ಮಕ್ಕಳ ಬುದ್ದಿಶಕ್ತಿ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಅವಶ್ಯಕ 

ದಾವಣಗೆರೆ, ಏ. 18; ಬೇಸಿಗೆ ರಜೆಯಲ್ಲಿ ಮಕ್ಕಳು ಸಮಯವನ್ನು ವ್ಯರ್ಥ ಮಾಡದೇ ಇಂತಹಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆ, ಯೋಗ ಕಲಿಸುವ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿರಿ ಎಂದು ಡಾ.ವಿವೇಕ ಬಿಡೆ ತಿಳಿಸಿದರು.ನಗರದ ಪಿ.ಜೆ.ಬಡಾವಣೆಯಲ್ಲಿರುವ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಇಂದಿನಿAದ ಆರಂಭಗೊAಡ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಬುದ್ದಿಶಕ್ತಿಯನ್ನು ಬೆಳೆಸಿಕೊಳ್ಳಿರಿ ಎಂದು ಕರೆ ನೀಡಿದರು.ಶಿಬಿರದ ಸಂಚಾಲಕರಾದ ಜಸ್ಸಿ ಮಾತನಾಡಿ, ಶಾಲೆ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿರವರ ನೇತೃತ್ವದಲ್ಲಿ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕನ್ನಡ, ಹಿಂದಿ, ಇಂಗ್ಲೀಷ್ ವ್ಯಾಕರಣ, ಕ್ಯಾಲಿಗ್ರಫಿ, ನೃತ್ಯ, ತೋಟಗಾರಿಕೆ, ಓರಿಗಾಮಿ, ವರ್ಲಿ ಚಿತ್ತಾರ, ಕಸದಿಂದ ರಸ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು