ಮಕ್ಕಳ ಮನಸ್ಸು ಅರಳಿಸಬೇಕು- ಲಿಂಗನಗೌಡ

ಸಿಂಧನೂರು.ಡಿ.೧೬-ಮಕ್ಕಳ ಮನಸ್ಸು ಅರಳಿಸುವ ಅಂಗನವಾಡಿ ಕಾರ್ಯಕರ್ತಯರಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ನೀಡುವ ಉದ್ದೆವಾಗಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗನಗೌಡ ಹೇಳಿದರು. ನಗರದ ಉಪ್ಪಾರವಾಡಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಯಚೂರು ಸಿಂಧನೂರು ಶಿಶು ಅಭಿವೃದ್ಧಿ ಯೋಜನೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩ ದಿನಗಳ ಮೂರನೇ ಹಂತದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕಿ ಯರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಮಕ್ಕಳ ಮನಸ್ಸುಗಳು ಮೊಗ್ಗುಗಳಿದಂತೆ ಅದನ್ನು ಅರಳಿಸುವ ಸಾಮರ್ಥ್ಯ ಅಂಗನವಾಡಿ ಕಾರ್ಯಕರ್ತಯರ ಕೈಯಲ್ಲಿ ಇದೆ ಆಟ, ಪಾಠ, ಕಥೆಗಳನ್ನು ಕಲಿಸಿ ಆಡಿಸಿ ಹೇಳಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರಾಗಿದೆ ಅಂಗನವಾಡಿ ಮಕ್ಕಳಿಗೆ ಕಾರ್ಯಕರ್ತಯರೆ ಗುರುಗಳಾದಾಗ ಮಾತ್ರ ಮಕ್ಕಳ ಮುಂದೆ ಗುರಿಗಳು ಇರುತ್ತವೆ ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ಕ್ರಿಯಾಶೀಲರಾಗಿ ಕೆಲಸ ಮಾಡಿ ಮಕ್ಕಳಲ್ಲಿ ಭಾವನಾತ್ಮಕ ಮನೋಭಾವನೆ ಗಳನ್ನು ಬೆಳೆಸಬೇಕು ಐ ಸಿ ಡಿ ಸಿ ಯೋಜನೆಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಬುನಾದಿ ಇದ್ದಂತೆ ಎಂದು ಎಸಿಡಿಪಿಒ ಲಿಂಗನಗೌಡ ಅಂಗನವಾಡಿ ಕಾರ್ಯಕರ್ತೆಯರಿಗೆ ಮನವರಿಕೆ ಮಾಡಿಕೊಟ್ಟರು. ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಯರಾದ ಸರಸ್ವತಿ ಜಯಶ್ರೀ ವಿದ್ಯಾವತಿ ಅಮರಮ್ಯ ಶಾರದಾ ಸಿ.ನಾಯಕ ಸವಿತಾ ಸರಿತಾ ಶಾಲಾ ಪೂರ್ವ ಶಿಕ್ಷಣ ಜಿಲ್ಲಾ ವ್ಯವಸ್ಥಾಪಕರಾದ ಶ್ರೀಶೈಲ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ತರಿದ್ದರು.
ಜವಳಗೇರಾ ಸರ್ಕಲ್ ದಡೇಸುಗುರು ಸರ್ಕಲ್ ಹಾಗೂ ಪಾಪರಾವ್ ಕ್ಯಾಂಪ್ ಸರ್ಕಲ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.