ಮಕ್ಕಳ ಬೌದ್ಧಿಕ ಸಾಮಥ್ರ್ಯ ಬೆಳವಣಿಗೆಗೆ ಶಿಕ್ಷಕರ ಹಾಗೂ ಪಾಲಕರ ಪಾತ್ರ ದೊಡ್ಡದು: ಚೂರಿ

ಸಂಜೆವಾಣಿ ವಾರ್ತೆ,
ವಿಜಯಪುರ, ಏ,3: ಮಕ್ಕಳ ಬೌದ್ಧಿಕ ಸಾಮಥ್ರ್ಯ ಬೆಳೆಸುವಲ್ಲಿ ಶಿಕ್ಷಕರ ಹಾಗು ಪಾಲಕರ ಕರ್ತವ್ಯ ಅಮೂಲ್ಯವಾದದ್ದು, ಮಕ್ಕಳಲ್ಲಿ ಕಲಿಕಾ ವಾತಾವರಣ ನಿರ್ಮಿಸುವದು ಅತ್ಯವಶ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಕನಕದಾಸ ಬಡಾವಣೆಯಲ್ಲಿ ಇರುವ ಶ್ರೀ ಸಿದ್ಧೇಶ್ವರ ಕೋಚಿಂಗ್ ಎರಡು ತಿಂಗಳ ಬೇಸಿಗೆಯ ತರ¨ಗ್ತಿ ವರ್ಗದ ಪ್ರಾರಂಭೋತ್ಸವದಲ್ಲಿ ಮಾತನಾಡಿ, ವರ್ಗದ ಕೋಣೆಯಲ್ಲಿ ಈ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವಿಶೇಷವಾದ ಗಮನ ಹರಿಸಬೇಕು. ಬೇಸಿಗೆ ಶಿಬಿರಗಳಿಂದ ವ್ಯರ್ಥವಾಗುವ ಸಮಯವನ್ನು ಸದುಪಯೋಗ ಪಡೆದುಕೊಳ್ಳಲು ಇಂತಹ ತರಬೇತಿ ಶಿಬಿರಗಳ ಅವಶ್ಯಕತೆ ಇದೆಯಂದರು.
ಸಾಹಿತಿ ಹಾಗು ಪ್ರವಚನಗಾರ್ತಿ ಸುಖದೇವಿ ಅಲಬಾಳಮಠ. ಉಪನ್ಯಾಸಕ ರಾಜಶೇಖರ ಪಾಟೀಲ, ಮಕ್ಕಳು ಜ್ಞಾನ ಪಡೆಯಲು ಅಧ್ಯಯನ ಅತ್ಯವಶ್ಯ ಎಂದರು.
ವೇದಿಕೆಯ ಮೇಲೆ ಉದ್ಯಮಿಗಳಾದ ಅಲಿಸಾಬ ಕಡಕೆ, ಅಣ್ಣುಗೌಡ ಬಿರಾದಾರ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಸುರೇಶ ಜತ್ತಿ ನಿರೂಪಿಸಿ, ವಂದಿಸಿದರು.