ಮಕ್ಕಳ ಮನಸ್ಸು ಬದಲಾಯಿಸುವ ಶಕ್ತಿ ಶಿಕ್ಷಕರಲ್ಲಿದೆ :ಲಿಂಗನಗೌಡ ಮಾಲಿಪಾಟೀಲ

(ಸಂಜೆವಾಣಿ ವಾರ್ತೆ)
ಕೆಂಭಾವಿ:ಜು.2:ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಮಕ್ಕಳ ಮನಸ್ಸನ್ನು ಬದಲಾವಣೆ ಮಾಡುವ ಶಕ್ತಿ ಇರುವದು ಶಿಕ್ಷಕನಿಗೆ ಮಾತ್ರ ಎಂದು ಮಾಜಿ ಜಿಪಂ ಸದಸ್ಯ ಹಾಗೂ ಹಿರಿಯ ಮುಖಂಡ ಲಿಂಗನಗೌಡ ಮಾಲಿಪಾಟೀಲ ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಪ್ರಭಾಕರ.ಕೆ ಅವರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರನ್ನು ದೇವರೆಂದು ಪೂಜಿಸುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಮೊದಲಿನಂತೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುತ್ತಿಲ್ಲ. ಕೆಲವು ಶಿಕ್ಷಕರಿಂದ ಎಲ್ಲ ಶಿಕ್ಷಕರನ್ನು ತಪ್ಪು ದೃಷ್ಟಿಕೋನದಿಂದ ನೋಡುವಂತಾಗಿದೆ. ದೈಹಿಕ ಶಿಕ್ಷಕ ಹೇಗಿರಬೇಕೆಂದು ವೃತ್ತಿಯಲ್ಲಿ ತೋರಿಸಿದ ಪ್ರಭಾಕರ ಸರ್ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ಗಟ್ಟಿ ಧ್ವನಿ ದೈಹಿಕ ಶಿಕ್ಷಕರಿಗೆ ಮಾದರಿಯಾಗಿತ್ತು ಎಂದು ಹೇಳಿದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಪಂಡಿತ ನಿಂಬೂರೆ ಮಾತನಾಡಿ, ಹುಟ್ಟಿದ ಮನುಷ್ಯನಿಗೆ ಸಾವು ಹೇಗೆ ನಿಶ್ಚಿತವೊ ಹಾಗೆಯೆ ಪ್ರತಿಯೊಬ್ಬ ಸರಕಾರಿ ನೌಕರಿನಿಗೆ ನಿವೃತ್ತಿ ಕಡ್ಡಾಯವಾಗಿದೆ. ನಾವು ಎಷ್ಟು ವರ್ಷ ಸೇವೆ ಸಲ್ಲಿಸಿದ್ದೆವೆ ಎಂಬುದಕ್ಕಿಂತ ಹೇಗೆ ಸೇವೆ ಸಲ್ಲಿಸಿದ್ದೆವೆ ಎಂಬುದು ಮುಖ್ಯವಾಗುತ್ತದೆ. ಪ್ರಭಾಕರ ಸರ್ ಅವರ 38 ವರ್ಷಗಳ ಸೇವೆ ಅನನ್ಯವಾದುದು. ವಿದ್ಯಾರ್ಥಿಗಳ ಜೊತೆ ಶಿಕ್ಷಕರೂ ಸಹ ಇವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತಿದ್ದರು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಪ್ರಭಾಕರ ಕೆ, 38 ವರ್ಷಗಳ ಸುದೀರ್ಘ ಸೇವೆಯಲ್ಲಿ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ. ಮುಖ್ಯ ಗುರುಗಳ, ಸಹ ಶಿಕ್ಷಕರ, ವಿದ್ಯಾರ್ಥಿಗಳ ಸಹಕಾರವಂತೂ ಮರೆಯುವಂತಿಲ್ಲ. ಕೆಂಭಾವಿ ಸೇರಿದಂತೆ ಎಲ್ಲೆಡೆ ಸೇವೆ ಮಾಡುವಾಗ ಸಹಕಾರ ನೀಡಿದ ಎಲ್ಲರಿಗೂ ಅಭಾರಿಯಾಗಿದ್ದೆನೆ ಎಂದು ತಿಳಿಸಿದರು. ಶಿಕ್ಷಕ ಪ್ರಭಾಕರ.ಕೆ ಹಾಗೂ ಅವರ ಧರ್ಮಪತ್ನಿ ಲಕ್ಷಿ??ೀಬಾಯಿ ಅವರನ್ನು ಶಾಲೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯಗುರು ಅನಿಲಕುಮಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಭೀಮರಾಯಗೌಡ ಬಿರಾದಾರ ಮಾಗಣಗೇರಿ, ಸಿದ್ದರಾಯ ಜಂಗಲಗಿ, ಆದಿತ್ಯ ಪೆÇಲೀಸ್‍ಪಾಟೀಲ, ರವಿ ಸೊನ್ನದ, ಮಹಿಪಾಲರೆಡ್ಡಿ ಡಿಗ್ಗಾವಿ, ಬಸಲಿಂಗಪ್ಪಗೌಡ ಬಿರಾದಾರ, ಸಯ್ಯದ್ ಖಮರುದ್ದೀನ, ಶರಣಗೌಡ ಪಾಟೀಲ, ಲಕ್ಷ??ಣ ಬಿರಾದಾರ, ಡಾ.ಶಂಕರಗೌಡ ಮೂಲಿಮನಿ, ವಿಠ್ಠಲ ಚವ್ಹಾಣ, ಡಾ.ವಿಶ್ವನಾಥ ಬಿರಾದಾರ, ಡಾ.ಅಶ್ವಿನಿ ಸೇರಿದಂತೆ ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.
ಶಿಕ್ಷಕ ಯಮನೇಶ ಯಾಳಗಿ ನಿರೂಪಣೆ ಮಾಡಿದರು. ಶಿಕ್ಷಕ ನಿಂಗನಗೌಡ ಪರಸನಹಳ್ಳಿ ಸ್ವಾಗತಿಸಿದರು. ಶಿಕ್ಷಕ ಸುಭಾಸ ವಂದಿಸಿದರು. ಶಿಕ್ಷಕಿ ಸ್ಮಿತಾ ಪರಿಚಯ ಭಾಷಣ ಮಾಡಿದರು.