮುಖ್ಯಸ್ಥ ಬಸವರಾಜು, ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್, ಕನ್ನಡ ವಿಭಾಗದ ಮುಖ್ಯಸ್ಥ ವರಪ್ರಸಾದ್, ಸುಷ್ಮಾ, ಸೌಮ್ಯಾ ಮತ್ತಿತರರು ಉಪಸ್ಥಿತರಿದ್ದರು.