ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳ ದಾಳಿ ಶಾಲೆ ಬಿಟ್ಟ 8 ಮಕ್ಕಳು ಪತ್ತೆ: ಮಕ್ಕಳ ಕಳ್ಳರ ವದಂತಿ ಬೆಚ್ಚಿಬಿದ್ದ ಪಾಲಕರು!

ತಾಳಿಕೋಟೆ :ಡಿ.4: ಮಕ್ಕಳ ಕಳ್ಳರು ಬಂದಿದ್ದಾರೆ ಶಾಲೆಯಲ್ಲಿದ್ದ ನಮ್ಮ ಮಕ್ಕಳನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆಂಬ ವದಂತಿ ಶುಕ್ರವಾರರಂದು ಮದ್ಯಾಹ್ನ ಹಬ್ಬಿದ ಹಿನ್ನೇಲೆ ಪಟ್ಟಣದ ಆಶ್ರಯ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಪಾಲಕರು ಮುಗಿಬಿದ್ದಿದ್ದಲ್ಲದೇ ತಮ್ಮ ಮಕ್ಕಳ ಸುರಕ್ಷತೆಯನ್ನು ಪರಿಶೀಲಿಸಿತೊಡಗಿದ್ದು ಕಂಡು ಬದಿತು.
ಘಟನೆಯ ವಿವರಣೆ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ, ಹಾಗೂ ಸ್ಥಳೀಯ ಸಿದ್ದೇಶ್ವರ ವಿದ್ಯಾಪೀಠ ಮಕ್ಕಳಿಗಾಗಿ ತೆರೆದ ತಂಗುದಾಣದ ಸಿಬ್ಬಂದಿಗಳು ಶುಕ್ರವಾರ ಮದ್ಯಾಹ್ನ ಪೊಲೀಸ್‍ರ ಸಹಭಾಗಿತ್ವದಲ್ಲಿ ಶಾಲೆ ಬಿಟ್ಟ ಮಕ್ಕಳ ರಕ್ಷಣೆ ಹಾಗೂ ಮರಳಿ ಶಾಲೆಗೆ ಸೇರಿಸುವ ಉದ್ದೇಶದಿಂದ ಪಟ್ಟಣದಲ್ಲಿ ಜೋಪಡಿ ಹಾಕಿಕೊಂಡು ಇದ್ದ ಜೋಪಡಿಪಟ್ಟಿಗಳ ಮೇಲೆ ದಾಳಿ ನಡೆಸಿದಾಗ 5 ಜನ ಮಕ್ಕಳು ಶಾಲೆ ಇಲ್ಲದೇ ಕಟ್ಟಿಗೆ ಇನ್ನಿತರ ಕೆಲಸದಲ್ಲಿ ತೊಡಗಿಕೊಂಡಿರುವದನ್ನು ಕಂಡ ಅಧಿಕಾರಿಗಳು ಮನೆಯಲ್ಲಿದ್ದ ಒಬ್ಬರಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಕುರಿತು ಮಾಹಿತಿ ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆ ಇದು ಅಲ್ಲದೇ ಜಮೀನೊಂದರಲ್ಲಿ ಕುರಿ ಕಾಯುತ್ತಿದ್ದ 3 ಜನ ಬಾಲಕರನ್ನು ವಶಕ್ಕೆ ಪಡೆದುಕೊಂಡು ಪಾಲಕರಿಗೆ ಶಾಲೆಗೆ ಸೇರಿಸುತ್ತಿರುವ ಕುರಿತು ಮಾಹಿತಿ ಒದಗಿಸಿ ಬಂದಿದ್ದರೂ ಕೂಡಾ ಜೋಪಡಿ ಪಟ್ಟಿಯಲ್ಲಿ ವಾಸವಿದ್ದ ಪಾಲಕರು ಮನೆಗೆ ಬಂದಾಗ ಅಲ್ಲಿದ್ದವರು ಮಕ್ಕಳನ್ನು ಯಾರೋ ಬಂದು ಕರೆದುಕೊಂಡು ಹೋಗಿದ್ದಾರೆ ಶಾಲೆಗೆ ಸೇರಿಸುತ್ತೇವೆಂದು ಹೇಳಿದ್ದಾರೆಂದಾಗ ಗಾಬರಿಗೊಂಡ ಪಾಲಕರು ಮಕ್ಕಳನ್ನು ಯಾರೋ ಕರೆದುಕೊಂಡು ಹೋಗಿದ್ದಾರೆಂದು ಆಶ್ರಯ ಬಡಾವಣೆಯಲ್ಲಿದ್ದ ಶಾಲೆಗೆ ಬಂದು ವಿಚಾರಿಸಿದಾಗ ನಮ್ಮಲ್ಲಿಯ ಯಾವ ಮಕ್ಕಳನ್ನು ಕರೆದುಕೊಂಡು ಬಂದಿಲ್ಲಾವೆಂದಾಗ ಅರ್ದಗಂಟೆಯಲ್ಲಿ ಪಾಲಕರು ಹುಡುಕಾಟ ಮಕ್ಕಳನ್ನು ಯಾರೋ ಕಳ್ಳರು ಅಪಹರಿಸಿಕೊಂಡು ಹೋಗಿದ್ದಾರೆಂಬ ದಟ್ಟವಾದ ವದಂತಿ ಹಬ್ಬುತ್ತಿದ್ದಂತೆ ತಮ್ಮ ಮಕ್ಕಳು ಶಾಲೆಗೆ ಹೋಗಿದ್ದಾರೆ ಶಾಲೆಯಲ್ಲಿಯ ಮಕ್ಕಳನ್ನು ಕದ್ದಿದ್ದಾರೆಂಬ ಸುದ್ದಿ ಹಬ್ಬಿದೆ ನಮ್ಮ ಮಗು ಇದೆ ಇಲ್ಲವೋ ಎಂಬ ತಪಾಸಣೆಗೆ ಶಾಲೆಗೆ ಮುಗಿ ಬಿದ್ದು ವಿಚಾರಿಸುತ್ತಿರುವದು ಪಾಲಕರಿಗೆ ಇನ್ನಷ್ಟು ಆತಂಕಕ್ಕೆ ಕಾರಣ ವಾಯಿತು.
ಸದರಿ ಸುದ್ದಿ ಅರೀತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ಸಿದ್ದೇಶ್ವರ ವಿದ್ಯಾಪೀಠದ, ಜಿಲ್ಲಾ ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಪೊಲೀಸ್‍ರೊಂದಿಗೆ ಶಾಲೆಗೆ ಬೆಟ್ಟಿ ನೀಡಿ ಅಲ್ಲದ್ದ ಪಾಲಕರಿಗೆ ಮನವರಿಕೆ ಮಾಡಲು ಪ್ರಯತ್ನ ಪಟ್ಟರೂ ಕೂಡಾ ತಮ್ಮ ಮಕ್ಕಳನ್ನು ಪಾಲಕರಿಗೆ ಯಾವುದೇ ಮುನ್ಸೂಚನೆ ನೀಡದೇ ಹೇಗೆ ಕರೆದುಕೊಂಡು ಹೋಗಿದ್ದೀರಿ ನಿಮ್ಮ ಉದ್ದೇಶವೇನು ನಮ್ಮ ಮಕ್ಕಳನ್ನು ನಮಗೆ ಕೊಡಿ ಎಂದು ಆಕ್ರೋಶ ಬರೀತರಾಗಿ ಪಾಲಕರು ತಾಳ್ಮೆಯನ್ನು ಮೀರಿ ಮಾತನಾಡ ತೊಡಗಿದರು. ಸದರಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೊಲೀಸ್ ಠಾಣೆಗೆ ಬನ್ನಿ ನಿಮ್ಮ ಮಕ್ಕಳನ್ನು ಶರತ್ತಿನ ಮೇಲೆ ಒಪ್ಪಿಸಲಾಗುವದೆಂದು ಹೇಳಿ ಠಾಣೆಗೆ ತೆರಳಿದರು.
ಪೊಲೀಸ್ ಠಾಣೆ ಮೇಟ್ಟಿಲೇರಿದ ಪ್ರಕರ್ಣಅಧಿಕಾರಿಗಳೊಂದಿಗೆ ಪೊಲೀಸ್ ಠಾಣೆಗೆ ಬಂದ ಪಾಲಕರಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕುರಿತು ಹಾಗೂ ಮಕ್ಕಳನ್ನು ವಶಕ್ಕೆ ಪಡೆದ ಉದ್ದೇಶ ಕುರಿತು ತಿಳಿ ಹೇಳಿದರಲ್ಲದೇ ನಿಮ್ಮ ಮಕ್ಕಳನ್ನು ಯಾರೂ ಕದ್ದುಕೊಂಡು ಹೋಗಿಲ್ಲಾ ನಿಮ್ಮ ಮಕ್ಕಳು ಸಿದ್ದೇಶ್ವರ ವಿದ್ಯಾಪೀಠದಲ್ಲಿ ಊಟ ಉಪಚಾರದ ಜೊತೆಗೆ ಸುರಕ್ಷತೆಯಲ್ಲಿದ್ದಾರೆ ಅವರನ್ನು ಈಗಲೇ ಜಿಲ್ಲಾ ಕೇಂದ್ರಕ್ಕೆ ಸೇರಿಸಬೇಕಿತ್ತು ಮಕ್ಕಳ ಪಾಲಕರಿಗೆ ಮನವರಿಕೆಯ ಮೇಲೆ ಕಳುಹಿಸಬೇಕೆಂಬ ಉದ್ದೇಶದಿಂದ ಇಟ್ಟುಕೊಳ್ಳಲಾಗಿದೆ ಜಿಲ್ಲೆಯ ಮಕ್ಕಳ ರಕ್ಷಣಾ ಕೇಂದ್ರದ ಅಧಿಕಾರಿಗಳು ಸೋಮವಾರರಂದು ಸಿದ್ದೇಶ್ವರ ವಿದ್ಯಾಪೀಠಕ್ಕೆ ಬರಲಿದ್ದಾರೆ ಸದರಿ ಮಕ್ಕಳು ಈಗಾಗಲೇ ಶಾಲೆಯಲ್ಲಿ ಕಲಿಯುತ್ತಿದ್ದರೆ ವಿವರಣೆ ಪಡೆದು ಮರಳಿ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ ಇಲ್ಲದಿದ್ದರೆ ಪಾಲಕರ ಒಪ್ಪಿಗೆ ಮೇರೆಗೆ ಸುರಕ್ಷತೆಯೊಂದಿಗೆ ಸಿದ್ದೇಶ್ವರ ವಿದ್ಯಾಪೀಠದಲ್ಲಿ ಶಿಕ್ಷಣ ಊಟ ಉಪಚಾರ, ಬಟ್ಟೆ ಬರೆ ಎಲ್ಲವನ್ನು ನೀಡಿ ಅವರನ್ನು ಶಿಕ್ಷಣವಂತರನ್ನಾಗಿ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ತಿಳಿ ಹೇಳಿದರು.
ಮಕ್ಕಳನ್ನು ನಮಗೆ ಒಪ್ಪಿಸಿ ಎಂದು ಪಟ್ಟುಬಿಡದ ಪಾಲಕರುಅಧಿಕಾರಿಗಳು ಏಷ್ಟೇ ತಿಳಿ ಹೇಳಿದರೂ ಕೂಡಾ ಪಾಲಕರು ತಮ್ಮ ಹಟವನ್ನು ಬಿಡದೇ ಮಕ್ಕಳನ್ನು ನಮಗೆ ಒಪ್ಪಿಸಿ ನಾವು ಸೋಮವಾರರಂದು ನಿಮ್ಮ ಸಿದ್ದೇಶ್ವರ ವಿದ್ಯಾಪೀಠ ಶಾಲೆಗೆ ಕರೆದುಕೊಂಡು ಬರುತ್ತೇವೆ ಈಗಾಗಲೇ ನಮ್ಮ ಮಕ್ಕಳ ಬೇರೆ ಊರಲ್ಲಿ ಶಾಲೆಗೆ ಹೋಗುತ್ತಿದ್ದಾರೆಂದಾಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹಾಗೂ ಶ್ರೀ ಸಿದ್ದೇಶ್ವರ ವಿದ್ಯಾಪೀಠದ ಮುಖ್ಯಸ್ಥರು ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕುರಿತು ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಪೊಲೀಸ್‍ರ ಸಮ್ಮುಖದಲ್ಲಿ 5 ಜನ ಮಕ್ಕಳನ್ನು ಪಾಲಕರಿಗೆ ಒಪ್ಪಿಸಿದರು.
ಇನ್ನೂ 3 ಜನ ಕುರಿಕಾಯುತ್ತಿದ್ದ ಮಕ್ಕಳನ್ನು ಪಾಲಕರಿಗೆ ತಿಳಿ ಹೇಳಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲು ತಿರ್ಮಾನಿಸಿದರು.
ಈ ಸಮಯದಲ್ಲಿ ಶ್ರೀ ಸಿದ್ದೇಶ್ವರ ವಿದ್ಯಾಪೀಠ ಮಕ್ಕಳಿಗಾಗಿ ತೆರೆದ ತಂಗುದಾಣದ ಮುಖ್ಯಸ್ಥರಾದ ಅನ್ನಪೂರ್ಣಾ ಬಿರಾದಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸಂತೋಷ ಛಾಂದಕವಟೆ, ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಶಶಿಕಲಾ ಜಾಬೇನವರ, ಕಲಾವತಿ ಸುತ್ತಾರ, ಪೊಲೀಸ್ ಇಲಾಖೆಯ ಎಸ್.ಬಿ.ಬಗಲಿ, ಆಯ್.ಎಲ್.ಕುರಿಕಾಯಿ, ಪುಂಡಲಿಕ ಲಮಾಣೆ, ಸೈಫಾನ ಕುರಿ, ಮೊದಲಾದವರು ಇದ್ದರು.