ಮಕ್ಕಳ ಮಾನಸಿಕ ಬಲವರ್ಧನೆಗೆ ಮುಕ್ತ ವಾತಾವರಣ ಅತ್ಯವಶ್ಯ


ಧಾರವಾಡ,ಏ.21: :ಮಕ್ಕಳ ಮಾನಸಿಕ ಬಲವರ್ಧನೆಗೆ ಮುಕ್ತವಾತಾವರಣಅವಶ್ಯಕತೆಯಿದೆ. ಶಾಲೆ ಮತ್ತು ಮನೆ ಎರಡರಲ್ಲೂ ಶಿಸ್ತಿನ ಬೇಲಿ ಹಾಕುವುದರಿಂದ ಮಕ್ಕಳ ಮನಸ್ಸು ಮುದುಡುತ್ತದೆಎಂದು ನಾಡಿನಖ್ಯಾತನ ಮನೋರೋಗತಜ್ಞಡಾ.ಆನಂದ ಪಾಂಡುರಂಗಿ ಹೇಳಿದರು.
ಅವರುಚಂದ್ರಸ್ಫೂರ್ತಿ ಹಾಗೂ ರಂಗದ್ವಾರ ಕಲಾ ಸಂಸ್ಥೆಯ ಸಹಯೋಗದಲ್ಲಿರಂಗಾಯಣಆವರಣದಲ್ಲಿ ಏರ್ಪಡಿಸಿದ್ದ ‘ಮಣ್ಣಿನ ಹೆಜ್ಜೆ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದುವರೆದು ಮಾತನಾಡಿದಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತುಯುವಕರಲ್ಲಿ ಮಾನಸಿಕ ತುಮುಲತೆ ಹೆಚ್ಚಾಗುತ್ತಿರುವುದುಕಂಡು ಬರುತ್ತಿದೆ.ಇದು ಕಳವಳಕಾರಿ ಸಂಗತಿಯಾಗಿದೆ.ಮಕ್ಕಳನ್ನು ಮೊಬೈಲ್‍ರೋಗದಿಂದ ಹೊರತರಲುಇಂಥ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕುಎಂದುಅಭಿಪ್ರಾಯಪಟ್ಟರು.
ಅತಿಥಿಯಾಗಿ ಆಗಮಿಸಿದ್ದ ಅಂಕಣಕಾರ ಶ್ರೀನಿವಾಸ ವಾಡಪ್ಪಿ ಮಾತನಾಡುತ್ತಾ, ಬಾಲ್ಯವನ್ನು ಬರಡು ಮಾಡಬಾರದು.ಅದುಚೈತನ್ಯಭರಿತವಾಗಿ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹಿರಿಯರಾದ ಪಾಲಕರ ಮತ್ತು ಶಿಕ್ಷಕರ ಹಾಗೂ ಸಮಾಜದ ಮೇಲೆ ಇದೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿಕೆ.ಎಚ್.ನಾಯಕ ಮಾತನಾಡಿ, ಜಗತ್ತಿನಅತಿ ಪ್ರಮುಖ ಸಂಪನ್ಮೂಲಗಳಲ್ಲಿ ಮಾನವ ಸಂಪನ್ಮೂಲವು ಒಂದಾಗಿದೆ.ಇದನ್ನು ಮೌಲ್ಯಭರಿತವಾಗಿ ಮಾಡಲು ಮಗು ತಾಯಿಯಗರ್ಭದಲ್ಲಿಇರುವಾಗಿನಿಂದಲೇ ಸಂಸ್ಕಾರನೀಡುವಅವಶ್ಯಕತೆಯಿದೆ.ಶಾಲೆಯಲ್ಲಿ ನೂರಕ್ಕೆ ಹತ್ತರಷ್ಟುಕಲಿಕೆಯಾದರೆ ನಿಸರ್ಗದಲ್ಲಿ ನೂರಕ್ಕೆತೊಂಬತ್ತರಷ್ಟುಕಲಿಕೆಯಾಗುತ್ತದೆ.ಮಕ್ಕಳಿಗೆ ಭಯದ ಬೇಡಿ ಹಾಕದೇ ಹಾರಾಡುವರೆಕ್ಕೆ ಹಚ್ಚಬೇಕಾಗಿದೆ.ಆ ಕಾರ್ಯವನ್ನುಇಂತಹ ಶಿಬಿರಗಳು ಸಾಕಾರಗೊಳಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮಹಾದೇವ ಹಡಪದ, ಬೇಂದ್ರೆ ಪಿ.ಯು.ಕಾಲೇಜ ಪ್ರಾಚಾರ್ಯಗುರುರಾಜ ಪಾಟೀಲ ಮಾತನಾಡಿದರು.