ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಹಿರಿದು: ಸಲೀಂ ಅಹಮದಾಬಾದ್

ಕೊಲ್ಹಾರ:ಫೆ.19: ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಹಿರಿದಾಗಿದೆ ಎಂದು ಅಮಾನತ ಬ್ಯಾಂಕಿನ ಅಧ್ಯಕ್ಷ ಸಲೀಂ ಅಹಮದಾಬಾದ ಹೇಳಿದರು. ಪಟ್ಟಣದ ಎಮ್.ಜಿ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು ವಿದ್ಯಾರ್ಥಿಗಳ ಜೀವನ ಬೆಳಗಲು ಕಲಿಕೆಯಬೇಕು ಎಂಬ ಹಂಬಲ ಇರಬೇಕು. ಮಕ್ಕಳು ಗಮನವಿಟ್ಟು ಕಲಿತು ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಅವರು ಹೇಳಿದರು.

ಮೌಲಾನಾ ಶಿರಾಜ್ ಅವರು ಮಾತನಾಡುತ್ತಾ ಹಗಲಿರುಳು ಓದುವ ಮೂಲಕ ಮಹತ್ತರವಾದದ್ದನ್ನ ಸಾಧಿಸಬಹುದು. ವಿದ್ಯಾರ್ಥಿ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೊಲ್ಹಾರ ಪಟ್ಟಣದಲ್ಲಿ ಎಮ್.ಜಿ ಶಾಲೆಯು ಇಂಗ್ಲಿಷ್ ಜೊತೆಗೆ ಧಾರ್ಮಿಕ ಶಿಕ್ಷಣಕ್ಕೂ ಪ್ರಮುಖ ಆದ್ಯತೆ ನೀಡುತ್ತಿದೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಎಲ್ಲರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿಗಳು ಹಾಗೂ ಪಟ್ಟಣದ ಗಣ್ಯಮಾನ್ಯರು ಸಹಿತ ಅನೇಕರು ಉಪಸ್ಥಿತರಿದ್ದರು