ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು

(ಸಂಜೆವಾಣಿ ವಾರ್ತೆ)
ಔರಾದ :ಜ.20: ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ, ಪಾಲಕರು ಮಕ್ಕಳಿಗೆ ಪೂರಕವಾಗಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕುಮಾರ್ ಬಿಡವೆ ಹೇಳಿದರು.
ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳನ್ನು ಯಂತ್ರಗಳೆಂದು ಭಾವಿಸದೇ ಅವರ ಮನಸ್ಥಿತಿ ಅರಿತು ನಡೆಉಕೊಳ್ಳಬೇಕು. ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಅಭ್ಯುದಯಕ್ಕೆ ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲಿ ಭಾಗಿದಾರರಾಗಿರುತ್ತಾರೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಮಹಾದೇವ ಘುಳೆ ಮಾತನಾಡಿ, ಬೋರಾಳ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಶಾಲೆಯನ್ನು 8ನೇ ತರಗತಿವರೆಗೆ ಮೇಲ್ದರ್ಜೆಗೆರಿಸಲಾಗುವುದು ಎಂದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಗೀತಾ ಸಿರಂಜೆ ಮಾತನಾಡಿ, ವಿಕಲಚೇತನರಿಗೆ ಇರುವ ಸೌಲಭ್ಯಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗಾಗಿ ಪಾಲಕರಿಂದ ಸಲಹೆಗಳು ಪಡೆಯಲಾಯಿತು.
ಎಕಲಾರ ಗ್ರಾಪಂ ಅಧ್ಯಕ್ಷ ಸಮೃತ ಪಾಟೀಲ್ ಉದ್ಘಾಟಿಸಿದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರಮೇಶ ಮಚಕೂರಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಶಿಕ್ಷಕ ಧನರಾಜ ಮುದಾಳೆ, ಗ್ರಾಪಂ ಸದಸ್ಯರಾದ ರಮೇಶ ಸೋನೆ, ಭಾಮಾ ಮಹಾದೇವ ಮಚಕೂರಿ, ಸತೀಶ ಮಜಗೆ, ರಾಜೇಂದ್ರ, ಸೌಭಾಗ್ಯವತಿ, ಪರವಿನ್‍ಬೀ ಸೇರಿದಂತೆ ಇನ್ನಿತರರಿದ್ದರು