
ಸಂಜೆವಾಣಿ ವಾರ್ತೆ
ಗಂಗಾವತಿ, ಫೆ.26: ಅಪಾಯಕ್ಕೆ ಅಥವಾ ದೌರ್ಜನಕ್ಕೆ ಒಳಗಾದ ಮಕ್ಕಳನ್ನು ಗುರುತಿಸಿ ಅವರನ್ನು ರಕ್ಷಣೆಗಾಗಿ ಆ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವ ಕಾರ್ಯದ ಜೊತೆಗೆ ಮಕ್ಕಳ ರಕ್ಷಣೆಯ ಕಾನೂನು ಬಗ್ಗೆ ಅರಿತುಕೊಳ್ಳಬೇಕು ಎಂದು ತಾಲೂಕಾ ಆರೋಗ್ಯ ವ್ಯದ್ಯಾಧಿಕಾರಿ ಡಾ. ಶರಣಬಸಪ್ಪ ಹೇಳಿದರು.
ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ಚೈಲ್ಡ್ ಫಡ್ ಇಂಡಿಯಾ ಸಹಯೋಗದಲ್ಲಿ ಗ್ರಾಮ ಮಟ್ಟದ ಆಶಾ ಕಾರ್ಯಕರ್ತರಿಗೆ ಮತ್ತು ಪಾಲಕರಿಗೆ ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತು ನಡೆದ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ಹಕ್ಕುಗಳ ಒಡಬಂಡಿಕೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಮಕ್ಕಳ ಕುರಿತು ಅಂಕಿ ಅಂಶಗಳು. ಮಕ್ಕಳ ಪೋಷಣೆ ಮತ್ತು ರಕ್ಷಣೇಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಸಮಿತಿಯ ಕಾರ್ಯಚಟುವಟಟಿಕೆಗಳ ಕುರಿತು ವಿವರವಾದ ಮಾಹಿತಿ ತಿಳಿದುಕೊಂಡು ನಮ್ಮ ಕಾರ್ಯ ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ರಕ್ಷಣೆಗಾಗಿ ಮುಂದಾಗಬೇಕು. ಮಕ್ಕಳ ಸಹಾಯವಾಣಿ 1098, 112 ಮತ್ತು ಮಕ್ಕಳು ಪತ್ರ ಬರೆಯುವ ವಿಧಾನ-ದೂರು ನೀಡುವದರ ಬಗ್ಗೆ ಕಲಿಸಬೇಕು ಎಂದರು
ಕಪುಚುನ್ ಕೃಷಿಕ ಸೇವಾ ಕೆಂದ್ರದ ಯೋಜನಾಧೀಕಾರಿಗಳಾದ ಡಾ.ಸದಾಶೀವ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟಗಿರಿ ಪ್ರಾಥಮೀಕ ಆರೋಗ್ಯ ಆರೋಗ್ಯಧಿಕಾರಿ ಅಜುಂಮ್ ತಾಜ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾನೂನು ಅಧಿಕಾರಿ ಶಿವಲಿಲಾ, ರವಿಕುಮಾರ ಪವಾರ, ಸಂಪನ್ಮೂಲ ಅಧಿಕಾರಿ ಪ್ರಶಾಂತ ರಡ್ಡಿ ಚೈಲ್ ಫಂಡ್ ಇಂಡಿಯಾ ಸಂಯೋಜಕ ಪ್ರಕಾಶ ಕಡಗದ ಹಾಲಹಳ್ಳಿ, ಕಾರ್ಯಕರ್ತರಾದ ಮಂಜುನಾಥ ಸಾಗರ, ಶಿವರಂಜಿನಿ, ವಿಜಯಲಕ್ಷೀ, ಕಮಲಾಕ್ಷಿ, ಆಶಾ ಕಾರ್ಯಕರ್ತರು ಇದ್ದರು.