ಮಕ್ಕಳ ಬೆಳವಣಿಗೆಗೆ ಪೌಷ್ಟಿಕಾಂಶವುಳ್ಳ ಆಹಾರಗಳು ಅಗತ್ಯಃ ಶ್ರೀಮಂತ ಬಸರಿಕಟ್ಟಿ

ವಿಜಯಪುರ, ಸೆ.24-ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರಗಳು ನೀಡುವುದರ ಮುಖಾಂತರ ಮಕ್ಕಳ ದೈಹಿಕ ಬೆಳವಣಿಗೆಗೆ ಶಿಕ್ಷಕರು ಮತ್ತು ಪಾಲಕರು ಸಹಾಯಕಾರಿ ಆಗಬೇಕು ಇಂದಿನ ಮಕ್ಕಳೇ ನಾಳಿನ ನಾಗರಿಕರು ಕಾರಣ ಸದೃಢ ದೇಹವುಳ್ಳ ವ್ಯಕ್ತಿ ಸದೃಢ ದೇಶವನ್ನು ಕಟ್ಟಲು ಸಹಾಯವಾಗುತ್ತದೆ ಎಂದು ನ ಸಮೂಹ ಸಂಪನ್ಮೂಲ ವ್ಯಕ್ತಿ ಮತ್ತು ಗ್ರಾಮೀಣ ವಲಯದ ಸಿ ಆರ್ ಪಿ ಸಂಘದ ಅಧ್ಯಕ್ಷರಾದ ಶ್ರೀಮಂತ ಬಸರಿಕಟ್ಟಿ ಹೇಳಿದರು.
ಸರಕಾರಿ ಮಾದರಿ ಶಾಲೆ ಬರಟಗಿಯಲ್ಲಿ ಆರೋಗ್ಯ ಭಾಗ್ಯ. ಪೆÇೀಷಣ ಅಭಿಯಾನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನ ಹರಿಸದಿರುವುದು ರಿಂದ ಮಕ್ಕಳ ಅಪೌಷ್ಟಿಕತೆ ಯಿಂದ ಬಳಲುತ್ತಿರುವುದು ಹೆಚ್ಚಾಗುತ್ತಿದೆ ಕಾರಣ ಮಕ್ಕಳಿಗೆ ಬರುವ ದಿನಗಳಲ್ಲಿ ಮಕ್ಕಳಿಗೆ ಒಳ್ಳೆಯ ಪೌಷ್ಟಿಕಾಂಶವುಳ್ಳ ಆಹಾರಗಳು ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿ.ಆರ್.ಪಿ ಯವರಾದ ಎ ಎಸ್ ಪಂಚಾಳ ಅವರು ಪೆÇೀಷಣ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪಾಟೀಲ್ ಗುರುಗಳು ನಿರೂಪಿಸಿದರು ಶ್ರೀ ಐ ಎಂ ಪಟೇಲ್ ಗುರುಗಳು ಅತಿಥಿಗಳಿಗೆ ಸ್ವಾಗತಿಸಿದರು.