ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಮುಖ್ಯ

ಭಾಲ್ಕಿ:ಫೆ.20:ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮುಖ್ಯವಾಗಿದೆ ಎಂದು ಎಮ್.ಆರ್.ಎ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ರಾಜೋಳೆ ಪ್ರತಿಪಾದಿಸಿದರು.
ತಾಲೂಕಿನ ಕುರುಬಖೇಳಗಿ ಗ್ರಾಮದಲ್ಲಿರುವ ಪ್ರಿಯದರ್ಶಿ ಅಶೋಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಪ್ರತಿಭೆಯ ಕೊರತೆಯಿಲ್ಲ.ಶಿಕ್ಷಕರು ಮಧ್ಯಮ ವರ್ಗದ ಮಕ್ಕಳನ್ನು ಗುರುತಿಸಿ ಅವರನ್ನ ಹೆಚ್ಚಿನ ಅಂಕಗಳೋಂದಿಗೆ ಉತ್ತೀರ್ಣರಾಗುವಂತೆ ನೋಡಿಕೊಳ್ಳಬೇಕು.
ಶಿಕ್ಷಣದಿಂದಲೇ ಮಕ್ಕಳ ಸರ್ವಾಂಗೀಣ ವಿಕಾಸವಾಗುತ್ತದೆ ಎಂದು ಹೇಳಿ , ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾದಪ್ಪ ಬಿರಾದಾರ ಅವರ ಮಾರ್ಗದರ್ಶನದಂತೆ ,ಗ್ರಾಮೀಣ ಭಾಗದಲ್ಲಿರುವ ಪ್ರಿಯದರ್ಶಿ ಅಶೋಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ರೈತಾಪಿ ಬಡಕುಟುಂಬಕ್ಕೆ ಸೇರಿದ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಹೆತ್ತವರಿಗೆ,ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದರು.
ದಾಸ ಸಾಹಿತ್ಯ ಜಿಲ್ಲಾಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ,ಬದಲಾದ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡು ಶಿಕ್ಷಕರು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಬೇಕು.ವಿದ್ಯಾರ್ಥಿಗಳು ದುಶ್ಚಟ,ದುರ್ಗುಣಗಳಿಂದ ದೂರ ಉಳಿದು ಆದರ್ಶ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಪಿಡಿಎ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾದಪ್ಪ ಬಿರಾದಾರ ಅಧ್ಯಕ್ಷತೆವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಧನ್ನೂರೆ,
ಶಿಕ್ಷಣ ಸಂಯೋಜಕರಾದ ಸಹದೇವ ಗೌಡಗಾಂವೆ,ಜೈರಾಮ ಬಿರಾದಾರ,ಎಮ್.ಜಿ.ಪ್ರೌಢಶಾಲೆಯ ಮುಖ್ಯಗುರು ಕಿರಣಕುಮಾರ,ಸಿಆರ್‍ಪಿ ಸಂತೋಷ ಧಬಾಲೆ, ಸಂಸ್ಥೆಯ ಸದಸ್ಯರುಗಳಾದ ರಾಮರಾವ ಗಾಯಗೊಂಡ,ಮನೋಹರ ಕುರ್ನೆ,ಹಿರಿಯರಾದ ದೇಶಮುಖಪ್ಪ ಸಜನೆ,ಪ್ರಾಥಮಿಕ ಶಾಲೆಯ ಮುಖ್ಯಗುರು ಸಂದೀಪ ಉಮಾಜಿ ಸೇರಿದಂತೆ ಸಿಬ್ಬಂದಿ ವರ್ಗ,ಪಾಲಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರೌಢಶಾಲೆಯ ಮುಖ್ಯಗುರು ಲಲಿತಾ ಜಾಧವ ಸ್ವಾಗತಿಸಿದರು.ಶಿಕ್ಷಕಿ ಅಲಿಕಾ ಪಾಟೀಲ ವರದಿ ವಾಚನ ಮಾಡಿದರು.ಶಿಕ್ಷಕ ಸಂದೀಪ ಕುಂಬಾರ ನಿರೂಪಿಸಿದರು.ಶಿವಶರಣಪ್ಪ ಮಠಪತಿ ವಂದಿಸಿದರು.

ಶಿಕ್ಷಣದಲ್ಲಿ ವ್ಯಾಪಾರೀಕರಣ ಸಲ್ಲದು…
“ ಉದಾರವಾಗಿ ಬಡ ಮಕ್ಕಳ ವಿಕಾಸಕ್ಕಾಗಿ ಮತ್ತು ಜ್ಞಾನಾರ್ಜನೆಗಾಗಿ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಬೇಕು.ವಿನ:ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕೆ ಅವಕಾಶ ನೀಡಬಾರದು.ಗ್ರಾಮೀಣ ಭಾಗದ ಬಡ ಕುಟುಂಬದ ಮಕ್ಕಳು ದೂರದ ಪಟ್ಟಣ ಪ್ರದೇಶದಲ್ಲಿರುವ ಶಾಲೆಗಳಲ್ಲಿ ಅಧ್ಯಯನ ಮಾಡಲು ಕಷ್ಟವಾಗುವುದನ್ನು ಅರಿತು ,ಪ್ರತಿಫಲಾಪೇಕ್ಷೆಯಿಲ್ಲದೇ ಕುರುಬಖೇಳಗಿ ಗ್ರಾಮದಲ್ಲಿ ಪಿಡಿಎ ಶಿಕ್ಷಣ ಸಂಸ್ಥೆ ಹುಟ್ಟು ಹಾಕಲಾಗಿದೆ.ಸರ್ವಸದಸ್ಯರ ಮತ್ತು ಪಾಲಕರ ಹಾಗು ಶಿಕ್ಷಕರ ಸಹಕಾರ,ಪ್ರೋತ್ಸಾಹದೊಂದಿಗೆ ಶಿಕ್ಷಣ ಸಂಸ್ಥೆ ಎತ್ತರರೆತ್ತರಕ್ಕೆ ಬೆಳೆÉಯುತ್ತಿರುವುದರಿಂದ ಖುಷಿಯಾಗುತ್ತಿದೆ.”-ಮಾದಪ್ಪ ಬಿರಾದಾರ,ಸಂಸ್ಥಾಪಕ ಅಧ್ಯಕ್ಷರು ಪಿಡಿಎ ಶಿಕ್ಷಣ ಸಂಸ್ಥೆ ಕುರುಬಖೇಳಗಿ.