
ದಾವಣಗೆರೆ-ಮೇ.16; ಕೆಲವು ಪೋಷಕರಲ್ಲಿ, ಮಕ್ಕಳಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಸಾಮಾನ್ಯ ಜ್ಞಾನದ ಕೊರತೆ ಇದೆ, ಇದರಿಂದಾಗಿ ಮಕ್ಕಳ ಮುಂದಿನ ಜೀವನದ ಸಾಧನೆಗೆ ಮಾರಕವಾಗುತ್ತಿದೆ. ಮಕ್ಕಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾದರೆ ಅವರ ಎಲ್ಲಾ ಹಂತದ ಪರಿಜ್ಞಾನ ಹೆಚ್ಚುತ್ತದೆ. ಜತೆಯಲ್ಲಿ ಅವರ ಬೌದ್ಧಿಕ ಬೆಳವಣಿಗೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಲು ಇಂತಹ ಬೇಸಿಗೆ ಶಿಬಿರಗಳು ಪೂರಕವಾಗುತ್ತದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಮ್ಮ ಅನಿಸಿಕೆ ಹಂಚಿಕೊಂಡರು.ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಡಿ.ಸಿ.ಎಂ.ಶಾಖೆ ಹಾಗೂ ಡಿ.ಸಿ.ಎಂ.ಟೌನ್‌ಶಿಪ್‌ನಲ್ಲಿರುವ ಗೋಲ್ಡನ್ ಪಬ್ಲಿಕ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ “ಚಿಣ್ಣರ ಚಿಲಿಪಿಲಿ” ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದು ಅವರು ಮಾತನಾಡಿದರು. ಡಿ.ಸಿ.ಎಂ.ಟೌನ್‌ಶಿಪ್‌ನಲ್ಲಿರುವ ಗೋಲ್ಡನ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಮೇ. 1 ರಂದು ಪ್ರಾರಂಭವಾದ ಈ ಶಿಬಿರ ಇತ್ತಿಚಿಗೆ ಸಮಾರೋಪವಾಯಿತು. ಶಿಬಿರಾರ್ಥಿಗಳು ಭರತನಾಟ್ಯ, ಸಂಗೀತದೊAದಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಶಿಬಿರದ ಸಮಾರೋಪ ಸಮಾರಂಭ ಸುಸಂಪನ್ನಗೊAಡಿತು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಡಿಸಿಎಂ ಟೌನ್‌ಶಿಪ್‌ನ ನಾಗರೀಕ ಸಮಿತಿಯ ಅಧ್ಯಕ್ಷರಾದ ಕೆ.ಹಾಲಪ್ಪ, ಕಲಾಕುಂಚ ಡಿಸಿಎಂ ಶಾಖೆ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ, ಹಿರಿಯ ಯೋಗಪಟು ಡಿ.ಹೆಚ್.ಚನ್ನಬಸಪ್ಪ, ಹಿರಿಯ ಚಿತ್ರ ಕಲಾವಿದರಾದ ಚಂದ್ರಶೇಖರ್.ಎಸ್.ಸAಗ ಮಾತನಾಡಿ ಮಕ್ಕಳ ಜೊತೆಯಲ್ಲಿ ಪೋಷಕರೂ ಸಹ ನಮ್ಮ ಸಂಸ್ಕೃತಿ, ಸಂಸ್ಕಾರ, ಕನ್ನಡ ನಾಡು-ನುಡಿಯ ಪರಂಪರೆ ದಾವಣಗೆರೆಯ ಇತಿಹಾಸ, ಮಾನವೀಯ ಮೌಲ್ಯಗಳ ಅರಿವು ಮೂಡಿಸುವುದರೊಂದಿಗೆ ಪರಿವರ್ತನೆ ಆಗಬೇಕಾಗಿದೆ ಎಂದರು.ಶಿಬಿರಾರ್ಥಿಗಳು, ನಾವುಗಳು ಈ ಶಿಬಿರದಿಂದ ಯೋಗ, ಚಿತ್ರಕಲೆ, ಕನ್ನಡ ಅಕ್ಷರಾಭ್ಯಾಸ, ನಮ್ಮ ನಾಡಿನ ಎಲ್ಲೂ ಇಲ್ಲದ ದಾವಣಗೆರೆ ಇತಿಹಾಸ, ಜಾಣ ಗಣಿತ, ಜಾಣ ಒಗಟು ಸೇರಿದಂತೆ ಹೊಸ ಹೊಸ ಸಾಮಾಜಿಕ, ಆಧ್ಯಾತ್ಮ, ಸಾಂಸ್ಕೃತಿಕ ಕಾಳಜಿಯ ಎಷ್ಟೋ ವಿಷಯಗಳೊಂದಿಗೆ ನಮ್ಮ ಮನಸ್ಸು ಪರಿವರ್ತನೆಯಾಯಿತು ಎಂದು ತಮ್ಮ ತಮ್ಮ ಅನಿಸಿಕೆ ಹಂಚಿಕೊAಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಗೋಲ್ಡನ್ ಪಬ್ಲಿಕ್ ಸ್ಕೂಲ್ ಮುಖ್ಯಸ್ಥರಾದ ಶ್ರೀಮತಿ ಕುಸುಮಾ ಶಿವಕುಮಾರ್ ಮಾತನಾಡಿ, ಮಕ್ಕಳು ಈ ಶಿಬಿರಕ್ಕೆ ಅಷ್ಠೆ ಸೀಮಿತವಾಗದೇ ತಮ್ಮ ಮುಂದಿನ ಜೀವನದ ಸಾಧನೆಗೆ ಬದ್ಧತೆಯಿಂದ, ಇಚ್ಚಾಶಕ್ತಿಯಿಂದ ಕರ್ತವ್ಯ ನಿಷ್ಠೆಯಿಂದ, ಸಮಯ ಪ್ರಜ್ಞೆಯಿಂದ ಮುನ್ನೆಡೆದರೆ ಶಿಬಿರಕ್ಕೆ ಸಾರ್ಥಕೆ ಬರುತ್ತದೆ ಎಂದರು.ಶ್ರೀಮತಿ ಸುಮಾ ಏಕಾಂತಪ್ಪರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಬೇಸಿಗೆ ಶಿಬಿರದ ಸಂಚಾಲಕರಾದ ಎಂ.ಎನ್.ಮೃತ್ಯುಂಜಯ ಸ್ವಾಗತಿಸಿದರು. ಶ್ರೀಮತಿ ಶಿಲ್ಪಾರವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಡಿಸಿಎಂ ಟೌನ್‌ಶಿಪ್‌ನ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಶಿವನಪ್ಪ ವಂದಿಸಿದರು.