ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಜಾಥಾ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ. 19 :- ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್ ತಿಳಿಸಿದರು.
ಅವರು ನಿನ್ನೆ  ಬೆಳಿಗ್ಗೆ ಪಟ್ಟಣದ ಕೋರ್ಟ್ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕೂಡ್ಲಿಗಿ ವಕೀಲರ ಸಂಘ ಮತ್ತು ತಾಲೂಕು ಪಂಚಾಯತಿ ಕೂಡ್ಲಿಗಿ  ಸಹಯೋಗದಲ್ಲಿ ಆಯೋಜಿಸಿದ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತಂತೆ ನಡೆಸಲಾದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಾಥಾವು ಪಟ್ಟಣದ ಅಂಬೇಡ್ಕರ್ ವೃತ್ತ,, ಮದಕರಿ ವೃತ್ತ ಮೂಲಕ ಸಾಗಿ ಜನ ಜಾಗೃತಿ ಮೂಡಿಸುವಲ್ಲಿ ಮುಂದಾಗಿತ್ತು ಈ ಸಂದರ್ಭದಲ್ಲಿ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಪಾಟೀಲ್, ಶಿಕ್ಷಣ ಇಲಾಖೆಯ ತಾಲೂಕು ಸಮನ್ವಯ ಅಧಿಕಾರಿ ಜಗದೀಶ ಮತ್ತು  ಸಿಬ್ಬಂದಿ ಹಾಗೂ ವಕೀಲರು  ಇತರರು ಉಪಸ್ಥಿತರಿದ್ದರು.