
ಕೋಲಾರ, ಮೇ ೯- ಕೋಲಾರ ಕ್ರೀಡಾ ಸಂಘವು ಮಕ್ಕಳ ಮಾನಸಿಕ ಮತ್ತು ಭೌದ್ದಿಕ ವಿಕಸನಕ್ಕಾಗಿ ೩೬ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಶ್ಲಾಘನೀಯವಾದುದು ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ಕೋಲಾರ ಕ್ರೀಡಾ ಸಂಘದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ೩೬ ನೇ ವರ್ಷದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ.ಇಂದಿನ ದಿನಗಳಲ್ಲಿ ಅನುಭವಿಸುತ್ತಿರುವ ಮಾನಸಿಕ ಒತ್ತಡಗಳಿಗಳಿಂದ ಹೊರಬರಲು ಇಂತಹ ತರಬೇತಿಗಳು ಸಹಕಾರಿ ಎಂದು ತಿಳಿಸಿದ ಅವರು, ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿದ್ದು, ಉತ್ತಮ ಪ್ರಯೋಗಾಲಯ, ಗ್ರಂಥಾಲಯ, ಮೈದಾನಗಳ ಸವಲತ್ತಿನ ಜೊತೆಗೆ ಅತ್ಯುನ್ನತ ಶಿಕ್ಷಣ ಪಡೆದ ಉತ್ತಮ ಭೋಧಕ ಸಿಬ್ಬಂದಿಗಳನ್ನು ಹೊಂದಿದ್ದು ಪೋಷಕರು ಇದರ ಉಪಯೋಗ ಪಡೆಯುವಂತೆ ಕರೆ ನೀಡಿದರು.
ಎಲ್ಲರ ಭೌಧಿಕ ಮತ್ತು ಮಾನಸಿಕ ವಿಕಸನಕ್ಕೆ ಫಾಲೂನ್ ದಾಫಾ ವ್ಯಾಯಾಮಗಳು ಉತ್ತಮವಾಗಿದ್ದು ಈ ಬಗ್ಗೆ ಆಸಕ್ತಿ ಇರುವಂತಹ ಮಕ್ಕಳು ಮತ್ತು ಪೋಷಕರು ಕಲಿಯಲು ಇಚ್ಚಿಸಿದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಇನ್ನೊಬ್ಬ ಮುಖ್ಯ ಅತಿಥಿ ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ಕಲ್ಲಂಡೂರು ನಾರಾಯಣಸ್ವಾಮಿ ಮಾತನಾಡಿ, ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಈ ಸಂಘವು ಮಾಡುತ್ತಿರುವ ಸಮಾಜಮುಖಿ ಕೆಲಸ ಪ್ರಶಂಸನೀಯ. ಸಂಘದ ಹೊಸ ಯೋಜನೆಯಾದ ಮಕ್ಕಳ ಬಯಲು ಗ್ರಂಥಾಲಯ ಉತ್ತಮ ಯೋಜನೆಯಾಗಿದ್ದು ಇದಕ್ಕೆ ಸಂಪೂರ್ಣವಾದ ಸಹಕಾರ ನೀಡುವುದಲ್ಲದೆ ಈ ಗ್ರಂಥಾಲಯಕ್ಕೆ ವೈಯಕ್ತಿಕವಾಗಿ ಐನೂರು ಮಕ್ಕಳ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತೇನೆ ಮತ್ತು ಸಂಘದ ಸಮಾಜಮುಖಿ ಕೆಲಸಗಳಲ್ಲಿ ಸದಾ ಜೊತೆಯಾಗಿರುತ್ತೇನೆ ಎಂದು ತಿಳಿಸಿದರು.
ಕ್ರೀಡಾ ಸಂಘದ ಹಿರಿಯ ಪೋಷಕರಲ್ಲಿ ಒಬ್ಬರಾದ ನಿಕಪೂರ್ವ ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಇದ್ದಂತೆ. ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸುತ್ತಿರು ಸಂಘದ ಕಾರ್ಯಕ್ಕೆ ಧನ್ಯವಾದ ಸಮರ್ಪಿಸಿದರು.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಸಿ.ಎನ್. ಬಾಬು, ನಗರಸಭಾ ಸದಸ್ಯ ಪ್ರವೀಣ್ ಗೌಡ, ಸಂಘದ ಚಟುವಟಿಕೆಗಳ ಸದುಪಯೋಗಕ್ಕೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಂ. ಅನಿಲ್ ಕುಮಾರ್ ವಹಿಸಿದ್ದರು. ಶಿಭಿರಾರ್ಥಿ ದೇವರಾಜ್ ಶಿಬಿರದ ಅನುಭವಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸಮಾಜ ಸೇವಕ ಕೆ.ಜಿ. ಮಂಜುನಾಥ್, ಸಂಘದ ಖಜಾಂಜಿ ಎಸ್.ಕೃಷ್ಣನ್, ಹಿರಿಯ ಸದಸ್ಯರಾದ ಬಿ.ಪಿ.ಪುಟ್ಟಸಿದ್ದಯ್ಯ, ಕೆ.ವಿ. ಮಲ್ಲಿಕಾರ್ಜುನ್, ವಿಠಲ್ ರಾವ್, ತರಬೇತುದಾರರಾದ ಕೃಷ್ಣಮೂರ್ತಿ, ಸುರೇಶ್ ಬಾಬು, ಸಂಘದ ಸದಸ್ಯರಾದ ಪವನ್, ರಾದೇಯ, ಶ್ರೀಕಾಂತ್, ಸಂಘದ ಹಿರಿಯ ಕ್ರೀಡಾಪಟುಗಳು ಮತ್ತು ಮಕ್ಕಳ ಪೋಷಕರು ಹಾಜರಿದ್ದರು. ಪಿ.ಎಸ್,ಆರ್ ಮಾಲೀಕರಾದ ಪಧ್ಮನಾಭಯ್ಯ ಶೆಟ್ಟಿ ಮತ್ತು ಸತ್ಯ ವೆಂಕಟೇಶ್ ಬಾಬು ಭಾಗವಹಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆಮಾಡಿದ್ದರು.
ಹಿರಿಯ ತರಬೇತುದಾರ ಮತ್ತು ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಪುರುಷೊತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ. ಹರೀಶ್ ಬಾಬು ಸ್ವಾಗತಿಸಿ, ಹೇಮಲ್ ಮತ್ತು ಮೇಘನಾ ಪ್ರಾರ್ಥಿಸಿ, ಚರಣ್ಯ ನಿರೂಪಿಸಿದರು.