ಮಕ್ಕಳ ಭವಿಷ್ಯ ರೂಪಿಸುವಲ್ಲಿ ಗುರುವಿನ ಸಾಧನೆ ಅಪಾರ

ಹುಮನಾಬಾದ: ಸೆ.7:ಗುರುವಿನ ಮಾರ್ಗದರ್ಶನವಿಲ್ಲದೇ ಜೀವನದಲ್ಲಿ ಸಾಧನೆ ಅಸಾಧ್ಯ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಸಂಗಮಕ ಎಂದು ಹೇಳಿದರು. ಬಸವನಗರ ಬಡಾವಣೆಯಲ್ಲಿ ಬಸವಸೇವಾ ಪ್ರತಿಷ್ಟಾನ ಆಯೋಜಿಸಿದ ಶಿಕ್ಷಕರ ದಿನೋತ್ಸವದಲ್ಲಿ ನಿವೃತ್ತ ಹಾಗೂ ಆದರ್ಶ ಶಿಕ್ಷಕರಾದ ಕರುಣಾದೇವಿ ಸಲಗ, ಶೋಭಾ ಔರಾದೆ, ಸಾವಿತ್ರಿ ಪಾಟೀಲ್, ಜೈಯಶ್ರಿ ಕಾಳಗಿ, ಪಂಡಿತರಾವ ಕೆ.ಬಾಳೂರೆ, ಗೋರಖನಾಥ ಅವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಮಾತನಾಡಿ ವ್ಯಕ್ತಿ ದೇಶದ ಎಷ್ಟೇ ಅತ್ಯುನ್ನತ ಸ್ಥಾನಕ್ಕೆ ಬೆಳೆದರೂ ಅದಕ್ಕೆ ಗುರು ಮಾರ್ಗದರ್ಶನವೇ ಕಾರಣ. ಗುರುವನ್ನು ಗೌರವಿಸುವ ವ್ಯಕ್ತಿ ಜೀವನದಲ್ಲಿ ಯಶಸ್ವಿ ಕಾಣುವುದು ನಿಶ್ಚಿತ. ಕಾರಣ ಪ್ರತಿಯೊಬ್ಬರೂ ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ವಿಶ್ವಗುರು ಬಸವಣ್ಣವರ ಸಪ್ತಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಬದುಕು ಸಾರ್ಥಕವಾಗುತ್ತದೆ ಎಂದರು.
ಬಸವಸೇವಾ ಪ್ರತಿಷ್ಠಾನ ಮುಖ್ಯಸ್ಥ ಶರಣಬಸಪ್ಪ ಪಾರಾ, ಬಾಬುರಾವ ತುಪ್ಪದ ಮಾತನಾಡಿದರು. ಮಲ್ಲಿಕಾರ್ಜುನ ರಟಕಲ, ಈಶ್ವರ ತಡೀಳಾ, ಬಿಜಲಾವತಿ ತುಪ್ಪದ, ಸುಜಾತಾ ಮಾಶೆಟ್ಟಿ, ಶಿವಕುಮಾರ ಕಂಪ್ಲಿ, ಶಶಿಕಲಾ ರುದ್ರವಾಡಿ, ಅರವಿಂದ ಮಾಶೆಟ್ಟಿ ಮತ್ತಿತರಿದ್ದರು.