’ಮಕ್ಕಳ ಮಾರಾಟ ಸಾಗಾಟ ನಿಲ್ಲಲಿ’

ಮಂಗಳೂರು, ನ.೧೯- ಚೈಲ್ಡ್ ಲೈನ್ ಸೆ ದೋಸ್ತಿ ವೀಕ್‌ಉದ್ಘಾಟನಾ ಕಾರ್ಯಕ್ರಮವು ಈಗಾಗಲೇ ನೆರವೇರಿದ್ದು, ಇದರ ಅನುಸರಣಾ ಕಾರ್ಯಕ್ರಮವು, ಚೈಲ್ಡ್ ಲೈನ್‌ಸೆ ದೋಸ್ತಿ ವೀಕ್ ಅಂಗವಾಗಿ ದಿನಾಂಕ : ೧೮.೧೧.೨೦೨೦ ರಂದುs ಸಮಯ ೧೦.೩೦ ಕ್ಕೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣಾ ಕಛೇರಿಯ ಮುಂಭಾಗದಲ್ಲಿ ಕಾರ್ಯಕ್ರಮವು, ನಡೆಯಿತು. ಈ ಕಾರ್ಯಕ್ರಮ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸ್ ಆಧಿಕಾರಿಯವರು ಶ್ರೀಮತಿ ರೇವತಿಯವರು ’ಮಕ್ಕಳ ಮಾರಾಟ ಸಾಗಟ ನಿಲ್ಲಲಿ. ಜನ ಜಾಗೃತಿಯಾಗಬೇಕು.’ ಎಂದು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಯುತ ರೆನ್ನಿ ಡಿ’ಸೋಜ ಬ್ಯಾನರ್ ತೆರೆ ಎಳೆಯುವ ಮೂಲಕ ಉದ್ಘಾಟಿಸಲಾಯಿತು. ಬಾಲ ಬಿಕ್ಷಾಟನೆ, ಬಾಲ ಕಾರ್ಮಿP, ಮಾದಕ ವ್ಯಸನದ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ವಾಹನ ಧ್ವನಿ ವರ್ಧಕದ ಮೂಲಕ ಅರಿವು ಕಾರ್ಯ ಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ
ಪೊಲೀಸ್ ಇಲಾಖಾಧಿಕಾರಿಗಳು, ಕಾರ್ಮಿಕ ಇಲಾಖೆಯಿಂದ ವಿಲ್ಮ್ ಎಲಿಜಾಬತ್ತ್ ತಾವೋರ್, ,ಆರೋಗ್ಯ ಇಲಾಖೆಯಿಂದ ಶ್ರೀಮತಿ ಜ್ಯೋತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಗಟ್ರೂಡ್ ವೇಗಸ್, ಚೈಲ್ಡ್ ಲೈನ್ ನಗರನಿರ್ದೇಶಕರು ಸಿಸ್ಟರ್ ಜೂಲಿಯೆಟ್ , ಇಕನಾಮಿಕ್ ನಾರ್ಥೋಟಿಕ್ ವಿಭಾಗದ ಶ್ರೀಮತಿ ಶ್ರೀಲತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೇರೆ ಬೇರೆ ಇಲಾಖಾ ಸಿಬ್ದಂಧಿಯವರು ಹಾಗು ಸ್ವಯಂ ಸೇವಾ ಸಂಸ್ಥೆಗಳು ಈ
ಕಾರ್ಯಕ್ರಮದಲ್ಲಿ ಹಾಜರಿದ್ದರು. ಪೊಲೀಸ್ ಆಧಿಕಾರಿಯಾದ ರೋಸಮ್ಮರವರು ಸ್ವಾಗತಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಚೈಲ್ಡ್ ಲೈನ್ ರೇವತಿಯವರು ನಿರೂಪಿಸಿ, ಕಾರ್ಯಕ್ರಮದ ಧನ್ಯವಾದವನ್ನು ಸಮಾಜ ಕಾರ್ಯಕರ್ತ ವಿಭಾಗದ ವಿಧ್ಯಾರ್ಥಿ ಸೋನ್‌ಗೌಡ ವಂದಿಸಿದರು.