ಮಕ್ಕಳ ಮನಸ್ಸನ್ನು ಅರಿತು ಪಾಠ ಮಾಡಿ: ಚಂದ್ರಕಾಂತ್ ಹಿಳ್ಳಿ

ಯಾದಗಿರಿ:ಜ.5: ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಪದವಿಪೂರ್ವ ಹಂತದಲ್ಲಿ ನಿರ್ಮಾಣವಾಗುವುದರಿಂದ ಉಪನ್ಯಾಸಕರು ಮಕ್ಕಳ ಮನಸ್ಸನ್ನು ಅರಿತು ಪಾಠ ಮಾಡುವತ್ತ ಗಮನ ಹರಿಸಬೇಕೆಂದು ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ ನುಡಿದರು . ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯಾದಗಿರಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಯಾದಗಿರಿ ಇವರ ಸಹಯೋಗದೊಂದಿಗೆ 2020 21 ನೇ ಸಾಲಿನ ನೇಮಕಗೊಂಡಿರುವ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಇಂಡಕ್ಷನ್ ಬುನಾದಿ ತರಬೇತಿ ಕಾರ್ಯಗಾರವನ್ನು ಅಜೀಂ ಪ್ಫೌಂಡೇಶನ್ ಕಟ್ಟಡದಲ್ಲಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ವೃತ್ತಿಯನ್ನು ಕಾಪಾಡುವುದರೊಂದಿಗೆ ಶಿಸ್ತು ,ಸಂಯಮ, ಕರ್ತವ್ಯಪ್ರಜ್ಞೆಯನ್ನು ರೂಢಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಹೊಣೆಗಾರಿಕೆ ರೂಪಿಸಬೇಕಾಗಿದೆ ಎಂದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಡಯಟ್ ಪ್ರಭಾರಿ ಪ್ರಾಂಶುಪಾಲರಾದ ನಾಗರತ್ನ ಅವರು ಮಕ್ಕಳ ಸುರಕ್ಷತೆಯೆ ಇಂದಿನ ಸವಾಲಾಗಿದೆ ಈ ಕೋವಿಡ್ -19ರ ಸಂದರ್ಭದಲ್ಲಿ ಎಸ್.ಓ.ಪಿ. ನಿಯಮಗಳನ್ನು ಪಾಲಿಸುತ್ತಾ ಇ- ತಂತ್ರಜ್ಞಾನದ ತಿಳುವಳಿಕೆಯನ್ನು ಪಡೆದುಕೊಂಡು ಉಪನ್ಯಾಸಕರು ವರ್ತಮಾನದ ಅಂಶಗಳಿಗೆ ಸ್ಪಂದಿಸಬೇಕೆಂದು ನುಡಿದರು .ಕಾರ್ಯಕ್ರಮದ ನೋಡಲ್ ಅಧಿಕಾರಿ ಶೀಬಾ ಜಿಲಿಯನ್ ಮಾತನಾಡುತ್ತಾ ನೂತನವಾಗಿ ಆಯ್ಕೆಯಾದ ಉಪನ್ಯಾಸಕರಿಗೆ ಶಿಕ್ಷಣದ ಮಹತ್ವ ,ಸಾರ್ವತ್ರೀಕರಣ ಹಾಗೂ ಇಲ್ಲಿ ಇಲಾಖೆಯ ಪರಿಚಯ ತಿಳಿಸುವುದು ಮತ್ತು ವೃತ್ತಿಯಲ್ಲಿ ಅಧಿಕ ಜ್ಞಾನ ಲಭಿಸುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ ಎಂದು ಹೇಳಿದರು ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ್ ಪೂಜಾರಿ ಪ್ರಾಂಶುಪಾಲರಾದ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟರಾವ ಕುಲಕರ್ಣಿ ಶರಣಪ್ಪ ರಾಹುಲ್ ಹನುಮಂತರಾವ್ ಗೊಂಗಲೆ, ಸಿ.ಕೆ ಕುಳಗೇರಿ ಉಪಸ್ಥಿತರಿದ್ದರು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆಫೀಸ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕಿ ಶಾರದ ಕೊಡೆಕಲ್ ಪ್ರಾರ್ಥಿಸಿದರು.ಜಿಲ್ಲೆಯ ಸುಮಾರು 47 ಜನ ಉಪನ್ಯಾಸಕರು ತರಬೇತುದಾರರಾಗಿ ಭಾಗವಹಿಸಿದ್ದಾರೆ.